ತನ್ನ ಉತ್ಪನ್ನಗಳನ್ನು ರೋಡ್ ಶೋ ಮೂಲಕ ಪರಿಚಯ ಮಾಡಿದ ಕಿಯಾ ಮೋಟಾರ್ಸ್

Written By:

ದಕ್ಷಿಣ ಕೊರಿಯಾದ ಖ್ಯಾತ ವಾಹನ ತಯಾರಕ ಕಂಪೆನಿಯಾದ ಕಿಯಾ ಮೋಟಾರ್ಸ್ ದೇಶದಲ್ಲಿರುವ ಸಂಭಾವ್ಯ ವಿತರಕರನ್ನು ಆಕರ್ಷಿಸಲು 'ರೋಡ್ ಷೋ' ನಡೆಸುವ ಯೋಜನೆ ರೂಪಿಸಿದೆ.

To Follow DriveSpark On Facebook, Click The Like Button
ತನ್ನ ಉತ್ಪನ್ನಗಳನ್ನು ರೋಡ್ ಶೋ ಮೂಲಕ ಪರಿಚಯ ಮಾಡಿದ ಕಿಯಾ ಮೋಟಾರ್ಸ್

ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಅಂಗ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ವಾಹನ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಇದಕ್ಕೂ ಮುನ್ನ ದೇಶದ ಪ್ರಮುಖ ನಗರಗಳಲ್ಲಿ ರೋಡ್ ಶೋ ನೆಡೆಸಿ ಸಂಭಾವ್ಯ ವಿತರಕರನ್ನು ಸೆಳೆಯುವ ಯೋಜನೆ ರೂಪಿಸಿದೆ.

ತನ್ನ ಉತ್ಪನ್ನಗಳನ್ನು ರೋಡ್ ಶೋ ಮೂಲಕ ಪರಿಚಯ ಮಾಡಿದ ಕಿಯಾ ಮೋಟಾರ್ಸ್

ಪಿಕಾಂಟೊ ಹೆಸರಿನ ಹ್ಯಾಚ್ ಬ್ಯಾಕ್ ಕಾರನ್ನು ಭಾರತದಲ್ಲಿ ಕಿಯಾ ಮೋಟಾರ್ಸ್ ಬಿಡುಗಡೆಗೊಳಿಸಬಹುದು ಎಂಬ ಮಾಹಿತಿಯನ್ನು ಭಾರತದ ವೆಬ್‌ಸೈಟ್ ಒಂದು ತಿಳಿಸಿದ್ದು, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ತನ್ನ ಉತ್ಪನ್ನಗಳನ್ನು ರೋಡ್ ಶೋ ಮೂಲಕ ಪರಿಚಯ ಮಾಡಿದ ಕಿಯಾ ಮೋಟಾರ್ಸ್

ಈ ತಿಂಗಳು ಮತ್ತು ಮುಂದಿನ ತಿಂಗಳಿನಲ್ಲಿ ದೇಶದ ವಿವಿಧ ಕಡೆಗಳಲ್ಲಿ ರೋಡ್ ಷೋ ನಡೆಸುವ ಬಗ್ಗೆ ಅಧಿಕೃತ ಮಾಹಿತಿಯನ್ನು ಕಿಯಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಇದರಿಂದಾಗಿ ಹೆಚ್ಚು ಮಾರಾಟಗಾರರನ್ನು ಸೆಳೆಯುವ ಉದ್ದೇಶ ಹೊಂದಲಾಗಿದೆ.

ತನ್ನ ಉತ್ಪನ್ನಗಳನ್ನು ರೋಡ್ ಶೋ ಮೂಲಕ ಪರಿಚಯ ಮಾಡಿದ ಕಿಯಾ ಮೋಟಾರ್ಸ್

ಇಂತಹ ಪಿಕಾಂಟೊ ಹ್ಯಾಚ್ ಬ್ಯಾಕ್, ಸಿರಾಟೊ ಸೆಡಾನ್, ಸೂರೆಂಟೊ ಮತ್ತು ಸ್ಪೋರ್ಟ್‌ಏಜ್ ಎಸ್‌ಯುವಿ ಕಾರುಗಳು ಕಿಯಾ ಮೋಟರ್ಸ್ ಕಡೆಯಿಂದ ಸಾಲು ಸಾಲಾಗಿ ಬಿಡುಗಡೆಯಾಗಲಿವೆ ಎಂಬ ಮಾಹಿತಿ ಇದೆ.

ತನ್ನ ಉತ್ಪನ್ನಗಳನ್ನು ರೋಡ್ ಶೋ ಮೂಲಕ ಪರಿಚಯ ಮಾಡಿದ ಕಿಯಾ ಮೋಟಾರ್ಸ್

ಸದ್ಯ ಮುಂಚೂಣಿಯಲ್ಲಿರುವ ದೇಶಿಯ ಕಾರು ಉತ್ಪಾದನಾ ಸಂಸ್ಥೆಗಳಿಗೆ ನಡುಕು ಹುಟ್ಟಿಸಲು ಬರುತ್ತಿರುವ ಕಿಯಾ ಮೋಟಾರ್ಸ್, ಇತ್ತೀಚಿಗೆ ಜಿನಿವಾ ಮೋಟಾರು ಪ್ರದರ್ಶನದಲ್ಲಿ ಪಿಕಾಂಟೊ ಕಾರನ್ನು ಜಗತ್ತಿಗೆ ಪರಿಚಯ ಮಾಡಿದೆ. ಈ ವಿಶಿಷ್ಟ ಕಾರು ಎಲ್ಇಡಿ ಲ್ಯಾಂಪುಗಳು, ಸಿಗ್ನೇಚರ್ ಗ್ರಿಲ್ ಮತ್ತು ದೊಡ್ಡ ಏರ್ ಡ್ಯಾಮ್ ಸೌಲಭ್ಯವನ್ನು ಪಡೆದುಕೊಂಡಿದೆ.

ತನ್ನ ಉತ್ಪನ್ನಗಳನ್ನು ರೋಡ್ ಶೋ ಮೂಲಕ ಪರಿಚಯ ಮಾಡಿದ ಕಿಯಾ ಮೋಟಾರ್ಸ್

ಅಂದವಾದ ಮತ್ತು ಐಷಾರಾಮಿ ವಾಹನಗಳನ್ನು ಉತ್ಪಾದನೆ ಮಾಡುವ ಉದ್ದೇಶವನ್ನು ಕಿಯಾ ಮೋಟಾರ್ಸ್ ಹೊಂದಿದ್ದು, ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿಗೂ ತೀವ್ರ ಸ್ಪರ್ಧೆ ನೀಡಬಲ್ಲ ಕಾರು ಉತ್ಪಾದನೆ ಸಂಸ್ಥೆಯಾಗಿದೆ.

English summary
South Korean automaker Kia Motors is gearing up for its India entry by showcasing its products at 'Roadshow' to attract potential dealers in the country.
Story first published: Thursday, August 10, 2017, 11:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark