ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

Written By:

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಯ ಕಿಯಾ ಮೋಟಾರ್ಸ್ 2017ರ ಫ್ರಾಂಕ್‌ಫರ್ಟ್ ಮೋಟಾರ್ ಪ್ರದರ್ಶನಕ್ಕೂ ಮುನ್ನ ಮೊದಲ ಬಾರಿಗೆ ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದೆ.

To Follow DriveSpark On Facebook, Click The Like Button
ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಕಾರಿನ ಹೊರಭಾಗದಲ್ಲಿ ಮತ್ತು ಒಳಾಂಗಣದಲ್ಲಿ ಹೆಚ್ಚು ವಿನ್ಯಾಸ ಪಡೆದ ಮತ್ತು ಹೊಸ 8-ಸ್ಪೀಡ್ ಗೇರ್‌ಬಾಕ್ಸ್ ಟ್ರಾನ್ಸ್‌ಮಿಷನ್ ಮತ್ತು ಸಾಕಷ್ಟು ಸೂಕ್ಷ್ಮ ಬದಲಾವಣೆಗಳನ್ನು ಪಡೆದ ಸೂರೆಂಟೊ ಫೇಸ್‌ಲಿಫ್ಟ್ ಕಾರನ್ನು ಕಿಯಾ ಮೋಟಾರ್ಸ್ ಸಂಸ್ಥೆಯು ಅದ್ದೂರಿಯಾಗಿ ಅನಾವರಣಗೊಳಿಸುವ ಸೂಚನೆ ನೀಡಿದೆ.

ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ನವೀಕರಿಸಿದ ಈ ಎಸ್‌ಯುವಿ ಕಾರಿನ ಮುಂಭಾಗದ ಗ್ರಿಲ್ ಹೊಸ ವಿನ್ಯಾಸದ ಕ್ರೋಮ್ ಆಯ್ಕೆ ಪಡೆದುಕೊಂಡಿದೆ. ಈ ಕಾರಿನ ಉನ್ನತ ಶ್ರೇಣಿಯ ಜಿಟಿ ಲೈನ್ ಕಾರು ಕೆಂಪು ಬ್ರೇಕ್ ಕ್ಯಾಲಿಪರ್‌ಗಳು, ಕ್ರೋಮ್ ಹೊಗೆ ಕೊಳವೆ ಮತ್ತು ಫಾಗ್ ದೀಪಗಳನ್ನು ಪಡೆಯುತ್ತದೆ.

ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಇನ್ನು ಕಾರಿನ ಒಳಭಾಗದ ಬಗ್ಗೆ ಹೇಳುವುದಾದರೆ ಈ ಸೂರೆಂಟೊ ಫೇಸ್‌ಲಿಫ್ಟ್ ಕಾರು, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಸಹಾಯದೊಂದಿಗೆ 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಿದೆ.

ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಉನ್ನತ ಮಾದರಿಯ ಜಿಟಿ ಲೈನ್ ರೂಪಾಂತರದಲ್ಲಿ ಬೂದು ಬಣ್ಣದ ಹೊಲಿಗೆ ಹೊಂದಿರುವ ಕಪ್ಪು ಚರ್ಮದ ಸೀಟುಗಳನ್ನು ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರನ್ನು ಇರಿಸಲಾಗಿದೆ.

ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಈ ಸೂರೆಂಟೊ ಫೇಸ್‌ಲಿಫ್ಟ್ ಕಾರು ಪ್ರಸ್ತುತ 2.4-ಲೀಟರ್ ಪೆಟ್ರೋಲ್, 2-ಲೀಟರ್ ಡೀಸೆಲ್ ಮತ್ತು 2.2-ಲೀಟರ್ ಡೀಸಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ. ಪೆಟ್ರೋಲ್ ಇಂಜಿನ್ 188ರಷ್ಟು ಅಶ್ವಶಕ್ತಿ, 2 ಲೀಟರ್ ಡೀಸೆಲ್ ಮೋಟಾರ್ 185ರಷ್ಟು ಅಶ್ವಶಕ್ತಿ ಮತ್ತು 2.2 ಲೀಟರ್ ಆಯಿಲ್ ಬರ್ನರ್ ಕಾರು 200ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ಈ ಕಾರು ಸದ್ಯ 6 ಸ್ಪೀಡ್ ಆಟೊಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆಯ್ಕೆ ಪಡೆದುಕೊಂಡಿದ್ದು, ಹೊಸ ಆವೃತಿಯು 8-ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಒಳಗೊಂಡಿದೆ. ಫೋರ್ ವೀಲ್ ಡ್ರೈವ್ ಆಯ್ಕೆಯಾಗಿ ನೀಡಲಾಗಿದೆ.

ಸೂರೆಂಟೊ ಫೇಸ್‌ಲಿಫ್ಟ್ ಕಾರಿನ ಮಾಹಿತಿ ಬಹಿರಂಗಪಡಿಸಿದ ಕಿಯಾ ಮೋಟಾರ್ಸ್

ದಕ್ಷಿಣ ಕೊರಿಯಾದ ವಾಹನ ತಯಾರಕ ಕಿಯಾ ಮೋಟಾರ್ಸ್ ಭಾರತವನ್ನು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆ ಇದ್ದು, ನವೀಕೃತ ಸೂರೆಂಟೊ ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

English summary
South Korean automaker Kia has revealed the Sorento facelift ahead of its debut at the 2017 Frankfurt Motor Show.
Story first published: Monday, September 11, 2017, 13:55 [IST]
Please Wait while comments are loading...

Latest Photos