ಸೊರೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

Written By:

ಭಾರತದಲ್ಲಿ ಪ್ರಥಮ ಬಾರಿಗೆ ಲಗ್ಗೆಯಿಡಲು ಸಜ್ಜುಗೊಂಡಿರುವ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಿಯಾ ಮೋಟಾರ್ಸ್ ಸಂಸ್ಥೆಯು ಕೊರಿಯಾದಲ್ಲಿ ಸೊರೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ್ದು, ವಿನೂತನ ಮಾದರಿಯ ಎಸ್‌ಯುವಿ ಮಾಹಿತಿಗಳು ಇಲ್ಲಿದೆ.

ಸೊರೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

2014ರಲ್ಲಿ ಮೊದಲ ಬಾರಿಗೆ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟ ಕಂಡಿದ್ದ ಸೊರೆಂಟೋ ಕಾರು ಮಾದರಿಯೂ ಇದೀಗ ಫೇಸ್ ಲಿಫ್ಟ್ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡುವ ಬಗ್ಗೆ ಕಿಯಾ ಮೋಟಾರ್ಸ್ ಸುಳಿವು ನೀಡಿದೆ.

ಸೊರೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಟೈಗರ್ ನೋಸ್ ಗ್ರೀಲ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಐಸ್ ಕ್ಯೂಬ್ ಎಲ್‌ಇಡಿ ಫಾಂಗ್ ಲ್ಯಾಂಪ್‌ನೊಂದಿಗೆ ವಿಶೇಷವಾಗಿ ಅಭಿವೃದ್ಧಿ ಹೊಂದಿರುವ ಸೊರೆಂಟೋ ಫೇಸ್ ಲಿಫ್ಟ್, ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಹೊಸ ವಿನ್ಯಾಸದ ಗ್ರಾಫಿಕ್ಸ್‌ಗಳನ್ನು ಪಡೆದುಕೊಂಡಿದೆ.

ಸೊರೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಎಂಜಿನ್ ಮಾದರಿ

ಸೊರೆಂಟೋ ಫೇಸ್ ಲಿಫ್ಟ್ ಒಟ್ಟು ಮೂರು ವಿಭಾಗಗಳಲ್ಲಿ ಲಭ್ಯವಿದ್ದು, 2-ಲೀಟರ್ ಪೆಟ್ರೋಲ್ ಎಂಜಿನ್, 2-ಲೀಟರ್ ಡಿಸೇಲ್ ಎಂಜಿನ್ ಮತ್ತು 2.2-ಲೀಟರ್ ಡಿಸೇಲ್ ಮೋಟಾರ್ ಆವೃತ್ತಿಯು ಖರೀದಿಗೆ ಲಭ್ಯವಿರಲಿವೆ.

ಸೊರೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಇದಲ್ಲದೇ ಎಸ್‌ಯುವಿ ಆವೃತ್ತಿಗಳಲ್ಲೇ ಸೊರೆಂಟೋ ಫೇಸ್ ಲಿಫ್ಟ್ ಸಾಕಷ್ಟು ಬದಲಾವಣೆಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, 8-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಪಡೆದುಕೊಂಡಿವೆ.

ಸೊರೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಇನ್ನು ಸೊರೆಂಟೋ ಫೇಸ್ ಲಿಫ್ಟ್‌ನಲ್ಲಿ ಸುರಕ್ಷಾ ವಿಧಾನಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲ್‌ಕೆಎ(ಲೇನ್ ಕಿಪಿಂಗ್ ಅಸಿಸ್ಟೆನ್ಸ್), ಎಫ್‌ಸಿಎ(ಫಾರ್ವಡ್ ಕೂಲಿಷನ್ ಅಸಿಸ್ಟೆನ್ಸ್), ಬಿಸಿಡಬ್ಲ್ಯು ಮತ್ತು ಡಿಎಡಬ್ಲ್ಯು ತಂತ್ರಗಳ ವ್ಯವಸ್ಥೆಗಳನ್ನು ಇರಿಸಲಾಗಿದೆ.

ಸೊರೆಂಟೋ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಿರುವ ಸೊರೆಂಟೋ ಫೇಸ್ ಲಿಫ್ಟ್ ಮಾದರಿಯೂ 2018ರ ಇಂಡಿಯನ್ ಆಟೋ ಮೇಳದಲ್ಲಿ ಭಾಗಿಯಾಗಲಿದ್ದು, ತದನಂತರವಷ್ಟೇ ದೇಶಿಯವಾಗಿ ತನ್ನ ಕಾರ್ಯಾಚರಣೆ ನಡೆಸಲಿದೆ.

English summary
Read in Kannada about Kia Motors Introduces Sorento Facelift.
Story first published: Friday, July 21, 2017, 14:22 [IST]
Please Wait while comments are loading...

Latest Photos