ಸದ್ಯದಲ್ಲೇ ರಸ್ತೆಗಿಳಿಯಲಿವೆ ವಿನೂತನ ಕನೈಟಿಕ್ ಎಲೆಕ್ಟ್ರಿಕ್ ಆಟೋಗಳು..!!

Written By:

ಪುಣೆ ಮೂಲದ ಕನೈಟಿಕ್ ಗ್ರೀನ್ ಎರ್ನಜಿ ಅಂಡ್ ಪವರ್ ಸಲ್ಯೂಷನ್ ಲಿಮಿಡೆಟ್ ಸಂಸ್ಥೆಯು ವಿನೂತನ ಮಾದರಿಯ ಪರಿಸರ ಸ್ನೇಹಿ ಆಟೋಗಳನ್ನು ಉತ್ಪಾದನೆ ಮಾಡಿದ್ದು, ಸುಧಾರಿತ ಲಿಥಿಯಮ್ ಅಯಾನ್ ಬ್ಯಾಟರಿ ವ್ಯವಸ್ಥೆ ಹೊಂದಿದೆ.

ಕನೈಟಿಕ್ ಸಫಾರ್ ಹೆಸರಿನಲ್ಲಿ ಹೊಸ ಆಟೋ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿರುವ ಮೂರು ಚಕ್ರದ ಕನೈಟಿಕ್ ಆಟೋ ಮಾದರಿಯೂ, ಗುಣಮಟ್ಟದ ಲಿಥಿಯಮ್ ಅಯಾನ್ ಬ್ಯಾಟರಿ ವ್ಯವಸ್ಥೆ ಹೊಂದಿದೆ.

ಈ ಹಿಂದೆ ಕೆಲವು ಪ್ರಮುಖ ಸಂಸ್ಥೆಗಳಿಂದ ಅಭಿವೃದ್ಧಿಗೊಂಡಿರುವ ಆ್ಯಸಿಡ್ ಬ್ಯಾಟರಿ ಮಾದರಿಗಿಂತಲೂ ಕನೈಟಿಕ್ ಸಫಾರ್ ಅತ್ಯುತ್ತಮವಾಗಿದ್ದು, ದೀರ್ಘಕಾಲಿಕ ಬ್ಯಾಟರಿ ಬಳಕೆ ಬರಲಿದೆ.

ಪ್ರಸ್ತುತ ಮಾರುಕಟ್ಟೆಯ ಅನುಗುಣವಾಗಿ ಪರಿಸರ ಸ್ನೇಹಿ ಆಟೋ ಅಭಿವೃದ್ಧಿಗೊಳಿಸಿರುವ ಕನೈಟಿಕ್ ಸಂಸ್ಥೆಯು, ಸಾಮಾನ್ಯ ಆಟೋ ಮಾದರಿಗಳಿಂತ ರೂ.60 ಸಾವಿರ ರೂಪಾಯಿ ಹೆಚ್ಚುವರಿ ದರ ಇರಲಿದೆ ಎಂದಿದೆ.

ಇದೇ ಮೊದಲ ಬಾರಿಗೆ ಇಂತಹ ವಿಶೇಷ ಆಟೋ ಮಾದರಿ ಅಭಿವೃದ್ಧಿಗೊಂಡಿದ್ದು, ಪೈಲಟ್ ಬ್ಯಾಚ್ ಅನ್ನು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತಿದೆ.

ಕನೈಟಿಕ್ ಆಟೋ ಆವೃತ್ತಿಯಲ್ಲಿ ಲಿಥಿಯಮ್ ಅಯಾನ್ ಬ್ಯಾಟರಿ ಜೊತೆ BMS (ಬ್ಯಾಟರಿ ನಿರ್ವಹಣಾ ವ್ಯವಸ್ಥೆ) ಒದಗಿಸಲಾಗುತ್ತಿದೆ.

ಕನೈಟಿಕ್ ಸಫಾರ್ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿರುವ ಸುಲಾಜ್ ಪಿರೋಡಿಯಾ ಮೋಟ್ವಾಣಿ, ವಿಶೇಷ ಮಾದರಿಯೂ ಮುಂಬರುವ ದಿನಗಳಲ್ಲಿ ಅತೀ ಹೆಚ್ಚು ಬೇಡಿಕೆ ಸೃಷ್ಟಿಸಲಿದೆ ಎಂದಿದ್ದಾರೆ.

ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಕೇಂದ್ರ ಮೋಟಾರ್ ವೆಹಿಕಲ್ ಕಾಯ್ದೆ ಅಡಿ ವಿಶೇಷ ಆಟೋ ಅಭಿವೃದ್ಧಿಗೊಂಡಿದೆ ಎನ್ನಲಾಗಿದೆ.

ಇನ್ನು ಕನೈಟಿಕ್ ಸಫಾರ್ ಆಟೋ ಮಾದರಿಯೂ ನುರಿತ ಇಂಜಿನಿಯರ್ ತಂಡದಿಂದ ಅಭಿವೃದ್ಧಿಗೊಳಿಸಲಾಗಿದ್ದು, ಆಟೋಮೇಟಿವ್ ರಿಸರ್ಚ್ ಅಸೋಶಿಷನ್ ಆಫ್ ಇಂಡಿಯಾದಿಂದ ಮಾನ್ಯತೆ ಕೂಡಾ ಪಡೆದಿದೆ.

ಸಾಮಾನ್ಯ ಆಟೋ ಮಾದರಿಗಳಿಂತಲೂ ಹೆಚ್ಚು ಆಕರ್ಷಣಿಯವಾಗಿದ್ದು, ವಿಶೇಷ ವಿನ್ಯಾಸ ಹೊಂದಿದೆ. ಜೊತೆಗೆ ಆಟೋ ಮೇಲ್ಛಾವಣೆ ತಯಾರಿಕೆಗೆ ಉತ್ತಮ ಗುಣಮಟ್ಟದ ಸ್ಪೀಲ್ ಬಳಕೆ ಮಾಡಲಾಗಿದೆ.

ಒಟ್ಟಿನಲ್ಲಿ ಪರಿಸರ ಮಾಲಿನ್ಯ ತಡೆ ಉದ್ದೇಶ ಕನೈಟಿಕ್ ಸಂಸ್ಥೆಯು ಸಫಾರ್ ಆಟೋಗಳನ್ನು ಹೊರತರುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಸುವ ತವಕದಲ್ಲಿವೆ.

English summary
Kinetic Green Energy has launched its first electric three-wheeler, the Kinetic Safar in the Indian market.
Please Wait while comments are loading...

Latest Photos