ಚೆನ್ನೈನಲ್ಲಿ ಚಾಲಕರಹಿತ ಟ್ರ್ಯಾಕ್ಟರ್ ಪ್ರದರ್ಶನ ಮಾಡಿದ ಮಹೀಂದ್ರಾ

ಚೆನ್ನೈನಲ್ಲಿರುವ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿವೃದ್ಧಿಪಡಿಸಿರುವ ಚಾಲಕರಹಿತ ಟ್ರಾಕ್ಟರನ್ನು ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು ಪ್ರದರ್ಶನ ಮಾಡಿದೆ.

By Girish

ಚೆನ್ನೈನಲ್ಲಿರುವ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿವೃದ್ಧಿಪಡಿಸಿರುವ ಚಾಲಕರಹಿತ ಟ್ರಾಕ್ಟರನ್ನು ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು ಪ್ರದರ್ಶನ ಮಾಡಿದೆ.

ಚೆನ್ನೈನಲ್ಲಿ ಚಾಲಕ ರಹಿತ ಟ್ರ್ಯಾಕ್ಟರ್ ಪ್ರದರ್ಶನ ಮಾಡಿದ ಮಹೀಂದ್ರಾ

2018ರಲ್ಲಿ ಬಿಡುಗಡೆಯಾಗಲಿರುವ ಚಾಲಕರಹಿತ ಟ್ರಾಕ್ಟರನ್ನು ಮಹೀಂದ್ರಾ ಕಂಪನಿ ಇಂದು ಪ್ರದರ್ಶಸಿದ್ದು, ಅತ್ಯಾಧುನಿಕ ತಂತ್ರಜ್ಞಾನ ಪಡೆದುಕೊಂಡಿರುವ ಈ ಟ್ರಾಕ್ಟರನ್ನು ರೈತರೂ ಸಹ ದೂರದಿಂದ ನಿಯಂತ್ರಿಸಬಹುದು ಎಂದು ಕಂಪನಿ ತನ್ನ ಟ್ರ್ಯಾಕ್ಟರ್ ಪ್ರದರ್ಶನದ ವೇಳೆ ತಿಳಿಸಿದೆ.

ಚೆನ್ನೈನಲ್ಲಿ ಚಾಲಕ ರಹಿತ ಟ್ರ್ಯಾಕ್ಟರ್ ಪ್ರದರ್ಶನ ಮಾಡಿದ ಮಹೀಂದ್ರಾ

ಜಿಪಿಎಸ್ ತಂತ್ರಜ್ಞಾನವನ್ನು ಸಕ್ರಿಯಗೊಳಿಸುತ್ತದೆ ಮತ್ತು ಈ ಟ್ರ್ಯಾಕ್ಟರ್ ನೇರ ರೇಖೆಯ ಮೂಲಕ ಉಳುಮೆಗೆ ಸಹಾಯ ಮಾಡುವ ಸೌಲಭ್ಯವನ್ನು ಪಡೆದುಕೊಂಡಿದೆ.

ಚೆನ್ನೈನಲ್ಲಿ ಚಾಲಕ ರಹಿತ ಟ್ರ್ಯಾಕ್ಟರ್ ಪ್ರದರ್ಶನ ಮಾಡಿದ ಮಹೀಂದ್ರಾ

ಸ್ವಯಂಚಾಲಿತವಾಗಿ ಉಪಕರಣವನ್ನು ನೆಲೆಯಿಂದ ಎತ್ತಿ ಮುಂದಿನ ಸಾಲು ಬಂದ ತಕ್ಷಣ ಸಾಲಿನ ಕೊನೆಯಲ್ಲಿ ಮತ್ತೆ ಉಳುಮೆಗೆ ಸಿದ್ಧವಾಗುವ ಕಾರ್ಯತಂತ್ರ ಹೊಂದಿದೆ ಮತ್ತು ಮುಂದಿನ ಸಾಲಿನ ಕಾರ್ಯಾಚರಣೆಗಾಗಿ ಸ್ವತಃ ಸಾಧನವನ್ನು ಕಾರ್ಯಗತಗೊಳಿಸುತ್ತದೆ.

ಚೆನ್ನೈನಲ್ಲಿ ಚಾಲಕ ರಹಿತ ಟ್ರ್ಯಾಕ್ಟರ್ ಪ್ರದರ್ಶನ ಮಾಡಿದ ಮಹೀಂದ್ರಾ

ಈ ಹೊಚ್ಚ ಹೊಸ ತಂತ್ರಜ್ಞಾನ ಟ್ರ್ಯಾಕ್ಟರ್, ಚಾಲಕನ ಯಾವುದೇ ಹಸ್ತಕ್ಷೇಪವಿಲ್ಲದೆಯೇ ನಿರಂತರ ಕಾರ್ಯಾಚರಣೆ ನೆಡೆಸಿ ಮುಂದಿನ ಸಾಲಿಗೆ ಟ್ರಾಕ್ಟರ್ ಚಲಿಸುವಂತೆ ಅನುವು ಮಾಡಿಕೊಡುತ್ತದೆ.

ಚೆನ್ನೈನಲ್ಲಿ ಚಾಲಕ ರಹಿತ ಟ್ರ್ಯಾಕ್ಟರ್ ಪ್ರದರ್ಶನ ಮಾಡಿದ ಮಹೀಂದ್ರಾ

ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯವಿದ್ದರೆ ಟ್ರಾಕ್ಟರನ್ನು ಸಂಪೂರ್ಣವಾಗಿ ನಿಲ್ಲಿಸುವ ಸೌಕರ್ಯ ಸಹ ನೀಡಲಾಗಿದೆ ಮತ್ತು ಜಮೀನಿನ ಗಡಿಯನ್ನು ದಾಟದೆ ಇರುವಂತೆ ಈ ಟ್ರಾಕ್ಟರ್ ತಡೆಯುತ್ತದೆ ಹಾಗು ನಿರ್ವಾಹಕ ಟ್ರಾಕ್ಟರನ್ನು ಟ್ಯಾಬ್ಲೆಟ್ ಮೂಲಕ ದೂರದಿಂದಲೇ ನಿಯಂತ್ರಿಸಬಹುದು ಎನ್ನುವುದು ಖುಷಿಯ ವಿಚಾರವಾಗಿದೆ.

ಚೆನ್ನೈನಲ್ಲಿ ಚಾಲಕ ರಹಿತ ಟ್ರ್ಯಾಕ್ಟರ್ ಪ್ರದರ್ಶನ ಮಾಡಿದ ಮಹೀಂದ್ರಾ

ಚಾಲಕರಹಿತ ಟ್ರಾಕ್ಟರ್ ಭಾರತೀಯ ಕೃಷಿಕರಿಗೆ ವಿಶಿಷ್ಟವಾದ ಪ್ರಯೋಜನವನ್ನು ಒದಗಿಸಲಿದ್ದು, ತನ್ನ ಪ್ರತಿಸ್ಪರ್ಧಿಗಳಿಗೂ ಮುಂಚಿತವಾಗಿ ಉದ್ಯಮದಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಮಹೀಂದ್ರಾ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

Most Read Articles

Kannada
English summary
Mahindra & Mahindra showcased its first-ever driverless tractor, developed at the company's Mahindra Research Valley in Chennai. The driverless tractor from Mahindra will be launched in 2018 where farmers can control the tractors remotely.
Story first published: Tuesday, September 19, 2017, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X