ಎಲೆಕ್ಟ್ರಿಕ್ ಕಾರುಗಳ ಮೈಲೇಜ್ ಸಾಮರ್ಥ್ಯವನ್ನು ಕಡಿಮೆಗೊಳಿಸಲಿದೆ ಮಹೀಂದ್ರಾ..!!

Written By:

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಇಇಎಸ್ಎಲ್ ಸಂಸ್ಥೆಗೆ 150 ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುವ ಹೊಣೆಹೊತ್ತಿದ್ದು, ಕಡಿಮೆ ಬೆಲೆಗೆ ವಿನೂತ ಕಾರುಗಳನ್ನು ಒದಗಿಸಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರಿನ ಮೈಲೇಜ್ ಸಾಮರ್ಥ್ಯವನ್ನ ಕಡಿತಗೊಳಿಸಲಿದೆ ಮಹೀಂದ್ರಾ

ಕಳೆದ ವಾರವಷ್ಟೇ ದೆಹಲಿಯಲ್ಲಿ ಇಇಎಸ್ಎಲ್ (ಎನರ್ಜಿ ಎಫಿಶಿಯನ್ಸಿ ಸರ್ವೀಸಸ್ ಲಿಮಿಟೆಡ್) ಸಂಸ್ಥೆ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ 150 ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುವ ಟೆಂಡರ್ ಅನ್ನು ತನ್ನದಾಗಿಸಿಕೊಂಡಿರುವ ಮಹೀಂದ್ರಾ ಸಂಸ್ಥೆಯು ಕಡಿಮೆ ಬೆಲೆಗೆ ಉತ್ತಮ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುತ್ತಿದೆ.

ಎಲೆಕ್ಟ್ರಿಕ್ ಕಾರಿನ ಮೈಲೇಜ್ ಸಾಮರ್ಥ್ಯವನ್ನ ಕಡಿತಗೊಳಿಸಲಿದೆ ಮಹೀಂದ್ರಾ

ಮೊದಲ ಹಂತದಲ್ಲಿ ಒಟ್ಟು 500 ಕಾರುಗಳನ್ನು ಖರೀದಿಸಲು ಮುಂದಾಗಿರುವ ಇಇಎಸ್ಎಲ್ ಸಂಸ್ಥೆಯು ಇನ್ನುಳಿದ 350 ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸಲು ಟಾಟಾ ಸಂಸ್ಥೆಗೆ ಟೆಂಡರ್ ಒದಗಿಸಿದೆ. ಆದ್ರೆ ದರ ಪ್ರಮಾಣದಲ್ಲಿ ಟಾಟಾ ಕಾರುಗಳಿಂತ ಮಹೀಂದ್ರಾ ಕಾರುಗಳ ಬೆಲೆ ರೂ.2 ಲಕ್ಷ ಹೆಚ್ಚಿದ್ದು, ಈ ಹಿನ್ನೆಲೆ ಕಾರಿನ ಬೆಲೆ ತಗ್ಗಿಸಲು ಕೆಲವು ಬದಲಾವಣೆಗೆ ಮಹೀಂದ್ರಾ ಮಹತ್ವದ ನಿರ್ಧಾರಕ್ಕೆ ಬಂದಿದೆ.

Recommended Video - Watch Now!
2017 Mercedes New GLA India Launch Kannada - DriveSpark ಕನ್ನಡ
ಎಲೆಕ್ಟ್ರಿಕ್ ಕಾರಿನ ಮೈಲೇಜ್ ಸಾಮರ್ಥ್ಯವನ್ನ ಕಡಿತಗೊಳಿಸಲಿದೆ ಮಹೀಂದ್ರಾ

ಟಾಟಾ ಕಾರುಗಳಿಂತೂ ಅಲ್ಪ ಮಟ್ಟಿಗೆ ಹೆಚ್ಚುವರಿ ವ್ಯವಸ್ಥೆಗಳನ್ನೇ ಒದಗಿಸಲಿರುವ ಮಹೀಂದ್ರಾ ಸಂಸ್ಥೆಯು ಸದ್ಯ ವೆರಿಟೊ ಮಾದರಿಯಲ್ಲಿ ಲಭ್ಯವಿರುವ ಕೆಲವು ಸುಧಾರಿತ ತಂತ್ರಜ್ಞಾನ ಕೈಬಿಡುತ್ತಿದೆ. ಇದರಿಂದ ಮೈಲೇಜ್ ಪ್ರಮಾಣ ಕೂಡಾ ತಗ್ಗಲಿದ್ದು, ಅದು ಪ್ರತಿ ಚಾರ್ಜಿಂಗ್‌ಗೆ 140 ಕಿಮಿ ಮೈಲೇಜ್ ನೀಡಲಿವೆ ಎನ್ನವಾಗಿದೆ.

ಎಲೆಕ್ಟ್ರಿಕ್ ಕಾರಿನ ಮೈಲೇಜ್ ಸಾಮರ್ಥ್ಯವನ್ನ ಕಡಿತಗೊಳಿಸಲಿದೆ ಮಹೀಂದ್ರಾ

ಸದ್ಯ ಮಾರುಕಟ್ಟೆಯಲ್ಲಿರುವ ವೆರಿಟೊ ಮಾದರಿಗಳು ಪ್ರತಿ ಚಾರ್ಜಿಂಗ್‌ಗೆ 250ರ ವರೆಗೆ ಮೈಲೇಜ್ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಟೆಂಡರ್ ಪಡೆಯುವ ಉದ್ದೇಶದಿಂದ ಕೆಲವು ಐಷಾರಾಮಿ ವೈಶಿಷ್ಟ್ಯತೆಗಳನ್ನು ಕೈಬಿಡುತ್ತಿದೆ.

ಎಲೆಕ್ಟ್ರಿಕ್ ಕಾರಿನ ಮೈಲೇಜ್ ಸಾಮರ್ಥ್ಯವನ್ನ ಕಡಿತಗೊಳಿಸಲಿದೆ ಮಹೀಂದ್ರಾ

ಇದಕ್ಕೆ ಮುಖ್ಯ ಕಾರಣ ಮಹೀಂದ್ರಾಗೆ ಪ್ರತಿಸ್ಪರ್ಧಿಯಾಗಿರುವ ಟಾಟಾ ಮೋಟಾರ್ಸ್ ಕೂಡಾ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಮಹೀಂದ್ರಾಗಿಂತ ಕಡಿಮೆ ದರ ಉತ್ತಮ ಕಾರುಗಳನ್ನು ಒದಗಿಸುವ ಭರವಸೆ ನೀಡಿದೆ. ಹೀಗಾಗಿ ಪ್ರತಿಸ್ಫರ್ಧೆಯನ್ನು ಎದರಿಸಲು ಮಹೀಂದ್ರಾ ಇಂತದೊಂದು ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ.

ಎಲೆಕ್ಟ್ರಿಕ್ ಕಾರಿನ ಮೈಲೇಜ್ ಸಾಮರ್ಥ್ಯವನ್ನ ಕಡಿತಗೊಳಿಸಲಿದೆ ಮಹೀಂದ್ರಾ

ಇದರಿಂದ ವೆರಿಟೊ ಕಾರುಗಳ ಬೆಲೆಗಳು ತಗ್ಗಲಿದ್ದು, ಜೊತೆಗೆ ಮೈಲೇಜ್ ಪ್ರಮಾಣ ಮತ್ತು ಸುಧಾರಿತ ತಂತ್ರಜ್ಞಾನ ವೈಶಿಷ್ಟ್ಯತೆಗಳು ಕಡಿತಗೊಳ್ಳಲಿವೆ. ಒಂದು ವೇಳೆ ಇಇಎಸ್ಎಲ್ ಸಂಸ್ಥೆಯು ಮಹೀಂದ್ರಾ ಹೊಸ ಕಾರುಗಳಿಗೆ ಮಾನ್ಯತೆ ಮಾಡಿದಲ್ಲಿ ಎರಡನೇ ಹಂತದಲ್ಲಿ ಮತ್ತೆ 5 ಸಾವಿರ ಕಾರುಗಳನ್ನು ಒದಗಿಸುವ ಯೋಜನೆಯನ್ನು ಗಿಟ್ಟಿಸಿಕೊಳ್ಳುವ ನೀರಿಕ್ಷೆಯಿದೆ.

English summary
Read in Kannada about Mahindra e-Verito Driving Range To Be Reduced.
Story first published: Thursday, October 12, 2017, 18:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark