ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗಾಗಿ ಮಹೀಂದ್ರಾ ಜೊತೆಗೂಡಿದ ಫೋರ್ಡ್

Written By:

ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ಹಿನ್ನೆಲೆ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಜೊತೆಗೂಡಿರುವ ಫೋರ್ಡ್ ಸಂಸ್ಥೆಯು ಹೊಸ ಬಗೆಯ ಕಾರು ಮಾದರಿಗಳನ್ನು ಉತ್ಪಾದನೆ ಮಾಡಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗಾಗಿ ಮಹೀಂದ್ರಾ ಜೊತೆಗೂಡಿದ ಫೋರ್ಡ್

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ಮತ್ತು ಉತ್ಪಾದನೆಯಲ್ಲಿ ಯಶಸ್ವಿಯಾಗಿರುವ ಮಹೀಂದ್ರಾ ಸಂಸ್ಥೆಯು ಇನ್ಮುಂದೆ ಪ್ರತಿಷ್ಠಿತ ಫೋರ್ಡ್ ಜೊತೆಗೂಡಲಿದ್ದು, ದೇಶಿಯ ಮತ್ತು ವಿದೇಶಿ ಮಾರುಕಟ್ಟೆಗಳಿಗಾಗಿ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲಿವೆ.

ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗಾಗಿ ಮಹೀಂದ್ರಾ ಜೊತೆಗೂಡಿದ ಫೋರ್ಡ್

ಈ ಸಂಬಂಧ ಮಹೀಂದ್ರಾ ಮತ್ತು ಫೋರ್ಡ್ ಅಧಿಕೃತವಾಗಿ ಹೊಸ ಯೋಜನೆಗೆ ಸಹಿಹಾಕಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಮಹೀಂದ್ರಾ ಸಂಸ್ಥೆಯು ಫೋರ್ಡ್ ನಿರ್ಮಾಣದ ಎಲೆಕ್ಟ್ರಿಕ್ ಕಾರುಗಳ ಮಾರಾಟ ಪ್ರತಿಕ್ರಿಯೆಗೆ ಸಹಕಾರಿಯಾಗಲಿದೆ.

Recommended Video - Watch Now!
2017 Mercedes New GLA India Launch Kannada - DriveSpark ಕನ್ನಡ
ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗಾಗಿ ಮಹೀಂದ್ರಾ ಜೊತೆಗೂಡಿದ ಫೋರ್ಡ್

ಇದರೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಫೋರ್ಡ್ ಕೂಡಾ ಜನಪ್ರಿಯತೆ ಸಾಧಿಸಿದ್ದು, ಮಹೀಂದ್ರಾ ನಿರ್ಮಾಣದ ಎಲೆಕ್ಟ್ರಿಕ್ ಕಾರುಗಳ ಮಾರಾಟ ಮತ್ತು ಉತ್ಪಾದನೆಗೆ ಸಹಕರಿಸುವ ಮಹತ್ವದ ಯೋಜನೆಗೆ ಪರಸ್ಪರ ಸಮ್ಮತಿ ಸೂಚಿಸಿವೆ.

ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗಾಗಿ ಮಹೀಂದ್ರಾ ಜೊತೆಗೂಡಿದ ಫೋರ್ಡ್

ಇನ್ನು ಹೊಸ ಯೋಜನೆ ಕುರಿತು ಜಂಟಿ ಸಭೆ ನಡೆಸಿ ಮಾತನಾಡಿದ ಫೋರ್ಡ್ ಉಪಾಧ್ಯಕ್ಷ ಜಿಮ್ ಫೆರ್ಲಿ ಮತ್ತು ಮಹೀಂದ್ರಾ ವ್ಯವಸ್ಥಾಪಕ ನಿರ್ದೇಶಕ ಡಾ. ಪವನ್ ಗೋಯೆಂಕಾ, ಆಟೋ ಉದ್ಯಮವು ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆ ಫೋರ್ಡ್ ಮತ್ತು ಮಹೀಂದ್ರಾ ಒಂದಾಗುತ್ತಿರುವುದು ಮತ್ತಷ್ಟು ಬದಲಾವಣೆಗೆ ಮುನ್ನಡಿಯಾಗಿದೆ' ಎಂದಿದ್ದಾರೆ.

ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗಾಗಿ ಮಹೀಂದ್ರಾ ಜೊತೆಗೂಡಿದ ಫೋರ್ಡ್

ಹೀಗಾಗಿ ಮಹೀಂದ್ರಾ ಮತ್ತು ಫೋರ್ಡ್ ಸಹಭಾಗಿತ್ವವು ಆಟೋ ಉದ್ಯಮದಲ್ಲಿ ಭಾರೀ ಮಹತ್ವವನ್ನು ಪಡೆದುಕೊಂಡಿದ್ದು, ಸದ್ಯದಲ್ಲೇ ಫೋರ್ಡ್ ನಿರ್ಮಾಣದ ಹೊಸ ಎಲೆಕ್ಟ್ರಿಕ್ ಕಾರುಗಳು ಭಾರತೀಯ ರಸ್ತೆಗಳಿಗೆ ಲಗ್ಗೆಯಿಡಲಿವೆ ಎನ್ನಬಹುದು.

ಎಲೆಕ್ಟ್ರಿಕ್ ಕಾರು ಅಭಿವೃದ್ಧಿಗಾಗಿ ಮಹೀಂದ್ರಾ ಜೊತೆಗೂಡಿದ ಫೋರ್ಡ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದು ಭವಿಷ್ಯದ ದೃಷ್ಠಿಯಿಂದ ಅನಿವಾರ್ಯವಾಗಿದ್ದು, 2030ರ ವೇಳೆಗೆ ಎಲ್ಲಾ ಆಟೋ ಉತ್ಪಾದಕರು ಶೇ. 90ರಷ್ಟು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸುವ ತವಕದಲ್ಲಿದ್ದಾರೆ. ಇದರಿಂದ ಸಹಜವಾಗಿಯೇ ಫೋರ್ಡ್ ಮತ್ತು ಮಹೀಂದ್ರಾ ಸಹಭಾಗಿತ್ವವು ಹೊಸ ಬದಲಾವಣೆಗೆ ಕಾರಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

English summary
Read in Kannada about Mahindra & Ford Partner To Explore Electricfication And Future Technology.
Story first published: Tuesday, September 19, 2017, 14:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark