ವರ್ಷದ ಅಂತ್ಯಕ್ಕೆ ಎಲೆಕ್ಟ್ರಿಕ್ ರಿಕ್ಷಾಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ..!

Written By:

ಎಲೆಕ್ಟ್ರಿಕ್ ಕಾರು ಮತ್ತು ಬೈಕ್ ಉತ್ಪಾದನೆ ಹೆಚ್ಚುತ್ತಿದ್ದಂತೆ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಉತ್ಪಾದನೆಗೂ ವಿಶೇಷ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ವರ್ಷದ ಅಂತ್ಯಕ್ಕೆ ವಿನೂತನ ಮಾದರಿಯ ಆಟೋ ರಿಕ್ಷಾಗಳನ್ನು ಪರಿಚಯಿಸುತ್ತಿದೆ.

ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಮುಖ್ಯ ಸಾರಿಗೆ ವ್ಯವಸ್ಥೆಯಾಗಿ ಮಾರ್ಪಟ್ಟಿರುವ ಆಟೋ ರಿಕ್ಷಾ ಸೇವೆಗಳು ಇನ್ಮುಂದೆ ಮತ್ತಷ್ಟು ಹೈಟೆಕ್ ಆಗಲಿವೆ. 

ಇದಕ್ಕೆ ಕಾರಣ ಮಹೀಂದ್ರಾ ಸಂಸ್ಥೆಯು ಸಿದ್ಧಪಡಿಸುತ್ತಿರುವ ವಿಶೇಷ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಭಾರೀ ಸದ್ದು ಮಾಡುತ್ತಿವೆ.

ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಹೊಂದಿರುವ ಮಹೀಂದ್ರಾ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು, ಸದ್ಯ ಲಭ್ಯವಿರುವ ಪ್ರಮುಖ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಗಳಿವೆ.

ಬೆಂಗಳೂರಿನಲ್ಲಿರುವ ಮಹೀಂದ್ರಾ ರೇವಾ ಪ್ಲ್ಯಾಂಟ್‌ನಲ್ಲೇ ಬಹುನೀರಿಕ್ಷಿತ ಎಲೆಕ್ಟ್ರಿಕ್ ಆಟೋಗಳು ಉತ್ಪಾದನೆಗೊಳ್ಳುತ್ತಿದ್ದು, ಇದಕ್ಕಾಗಿ 600 ಕೋಟಿ ಬಂಡವಾಳ ತೊಡಗಿಸುತ್ತಿದೆ.

ಎಲೆಕ್ಟ್ರಿಕ್ ಆಟೋ ರಿಕ್ಷಾಗಳಷ್ಟೇ ಅಲ್ಲದೇ ಎಲೆಕ್ಟ್ರಿಕ್ ಬಸ್ ನಿರ್ಮಾಣಕ್ಕೂ ಬೃಹತ್ ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು, 1200 ಕೋಟಿ ಬಂಡವಾಳ ಹೂಡುವ ಮೂಲಕ ಮುಂಬರುವ ದಿನಗಳಲ್ಲಿ ವಿಶೇಷ ಬಸ್‌ಗಳನ್ನು ಬಿಡುಗಡೆ ಮಾಡಲಿದೆ.

ಇದಲ್ಲದೇ ಪುಣೆ ಬಳಿ ಮತ್ತೊಂದು ವಾಹನ ಉತ್ಪಾದನಾ ಘಟಕವನ್ನು ತೆರೆಯಲಿರುವ ಮಹೀಂದ್ರಾ, ಹೈ ಎಂಡ್ ಎಲೆಕ್ಟ್ರಿಕ್ ಕಾರು, ಬಸ್ ಮತ್ತು ಇ-ರಿಕ್ಷಾಗಳ ಉತ್ಪಾದನೆಯನ್ನು ಹೆಚ್ಚಿಸಲಿದೆ.

English summary
Read in Kannada about Mahindra To Introduce E-Rickshaws By Year End.
Story first published: Tuesday, June 20, 2017, 14:51 [IST]
Please Wait while comments are loading...

Latest Photos