ರೂ.3.45 ಲಕ್ಷಕ್ಕೆ ಮಹೀಂದ್ರಾ ಜೀಟೊ ಮಿನಿವ್ಯಾನ್ ಬಿಡುಗಡೆ

Written By:

ಮಹೀಂದ್ರಾ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಜೀಟೊ ಆವೃತ್ತಿಯಲ್ಲಿ ಇದೀಗ ಮಿನಿವ್ಯಾನ್‌ವನ್ನು ಕೂಡಾ ಪರಿಚಯಿಸಲಾಗಿದ್ದು, ಹೊಸ ಕಾರಿನ ಬೆಲೆ ರೂ.3.45 ಲಕ್ಷಕ್ಕೆ ಬಿಡುಗಡೆ ಮಾಡಲಾಗಿದೆ.

ಮಹೀಂದ್ರಾ ಮಿನಿವ್ಯಾನ್ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಲಭ್ಯವಿದ್ದು, ಸಣ್ಣ ಕಾರು ಪ್ರಿಯರಿಗೆ ಮಹೀಂದ್ರಾ ಹೊಸ ನಮೂನೆಯ ಕಾರು ಮಾದರಿಯನ್ನು ಪರಿಚಯಿಸಿದೆ.

To Follow DriveSpark On Facebook, Click The Like Button
ಮಹೀಂದ್ರಾ ಜೀಟೊ

ಪೆಟ್ರೋಲ್ ಮಾದರಿಯೂ ಸೆಮಿ ಹಾರ್ಡ್ ಡ್ರಾಫ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಗೊಂಡಿದ್ದರೆ, ಡೀಸೆಲ್ ಮಾರಿಯೂ ಸಿಎನ್‌ಜಿ ತಂತ್ರಜ್ಞಾನ ಆಧಾರದ ಮೇಲೆ ನಿರ್ಮಾಣಗೊಂಡಿವೆ.

ಜೀಟೊ ಆವೃತ್ತಿಯು 655 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 15.7 ಬಿಎಚ್‌ಪಿ ಮತ್ತು 38 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇದಲ್ಲದೇ ಮಧ್ಯಮ ಗಾತ್ರದ ಕಾರುಗಳಿಗೆ ಸ್ಪರ್ಧೆ ನೀಡುವ ಶಕ್ತಿ ಹೊಂದಿರುವ ಜೀಟೊ ಡೀಸೆಲ್ ಆವೃತ್ತಿಯೂ ಪ್ರತಿ ಲೀಟರ್‌ಗೆ 26ಕಿ.ಮಿ ಮೈಲೇಜ್ ನೀಡುತ್ತದೆ.

ಇನ್ನು ಜೀಟೊ ಬಿಡುಗಡೆ ಬಗ್ಗೆ ಮಾತನಾಡಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಆಟೋಮೇಟಿವ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರಾಜನ್ ವಾದೆರಾ, "ಜೀಟೊ ಆವೃತ್ತಿಯನ್ನು ಮಧ್ಯಮ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಲಾಗುತ್ತಿದ್ದು, ಸಣ್ಣ ಕಾರುಗಳ ವಿಭಾಗದಲ್ಲಿ ಇದೊಂದು ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮುವ ವಿಶ್ವಾಸವಿದೆ" ಎಂದಿದ್ದಾರೆ.

English summary
Read in Kannada about Mahindra Jeeto Minivan Launched In India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark