ಜಿವೊ ಸಣ್ಣ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

Written By:

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯ ತಂತ್ರಜ್ಞಾನ ಅಭಿವೃದ್ಧಿ ವಿಭಾಗ(ಎಫ್ಇಎಸ್) ಸಣ್ಣ ಗಾತ್ರದ ಜಿವೊ ಟ್ರ್ಯಾಕ್ಟರ್‌ಗಳನ್ನು ಬಿಡುಗಡೆ ಮಾಡಿದ್ದು, ತಾಂತ್ರಿಕ ವಿವರಗಳು ಇಲ್ಲಿವೆ.

ಜಿವೊ ಸಣ್ಣ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಸಣ್ಣ ಪ್ರಮಾಣದ ಕೃಷಿ ಚಟುವಟಿಕೆ ಮತ್ತು ತೋಟಗಾರಿಕೆ ಕಾರ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ಜಿವೊ ಸಣ್ಣ ಟ್ರಾಕ್ಟರ್‌ಗಳನ್ನು ಅಭಿವೃದ್ಧಿ ಮಾಡಿರುವ ಮಹೀಂದ್ರಾ ಸಂಸ್ಥೆಯು, ಫೋರ್ ವೀಲ್ಹ್ ಡ್ರೈವ್ ತಂತ್ರಜ್ಞಾನದೊಂದಿಗೆ ಜಿವೊ ಅಭಿವೃದ್ಧಿ ಮಾಡಿದೆ.

ಜಿವೊ ಸಣ್ಣ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಕರ್ನಾಟಕ ಎಕ್ಸ್‌ಶೋರಂಗಳ ಪ್ರಕಾರ ಜಿವೊ ಬೆಲೆಗಳು 4 ಲಕ್ಷಕ್ಕೆ ಲಭ್ಯವಿದ್ದು, 22-ಹೆಚ್‌ಪಿ ಮತ್ತು 24-ಹೆಚ್‌ಪಿ ಎಂಜಿನ್‌ಗಳನ್ನು ನಿಮ್ಮ ಬೇಡಿಕೆಗೆ ಅನುಗುಣವಾಗಿ ಆಯ್ಕೆ ಕೂಡಾ ಮಾಡಬಹುದಾಗಿದೆ.

ಜಿವೊ ಸಣ್ಣ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಸಣ್ಣ ಪ್ರಮಾಣದ ಕೃಷಿ ಚಟುವಟಿಕೆಗಳಿಗಾಗಿಯೇ ಜಿವೊ ಟ್ರಾಕ್ಟರ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಉತ್ತಮ ಎಂಜಿನ್ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಹೊಂದಿರುವುದು ಮತ್ತೊಂದು ವಿಶೇಷ.

ಜಿವೊ ಸಣ್ಣ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಚಾಲಕ ಅರಾಮದಾಯಕವಾಗಿ ಕುಳಿತಕೊಳ್ಳಬಹುದಾದ ಸೀಟಿನ ವಿನ್ಯಾಸಗಳು, ಸಣ್ಣ ಸ್ಟೀರಿಂಗ್ ಚಕ್ರ ವಿನ್ಯಾಸ, ಪೆಡಲ್ ಮತ್ತು ಗೇರ್ ಸೀಫ್ಟ್ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಜೋಡಣೆ ಮಾಡಲಾಗಿದೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಜಿವೊ ಸಣ್ಣ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಇದಲ್ಲದೇ ಆಟೋಮ್ಯಾಟಿಕ್ ಡೇಪ್ತ್ ಆ್ಯಂಡ್ ಡ್ರಾಫ್ಟ್ ಕಂಟ್ರೋಲ್ ವ್ಯವಸ್ಥೆ ಕೂಡಾ ಇದ್ದು, ರೆಡ್ ಮತ್ತು ಸಿಲ್ವರ್ ಶೀಟ್ ಮೇಟಲ್ ಬಣ್ಣಗಳಲ್ಲಿ ಲಭ್ಯವಿದೆ. ಜೊತೆಗೆ ಪ್ರತಿ ಗಂಟೆಗೆ 25 ಕಿಮಿ ವೇಗದಲ್ಲಿ ಜಿವೊ ಚಾಲನೆ ಮಾಡುವ ಅವಕಾಶವಿದೆ.

ಜಿವೊ ಸಣ್ಣ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮೊದಲ ಬಾರಿಗೆ ಮಹೀಂದ್ರಾ ಸಂಸ್ಥೆಯು ಸಣ್ಣ ಗಾತ್ರದ ಟ್ರಾಕ್ಟರ್ ಜಿವೊ ಬಿಡುಗಡೆ ಮಾಡುತ್ತಿದ್ದು, ತೋಟಗಾರಿಕೆ ಮತ್ತು ಸಣ್ಣ ಪ್ರಮಾಣದ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಬಲ್ಲ ವಾಣಿಜ್ಯ ವಾಹನಗಳನ್ನು ಅಭಿವೃದ್ಧಿ ಮಾಡಿರುವುದು ಗಮನಾರ್ಹ.

English summary
Read in Kannada about Mahindra Launches Jivo Small Tractor Platform.
Story first published: Saturday, August 12, 2017, 11:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark