ಬರಲಿದೆ ಮಹೀಂದ್ರಾ ಕೆಯುವಿ 100 ಕಾರಿನ ಎಲೆಕ್ಟ್ರಿಕ್ ಆವೃತ್ತಿ

Written By:

ಭಾರತದಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು ಆಕರ್ಷಕ ದರದಲ್ಲಿ ಸುಸಜ್ಜಿತ ಕೆಯುವಿ 100 ಫೇಸ್ ಲಿಫ್ಟ್ ಆವೃತ್ತಿಯನ್ನು ಪ್ರಾರಂಭಿಸಿದ್ದು, ಈ ಕಾರಿನ ಎಲೆಕ್ಟ್ರಿಕ್ ಆವೃತಿಯನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

ಬರಲಿದೆ ಮಹೀಂದ್ರಾ ಕೆಯುವಿ 100 ಕಾರಿನ ಎಲೆಕ್ಟ್ರಿಕ್ ಆವೃತಿ

ಕೆಯುವಿ 100 ಫೇಸ್ ಲಿಫ್ಟ್ ಕಾರಿನ ಉದ್ಘಾಟನಾ ಸಮಾರಂಭದಲ್ಲಿ, ಯುಟಿಲಿಟಿ ವಾಹನ ತಯಾರಕ ದೈತ್ಯ ಸಂಸ್ಥೆಯು 2018ರ ಕೊನೆಯಲ್ಲಿ ಅಥವಾ 2019ರ ಹೊತ್ತಿಗೆ ಭಾರತದಲ್ಲಿ ವಿದ್ಯುತ್ ಕೆಯುವಿ 100 ಕಾರನ್ನು ಪ್ರಾರಂಭಿಸಲಾಗುವುದು ಎಂಬ ಮಾಹಿತಿಯನ್ನು ಬಹಿರಂಗಪಡಿಸಿತ್ತು.

ಬರಲಿದೆ ಮಹೀಂದ್ರಾ ಕೆಯುವಿ 100 ಕಾರಿನ ಎಲೆಕ್ಟ್ರಿಕ್ ಆವೃತಿ

ಭವಿಷ್ಯದ ಕ್ರಾಸ್ಒವರ್ ಮತ್ತು ಎಸ್‌ಯುವಿ ಕಾರುಗಳಲ್ಲಿ ವಿದ್ಯುತ್ ಆವೃತ್ತಿಗಳನ್ನು ಕಂಪನಿಯು ಪರಿಚಯಿಸಲಿದೆ ಎಂದು ಬಿಡುಗಡೆ ಸಮಾರಂಭದಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ಹೇಳಿದರು.

ಬರಲಿದೆ ಮಹೀಂದ್ರಾ ಕೆಯುವಿ 100 ಕಾರಿನ ಎಲೆಕ್ಟ್ರಿಕ್ ಆವೃತಿ

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ, ಮಹೀಂದ್ರಾ ಎಲೆಕ್ಟ್ರಿಕ್ ಇ2ಓ ಪ್ಲಸ್ ಮತ್ತು ಪ್ರಯಾಣಿಕ ವಾಹನದ ವಿಭಾಗದಲ್ಲಿ ಇ-ವೆರಿಟೋ ಮತ್ತು ಹಗುರ ವಾಣಿಜ್ಯ ವಾಹನ (ಇ.ಸಿ.ವಿ) ವಿಭಾಗದಲ್ಲಿ ಇ-ಸುಪ್ಲೊ ವಾಹನಗಳನ್ನು ಮಹೀಂದ್ರಾ ಪ್ರಸ್ತುತಪಡಿಸುತ್ತದೆ.

ಬರಲಿದೆ ಮಹೀಂದ್ರಾ ಕೆಯುವಿ 100 ಕಾರಿನ ಎಲೆಕ್ಟ್ರಿಕ್ ಆವೃತಿ

"2030ರ ಹೊತ್ತಿಗೆ ನಾವು ಶೇಕಡಾ 20% ರಷ್ಟು ವಿದ್ಯುತ್ ವಾಹನಗಳನ್ನು ಹೊಂದಲಿವೆಯೇ ? ಎಂಬುದು ಶತಕೋಟಿ ಡಾಲರ್ ಪ್ರಶ್ನೆಯಾಗಿದೆ. ಇದೀಗ, ಮಹೀಂದ್ರಾ ಸಂಸ್ಥೆಯು ತನ್ನ ಎಲ್ಲಾ ಕ್ರಾಸ್ಒವರ್ ಮತ್ತು ಎಸ್‌ಯುವಿಗಳ ಆವೃತ್ತಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ" ಎಂದು ಪವನ್ ಗೋಯೆಂಕಾ ತಿಳಿಸಿದರು.

ಬರಲಿದೆ ಮಹೀಂದ್ರಾ ಕೆಯುವಿ 100 ಕಾರಿನ ಎಲೆಕ್ಟ್ರಿಕ್ ಆವೃತಿ

"ವಿದ್ಯುತ್ ಆವೃತಿಯ ಕೆಯುವಿ100 ಕಾರು, ಹೊಸ ವಿದ್ಯುತ್ ಪವರ್ಟ್ರೈನ್ ಪಡೆಯುತ್ತದೆ" ಎಂದು ಎಂಎಂ ಆಟೋಮೋಟಿವ್ ವಿಭಾಗದ ಅಧ್ಯಕ್ಷ ರಾಜನ್ ವಧೇರಾ ಹೇಳಿದ್ದಾರೆ. ಈ ಮೂಲಕ ಇ2ಓ ಪ್ಲಸ್‌ನಲ್ಲಿ ಅಸ್ತಿತ್ವದಲ್ಲಿರುವ ವಿದ್ಯುತ್ ಪವರ್ಟ್ರೈನ್‌ನನ್ನು ಕಂಪೆನಿಯು ಬಳಸುವುದಿಲ್ಲ ಎಂದು ಖಚಿತವಾಗಿದೆ.

ಬರಲಿದೆ ಮಹೀಂದ್ರಾ ಕೆಯುವಿ 100 ಕಾರಿನ ಎಲೆಕ್ಟ್ರಿಕ್ ಆವೃತಿ

ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು, ಹೊಸ ವಾಹನವನ್ನು ಅಭಿವೃದ್ಧಿಪಡಿಸದೆ, ಅಸ್ತಿತ್ವದಲ್ಲಿರುವ ಕಾರುಗಳನ್ನು ವಿದ್ಯುನ್ಮಾನಗೊಳಿಸುವುದರೊಂದಿಗೆ ಸರಿಯಾದ ಮಾರ್ಗದಲ್ಲಿ ನೆಡೆಯುತ್ತಿದೆ ಎನ್ನಬಹುದು. ಇದು ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.

English summary
Mahindra & Mahindra launched the facelifted version of the KUV100 at an attractive price in India. At the launch event, the home-grown utility vehicle manufacturer revealed that the electric KUV100 would be launched in India by late 2018 or early 2019.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark