ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

Written By:

ಮಹೀಂದ್ರಾ ಕಂಪನಿಯ ಸುಧಾರಿಸಲ್ಪಟ್ಟ KUV100 ಫೇಸ್‌ಲಿಫ್ಟ್ ಮಾದರಿಯ ರಹಸ್ಯ ಚಿತ್ರಗಳು ಅನಾವರಣಗೊಂಡಿದ್ದು, ಸದ್ಯದರಲ್ಲಿಯೇ ಬಿಡುಗಡೆ ಸೂಚನೆ ನೀಡಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

ಮಹೀಂದ್ರಾ ಕಂಪನಿಯ ಚಿಕ್ಕ ಯುಟಿಲಿಟಿ ವಾಹನ(ಯುವಿ) ಎಂಬ ಹೆಸರು ಪಡೆದುಕೊಂಡಿರುವ ಮಹೀಂದ್ರಾ KUV100 ಫೇಸ್ ಲಿಫ್ಟ್ ಸುಧಾರಿಸಲ್ಪಟ್ಟ ಮಾದರಿ ಮೊದಲ ಬಾರಿಗೆ ಭಾರತದಲ್ಲಿ ಪರೀಕ್ಷೆ ನೆಡೆಸುತ್ತಿದ್ದು, ಕಾರಿನ ಸ್ಪೈ ಚಿತ್ರಗಳು ಬಿಡುಗಡೆಗೊಂಡಿವೆ.

ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

ಭಾರೀ ಮರೆಮಾಚುವಿಕೆಯೊಂದಿಗೆ ಮಹೀಂದ್ರಾ ಸಂಸ್ಥೆ ತನ್ನ KUV100 ಕಾರನ್ನು ಪರೀಕ್ಷೆ ನೆಡೆಸುತ್ತಿದ್ದು, ಚಿತ್ರಗಳನ್ನು ಗಮನಿಸಿದರೆ ಈ ಕಾರಿನ ಹೊರಭಾಗವು ಹೆಚ್ಚು ನವೀಕರಣಗಳನ್ನು ಪಡೆದುಕೊಳ್ಳಲಿದೆ.

ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

ಈ ಹೊಚ್ಚ ಹೊಸ ಮಹೀಂದ್ರಾ KUV100 ಯುಟಿಲಿಟಿ ವಾಹನ(ಯುವಿ)ವು ನವೀನ ಮುಂಭಾಗದ ಬಂಪರ್, ಗ್ರಿಲ್, ಸಣ್ಣ ಲ್ಯಾಂಪುಗಳು ಮತ್ತು ಹೊಸ ಮುಂಭಾಗದ ಬಂಪರ್ ಪಡೆದುಕೊಳ್ಳಲಿದೆ.

ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

ಸುಧಾರಿಸಲ್ಪಟ್ಟ KUV100 ಕಾರು ಹೊಸ ಫಾಗ್ ಲ್ಯಾಂಪ್ ಹೌಸಿಂಗ್ ಮತ್ತು ಹೊಸ 15 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಹೊಸ ಪಿಲ್ಲರ್, ಹೆಚ್ಚು ಪರೀಕ್ಷೆಗೊಳಗಾಗಿರುವ ಟೈಲ್ ಲ್ಯಾಂಪ್‌ಗಳು ಮತ್ತು ವಿಸ್ತೃತ ಚಕ್ರ ಕಮಾನುಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

ರಹಸ್ಯ ಚಿತ್ರಗಳಲ್ಲಿ ಫೇಸ್ ಲಿಫ್ಟ್ KUV100 ಕಾರಿನ ಒಳಾಂಗಣದ ಚಿತ್ರ ಇಲ್ಲದೆ ಇರುವುದರಿಂದ ಕಾರಿನ ಬಗ್ಗೆ ಸದ್ಯಕ್ಕೆ ಯಾವುದೇ ವಿಚಾರಗಳು ತಿಳಿದುಬಂದಿಲ್ಲ, ಕೆಲವು ಸಣ್ಣ ಬದಲಾವಣೆಗಳನ್ನು ಈ ಯುವಿ ಕಾರು ಸ್ವೀಕರಿಸಲಿದೆ ಎಂದು ನಿರೀಕ್ಷಿಸಬಹುದು.

ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

ಹೊಸ KUV100 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳ್ಳಲಿದೆ. ಪೆಟ್ರೋಲ್ 1.2-ಲೀಟರ್ ಎಂಜಿನ್ ಕಾರು, 114 ಏನ್‌ಎಂ ತಿರುಗುಬಲದಲ್ಲಿ 82 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

KUV100 ಡೀಸೆಲ್ 1.2-ಲೀಟರ್ ಎಂಜಿನ್ 190 ಏನ್‌ಎಂ ತಿರುಗುಬಲದಲ್ಲಿ 77ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಇನ್ನು, ಎರಡು ಎಂಜಿನ್‌ಗಳು 5 ವೇಗದ ಮ್ಯಾನ್ಯುಯಲ್ ಗೇರ್‌ಬಾಕ್ಸ್ ಪಡೆದುಕೊಳ್ಳಲಿದೆ.

ಭಾರತದಲ್ಲಿ ಮೊದಲ ಬಾರಿಗೆ KUV100 ಫೇಸ್‌ಲಿಫ್ಟ್ ಕಾರಿನ ಪರೀಕ್ಷೆ

ಭಾರತದಲ್ಲಿ ಇತ್ತೀಚಿಗೆ ಸ್ವಯಂಚಾಲಿತ ಗೇರ್ ಬಾಕ್ಸ್ ಜನಪ್ರಿಯತೆ ಹೆಚ್ಚುತ್ತಿದ್ದು, ಬಿಡುಗಡೆಗೊಳ್ಳಲಿರುವ KUV100 ಕಾರು ಸಹ ಸ್ವಯಂಚಾಲಿತ ಗೇರ್‌ಬಾಕ್ಸ್ ಪಡೆದುಕೊಳ್ಳಲಿದೆ ಎಂದು ವಾಹನ ವಿಮರ್ಶಕರು ತಿಳಿಸಿದ್ದಾರೆ.

English summary
Mahindra KUV100 facelift spied testing in India for the first time. The company's smallest utility vehicle (UV) KUV100 facelifted model sports new fascia and other exterior updates.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark