ಭಾರತದ ಏಕೈಕ ಎಲೆಕ್ಟ್ರಿಕ್ ವಾಹನ ಕಾರು ತಯಾರಕ ಸಂಸ್ಥೆಯಾದ ಮಹೀಂದ್ರಾ, ಮಾರುಕಟ್ಟೆಯಲ್ಲಿ 3 ಬಗೆಯ ಎಲೆಕ್ಟ್ರಿಕ್ ಕಾರನ್ನು ಈಗಾಗಲೇ ಮಾರಾಟ ಮಾಡುತ್ತಿದ್ದು, ಮತ್ತೆರಡು ಕಾರುಗಳನ್ನು ಬಿಡುಗಡೆಗೊಳಿಸುವ ಸೂಚನೆ ನೀಡಿದೆ.
ಪ್ರಮುಖ ಯುಟಿಲಿಟಿ ವಾಹನ ತಯಾರಕ ಕಂಪೆನಿಯಾದ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಎರಡು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಘೋಷಿಸಿದ್ದು, ಮುಂಬರುವ 2019ರ ಮಧ್ಯದ ಹೊತ್ತಿಗೆ ಈ ವಾಹನಗಳನ್ನು ಆರಂಭಿಸಲು ಯೋಜಿಸುತ್ತಿದೆ ಎಂಬ ಮಾಹಿತಿ ನೀಡಿದೆ.
ಕಂಪನಿಯು ಹೊಸ ವಿದ್ಯುತ್ ವಾಹನಗಳ ವಿವರಗಳನ್ನು ಬಹಿರಂಗಪಡಿಸಲಿಲ್ಲದಿದ್ದರೂ ಸಹ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸದ್ಯ, ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು ಭಾರತದಲ್ಲಿ ವಿದ್ಯುತ್, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟ ಕ್ಷೇತ್ರದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದು, ಜಂಟಿ ಉದ್ಯಮಕ್ಕೆ ಕೈಹಾಕಿದೆ ಎಂಬ ವಿಚಾರವನ್ನು ಮಹೀಂದ್ರಾ ಬಹಿರಂಗಪಡಿಸಿದೆ.
"ನಾವು ಎರಡು ಮಾದರಿಯ ಎಲೆಕ್ಟ್ರಿಕ್ ಉತ್ಪನ್ನಗಳ ಮೇಲೆ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದೇವೆ, ಮುಂದಿನ ವರ್ಷ ಅಂತ್ಯದ ವೇಳೆಗೆ ಮೊದಲನೇ ಕಾರನ್ನು ಅನಾವರಣಗೊಳಿಸಲಿದ್ದೇವೆ ಮತ್ತು 2019ರ ಮಧ್ಯದ ವೇಳೆಗೆ ಎರಡನೆಯದನ್ನು ಬಿಡುಗಡೆಗೊಳಿಸಲಿದ್ದೇವೆ" ಎಂದು ಎಂ ಮತ್ತು ಎಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಗೋಯೆಂಕಾ ತಿಳಿಸಿದರು.
ಪ್ರಸ್ತುತ, ಮಹೀಂದ್ರಾ ಕಂಪನಿಯು ಭಾರತದಲ್ಲಿಯೇ ತಯಾರು ಮಾಡಿರುವ ಇ-ವೆರಿಟೊ, ಇ2ಓ ಪ್ಲಸ್, ಮತ್ತು ಇ-ಸುಪ್ರೊ ಎಂಬ ಹೆಸರಿನ ಮೂರು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ದೇಶಗಳಲ್ಲಿ ವಿಭಿನ್ನ ವಿಭಾಗಗಳಲ್ಲಿ ಸೇವೆ ನೀಡುತ್ತಿದೆ.
ಸದ್ಯ, ಕಂಪನಿಯು ತಿಂಗಳಿಗೆ 500 ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಈ ಸಂಖ್ಯೆಯನ್ನು 5000ಕ್ಕೆ ಏರಿಕೆ ಮಾಡುವ ಇರಾದೆಯನ್ನು ಮಹೀಂದ್ರಾ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಮುಂದಿನ ಎರಡು-ಮೂರು ವರ್ಷಗಳಲ್ಲಿ 600 ಕೋಟಿ ರೂ. ಹೂಡಿಕೆ ಮಾಡಲಿದೆ ಎನ್ನಲಾಗಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark