ಮಹೀಂದ್ರಾ ರೋಡ್ ಮಾಸ್ಟರ್ ಜಿ 75 ಮೋಟಾರ್ ಗ್ರೇಡರ್ ಭಾರತದಲ್ಲಿ ಬಿಡುಗಡೆ

Written By:

ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು ತನ್ನ ಮೊದಲ ಮಹೀಂದ್ರಾ ರೋಡ್ ಮಾಸ್ಟರ್ ಜಿ 75 ಮೋಟಾರ್ ಗ್ರೇಡರ್ ಪ್ರಾರಂಭಿಸುವ ಮೂಲಕ ರಸ್ತೆಯ ನಿರ್ಮಾಣ ವಿಭಾಗಕ್ಕೆ ತನ್ನ ಪ್ರವೇಶವನ್ನು ಖಾತರಿಪಡಿಸಿದೆ.

ಮಹೀಂದ್ರಾ ರೋಡ್ ಮಾಸ್ಟರ್ ಜಿ 75 ಮೋಟಾರ್ ಗ್ರೇಡರ್ ಭಾರತದಲ್ಲಿ ಬಿಡುಗಡೆ

ರಸ್ತೆ ಗುತ್ತಿಗೆದಾರರಿಗೆ ಜಿ75 ಮೋಟಾರ್ ಗ್ರೇಡರ್ ವಾಹನವು ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ಈ ಮೋಟಾರ್ ಗ್ರೇಡರ್‌ನಿಂದಾಗಿ ಹರಡುವ ಮತ್ತು ವರ್ಗೀಕರಿಸುವ ಕಾರ್ಯವನ್ನು ಅತ್ಯುತ್ತಮ ನಿರ್ವಹಿಸಬಹುದು ಎಂದು ಕಂಪನಿ ಬಿಡುಗಡೆಯ ಸಮಯದಲ್ಲಿ ಹೇಳಿಕೆ ನೀಡಿದೆ.

ಮಹೀಂದ್ರಾ ರೋಡ್ ಮಾಸ್ಟರ್ ಜಿ 75 ಮೋಟಾರ್ ಗ್ರೇಡರ್ ಭಾರತದಲ್ಲಿ ಬಿಡುಗಡೆ

ಮಹೀಂದ್ರಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ 79 ಎಚ್‌ಪಿ DiTEC ಎಂಜಿನ್ ಅಳವಡಿಕೆಯೊಂದಿಗೆ ಈ ಬಲಿಷ್ಠ ಮೋಟಾರ್ ಗ್ರೇಡರ್ ಬಿಡುಗಡೆಯಾಗಿದ್ದು, 3 ಮೀಟರ್(10 ಅಡಿ) ಅಗಲವಾದ ಬ್ಲೇಡ್‌ನೊಂದಿಗೆ ಒಳಗೊಂಡಿರಲಿದೆ.

ಮಹೀಂದ್ರಾ ರೋಡ್ ಮಾಸ್ಟರ್ ಜಿ 75 ಮೋಟಾರ್ ಗ್ರೇಡರ್ ಭಾರತದಲ್ಲಿ ಬಿಡುಗಡೆ

ಎಲ್ಲಾ ರೀತಿಯ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ವಿಚಾರಗಳಲ್ಲಿ ಈ ಮೋಟಾರ್ ಗ್ರೇಡರ್‌ ಮೌಲ್ಯೀಕರಿಸಲ್ಪಟ್ಟಿದೆ ಮತ್ತು ರಾಷ್ಟ್ರದ ಉದ್ದಗಲಕ್ಕೂ ಇರುವಂತಹ ಮಹೀಂದ್ರಾದ ಮಾರಾಟ ಮತ್ತು ಸೇವಾ ನೆಟ್ವರ್ಕ್ ಬೆಂಬಲ ಪಡೆದುಕೊಂಡಿದೆ.

ಮಹೀಂದ್ರಾ ರೋಡ್ ಮಾಸ್ಟರ್ ಜಿ 75 ಮೋಟಾರ್ ಗ್ರೇಡರ್ ಭಾರತದಲ್ಲಿ ಬಿಡುಗಡೆ

ಸಾಂಪ್ರದಾಯಿಕ ಮೋಟಾರ್ ಗ್ರೇಡರ್‌ಗಳಿಗೆ ಹೋಲಿಸಿದರೆ, ಈ ಗ್ರೇಡರ್ ಶೇಕಡಾ 33% ಅಧಿಕ ಕಾರ್ಯಕ್ಷಮತೆ ಹೊಂದಿದ್ದು, ಕಠಿಣವಾದ ಭೂಪ್ರದೇಶದಲ್ಲಿ ಸರಿಸುಮಾರು 6,000 ಗಂಟೆಗಳ ಕಾಲ ಜಿ75 ಪರೀಕ್ಷೆಗೊಳಪಟ್ಟಿರುವುದನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಮಹೀಂದ್ರಾ ರೋಡ್ ಮಾಸ್ಟರ್ ಜಿ 75 ಮೋಟಾರ್ ಗ್ರೇಡರ್ ಭಾರತದಲ್ಲಿ ಬಿಡುಗಡೆ

"ಮಹೀಂದ್ರಾ ಕಂಪನಿಯ ದೃಷ್ಟಿಕೋನಕ್ಕೆ ಅನುಗುಣವಾಗಿ ನಮ್ಮ ಗ್ರಾಹಕರಿಗೆ ಬಗೆಬಗೆಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಒದಗಿಸಲಿದೆ. ಇದರಂತೆ, ಇಂದು ನಾವು ಮಹೀಂದ್ರಾ ರೋಡ್ ಮಾಸ್ಟರ್ ಜಿ 75 ಮೋಟರ್ ಗ್ರೇಡರ್ ಪ್ರಾರಂಭದೊಂದಿಗೆ ವೇಗವಾಗಿ ಬೆಳೆಯುತ್ತಿರುವ ರಸ್ತೆ ನಿರ್ಮಾಣ ಸಾಧನ ವಿಭಾಗಕ್ಕೆ ಪ್ರವೇಶಿಸಿದ್ದೇವೆ" ಎಂದು ಮಹೀಂದ್ರಾ & ಮಹೀಂದ್ರಾದ ಆಟೋಮೋಟಿವ್ ಸೆಕ್ಟರ್ ಅಧ್ಯಕ್ಷರಾದ ರಾಜನ್ ವಧೇರಾ ಹೇಳಿದರು.

English summary
Mahindra & Mahindra has announced its foray into the road construction segment with the launch of its first Motor Grader, the Mahindra RoadMaster G75.
Story first published: Wednesday, October 4, 2017, 11:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark