ಬಿಡುಗಡೆಗೂ ಮುನ್ನ ಕುತೂಹಲ ಹೆಚ್ಚಿಸುತ್ತಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಕಾರು

ಎಸ್‌ಯುವಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಪ್ಲಸ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆ, ತಾಂತ್ರಿಕ ಅಂಶಗಳ ಕೈಪಿಡಿ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

By Praveen

ಎಸ್‌ಯುವಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಪ್ಲಸ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆ ಹಾಗೂ ತಾಂತ್ರಿಕ ಅಂಶಗಳ ಕೈಪಿಡಿ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಬಿಡುಗಡೆಗೂ ಮುನ್ನ ಕುತೂಹಲ ಹೆಚ್ಚಿಸುತ್ತಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಕಾರು

ಎಸ್‍‌ಯುವಿ ಪ್ರಿಯರಿಗಾಗಿ ಐದು ಹೊಸ ಕಾರು ಮಾದರಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಸರಣಿಯ ಮುಂದುವರಿದ ಭಾಗವನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.9.46 ಲಕ್ಷಕ್ಕೆ ನಿಗದಿ ಮಾಡಿದೆ.

ಬಿಡುಗಡೆಗೂ ಮುನ್ನ ಕುತೂಹಲ ಹೆಚ್ಚಿಸುತ್ತಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಕಾರು

ಈ ಸಂಬಂಧ ಹೊಸ ಕಾರಿನ ಬೆಲೆಗಳ ಕುರಿತಾದ ಕೈಪಿಡಿಯೊಂದು ದೊರೆತಿದ್ದು, ಟಿಯುವಿ300 ಪ್ಲಸ್ ಬೆಲೆಯನ್ನು ರೂ.9.46 ಲಕ್ಷಕ್ಕೆ ನಿಗದಿ ಮಾಡುವ ಮೂಲಕ ಇನ್ಸುರೆನ್ಸ್ ಮತ್ತು ಲೈಫ್ ಟ್ಯಾಕ್ಸ್, ರಿಜಿಸ್ಟೇಷನ್ ಸೇರಿ ಆನ್ ರೋಡ್ ಬೆಲೆಯನ್ನು ರೂ.11.15 ಲಕ್ಷಕ್ಕೆ ಮಾರಾಟ ಮಾಡಲಿದೆ ಎಂಬ ಮಾಹಿತಿ ದೊರೆತಿದೆ.

Recommended Video

BSA Motorcycles India Launch Rumour Shared By Anand Mahindra - DriveSpark
ಬಿಡುಗಡೆಗೂ ಮುನ್ನ ಕುತೂಹಲ ಹೆಚ್ಚಿಸುತ್ತಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಕಾರು

ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಯುವಿ300 ಮಾದರಿಗಿಂತ ಪ್ಲಸ್ ಆವೃತ್ತಿಯು ಅತಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದ್ದು, ಕ್ಯಾಬಿನ್ ಭಾಗ ಮತ್ತು ಕಾರಿನ ಎಡ್ಜ್‌ಗಳಲ್ಲಿ ವಿಶೇಷ ವಿನ್ಯಾಸವನ್ನು ಕೈಗೊಂಡಿರುವುದು ಹೊಸ ಕಾರಿನ ಹೊರ ನೋಟಕ್ಕೆ ಮೆರಗು ತಂದಿದೆ.

ಬಿಡುಗಡೆಗೂ ಮುನ್ನ ಕುತೂಹಲ ಹೆಚ್ಚಿಸುತ್ತಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಕಾರು

ಇನ್ನು ಹೆಚ್ಚುವರಿಯಾಗಿ ಟಿಯುವಿ300 ಪ್ಲಸ್ ಮಾದರಿಯಲ್ಲಿ ಆಟೋಮೆಟಿಕ್ ಕ್ಲೈಮೆಟ್ ಕಂಟ್ರೊಲರ್, ಹಿಂಭಾಗದ ಕ್ಯಾಬಿನ್‌ನಲ್ಲೂ ಎಸಿ ವ್ಯವಸ್ಥೆ ಸೇರಿದಂತೆ ಸುಧಾರಿತ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಚಾಲಕ ಸೇರಿ 9 ಜನ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ.

ತಪ್ಪದೇ ಓದಿ-ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಬಿಡುಗಡೆಗೂ ಮುನ್ನ ಕುತೂಹಲ ಹೆಚ್ಚಿಸುತ್ತಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಕಾರು

ಎಂಜಿನ್ ಸಾಮರ್ಥ್ಯ

ಈ ಹಿಂದಿನ ಮಾದರಿಯಂತೆ ಟಿಯುವಿ300 ಪ್ಲಸ್ ಮಾದರಿಯು 1.99-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 119-ಬಿಎಚ್‌ಪಿ ಉತ್ಪಾದಿಸಬಲ್ಲ ಗುಣಹೊಂದಿದೆ.

ಬಿಡುಗಡೆಗೂ ಮುನ್ನ ಕುತೂಹಲ ಹೆಚ್ಚಿಸುತ್ತಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಕಾರು

ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿರುವ ಟಿಯುವಿ300 ಪ್ಲಸ್ ಆವೃತ್ತಿಯು 2018ರ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಿದೆ.

ಬಿಡುಗಡೆಗೂ ಮುನ್ನ ಕುತೂಹಲ ಹೆಚ್ಚಿಸುತ್ತಿದೆ ಮಹೀಂದ್ರಾ ಟಿಯುವಿ300 ಪ್ಲಸ್ ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಮತ್ತು ಹೊಸ ಎಂಪಿವಿ ಒಂದನ್ನು ಬಿಡುಗಡೆ ಮಾಡುವ ತವಕದಲ್ಲಿರುವ ಮಹೀಂದ್ರಾ ಸಂಸ್ಥೆಯು ಟಿಯುವಿ300 ಪ್ಲಸ್ ಮಾದರಿಯನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಬಿಡುಗಡೆಯ ಸಂಪೂರ್ಣ ಮಾಹಿತಿ ನಿಮ್ಮ ಡ್ರೈವ್ ಸ್ಪಾರ್ಕ್‌ನಲ್ಲಿ ಲಭ್ಯವಾಗಲಿದೆ.

ತಪ್ಪದೇ ಓದಿರಿ-ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

Trending DriveSpark YouTube Videos

Subscribe To DriveSpark Kannada YouTube Channel - Click Here

Article Published On: Thursday, December 28, 2017, 18:17 [IST]
English summary
Ahead of its launch, IAB has got hold of the ARAI (Automotive Research Association of India) certificate of the Mahindra TUV300 Plus which reveal the technical details of the utility vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+