ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಮೈಲೇಜ್ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ನಮ್ಮ ಜನ ಕೆಲವು ಡ್ರೈವಿಂಗ್ ಚಟಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅದರ ಪರಿಣಾಮವೇ ನಾವು ಅಂದಕೊಂಡಷ್ಟು ಮೈಲೇಜ್ ಪಡೆಯಲು ಹರಸಾಹಸ ಪಡಬೇಕಾದ ಅನಿವಾರ್ಯತೆಗಳು ಎದುರಾಗುತ್ತವೆ.

By Praveen

ಮೈಲೇಜ್, ಮೈಲೇಜ್, ಮೈಲೇಜ್! ಇದು ಭಾರತೀಯ ವಾಹನೋದ್ಯಮದಲ್ಲಿ ಬಳಕೆಯಲ್ಲಿರುವ ಅತಿ ಸಾಮಾನ್ಯ ಪದ. ಪ್ರತಿಯೊಬ್ಬ ಗ್ರಾಹಕನೂ ಯಾವುದೇ ಒಂದು ಹೊಸತಾದ ಅಥವಾ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಮೊದಲು ಮೈಲೇಜ್ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅದು ಬೈಕೇ ಹಾಗಿರಬಹುದು ಅಥವಾ ಕಾರು!

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಆದ್ರೆ ಮೈಲೇಜ್ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ನಮ್ಮ ಜನ ಕೆಲವು ಡ್ರೈವಿಂಗ್ ಚಟಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅದರ ಪರಿಣಾಮವೇ ನಾವು ಅಂದಕೊಂಡಷ್ಟು ಮೈಲೇಜ್ ಪಡೆಯಲು ಹರಸಾಹಸ ಪಡಬೇಕಾದ ಅನಿವಾರ್ಯತೆಗಳು ಎದುರಾಗುತ್ತವೆ. ಈ ಹಿನ್ನೆಲೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಮೈಲೇಜ್ ಹೆಚ್ಚಿಸಲು ಸೂಕ್ತ ರೀತಿಯ ಡ್ರೈವಿಂಗ್ ಕೌಶಲ್ಯಗಳ ಬಗ್ಗೆ ಇಲ್ಲಿ ಚರ್ಚಿಸುತ್ತಿದೆ.

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಹೀಗಾಗಿ ನಾವು ನೀಡುತ್ತಿರುವ ಕೆಲವು ಅಮೂಲ್ಯ ಟಿಪ್ಸ್‌ಗಳು ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು ನೆರವಿಗೆ ಬರುವ ನಂಬಿಕೆ ನಮ್ಮದ್ದು. ಇದಕ್ಕಾಗಿ ಒಂದೊಂದೇ ಸ್ಲೈಡರ್ ಕ್ಲಿಕ್ಕಿಸುತ್ತಾ ಮುಂದೆ ಸಾಗಿರಿ...

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಅಸಮರ್ಪಕ ಕ್ಲಚ್ ಬಳಕೆ

ಅಸಮರ್ಪಕವಾದ ಕ್ಲಚ್ ಬಳಕೆಯಿಂದಾಗಿ ಗೇರ್ ಬಾಕ್ಸ್ ಮೇಲೆ ಪೆಟ್ಟಾಗುವ ಭೀತಿಯಿರುತ್ತದೆ. ಜೊತೆಗೆ ನಿಮ್ಮ ಕಾರಿನ ಮೈಲೇಜ್ ಮೇಲೂ ಹೆಚ್ಚು ಪರಿಣಾಮ ಬಿರುತ್ತದೆ. ಇದರಿಂದ ನಗರ ಪ್ರದೇಶಗಳಲ್ಲಿ ಅನಿವಾರ್ಯವಾದ ಕ್ಲಚ್ ಬಳಕೆಯನ್ನು ಆದಷ್ಟು ಮೃದುವಾಗಿ ಬಳಕೆ ಮಾಡಿ.

Recommended Video

High Mileage Cars In India - DriveSpark
ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಸರಿಯಾದ ರೀತಿ ಗೇರ್ ಬಳಕೆ ಮಾಡದಿರುವುದು

ನಾವು ನೋಡಿರುವಂತೆಯೇ ಅನೇಕ ಮಂದಿ ಚಾಲಕರು ವಾಹನ ಚಲಿಸುತ್ತಿರುವಾಗಿ ಗೇರ್ ಕಡಿಮೆ (low Gear) ಮಾಡಲು ಮರೆತುಬಿಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ರಸ್ತೆ ಬದಿಯಲ್ಲಿ ನಿಂತು ಮೇಲ್ಖುಖವಾಗಿ ಚಲಿಸುತ್ತಿರುವ ಅಥವಾ ಸ್ಪೇಡ್ ಬ್ರೇಕರ್ ದಾಟುತ್ತಿರುವ ವಾಹನಗಳನ್ನು ವೀಕ್ಷಿಸಿದರೆ ಇದು ನಿಮ್ಮ ಗಮನಕ್ಕೆ ಬರಲಿದೆ. ಈ ವೇಳೆ ವಿಚಿತ್ರವಾದ ಶಬ್ದ ನಿಮ್ಮ ಗಮನಕ್ಕೆ ಬಂದಿರಬಹುದು.

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಇದರ ಮರ್ಮ ಏನೆಂದರೆ ಚಾಲಕರ ಸೋಮಾರಿತನ ಅಥವಾ ತಿಳಿದೋ ತಿಳಿಯದೆಯೋ ಗೇರ್ ಶಿಫ್ಟ್ (downshifting) ಕಡಿಮೆ ಮಾಡಲು ಮರೆತುಬಿಡುತ್ತಾರೆ. ಇಲ್ಲಿ ಇಂಧನ ಬಚತ್ ಆಗುವ ಬದಲು ಹೆಚ್ಚು ಪೋಲಾಗುತ್ತದೆ.

ತಪ್ಪದೇ ಓದಿ- ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಟ್ರಾಫಿಕ್‌ಗಳಲ್ಲಿ ಗಾಡಿ ಆಫ್ ಮಾಡದಿರುವುದು

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಂದೊಂದು ಸಾಧಾರಣ ನಿಯಮ. ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ 30 ಸೆಕೆಂಡುಗಳಿಗಿಂತಲೂ ಹೆಚ್ಚು ಸಮಯ ವಾಹನ ನಿಲ್ಲಿಸುತ್ತಿದ್ದಲ್ಲಿ ನಿಮ್ಮ ಗಾಡಿಯ ಎಂಜಿನ್ ಆಫ್ ಮಾಡಿರಿ.

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಓವರ್ ಲೋಡ್ ಹಾಕುವುದು

ನಿಯಮಿತ ಭಾರಕ್ಕಿಂತಲೂ ಹೆಚ್ಚು ಲಗ್ಗೇಜ್ ಹೊತ್ತೊಯ್ಯುವುದು ಕಾರಿನ ಒಟ್ಟಾರೆ ನಿರ್ವಹಣೆಗೆ ತೊಂದರೆಯನ್ನುಂಟು ಮಾಡಲಿದೆ. ಇದರಿಂದ ಕಾರಿನ ಇಂಧನ ಕ್ಷಮತೆ ಮೇಲೆ ಪರಿಣಾಮ ಬೀರುವುದಲ್ಲದೆ ಸಸ್ಪೆನ್ಷನ್ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡಲಿದೆ.

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಸರ್ವೀಸ್ ಕೊರತೆ

ಇನ್ನು ಕೆಲವು ಮಾಲಿಕರು ಸರ್ವಿಸ್ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ ನಿರಂತರ ಅಂತರಾಳದಲ್ಲಿ ಸರ್ವಿಸ್ ಮಾಡಿಸದಿದ್ದಲ್ಲಿ ಕಾರಿನ ಒಟ್ಟಾರೆ ಬಾಳ್ವಿಕೆಯ ಮೇಲೆ ದೋಷವನ್ನುಂಟು ಮಾಡಲಿದೆ.

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ತಂಪಾದ ದಿನಗಳಲ್ಲಿ ಇಂಧನ ಖರೀದಿಸಿ

ಕೂಲಾದ ಇಂಧನ ಸಾಂದ್ರತೆ ಹೆಚ್ಚಲಿದೆ. ಹಾಗಾಗಿ ಬೆಳ್ಳಂಬೆಳಗ್ಗೆ ಬೇಗನೇ ಎದ್ದು ಇಂಧನ ತುಂಬಿಸುವುದು ಉತ್ತಮ. ಈ ಸಂದರ್ಭದಲ್ಲಿ ಪಂಪ್‌ಗಳು ಪರಿಮಾಣಕ್ಕೆ ತಕ್ಕ ಇಂಧನ ಅಳತೆ ಮಾಡುವುದರಿಂದ ನಿಮ್ಮ ಹಣಕ್ಕೆ ತಕ್ಕ ಇಂಧನ ದೊರೆಯಲು ನೆರವಾಗಲಿದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಸಾಧ್ಯವಾದಷ್ಟು ಬೆಳಗ್ಗಿನ ಸಮಯದಲ್ಲೇ ಇಂಧನ ತುಂಬಿಸುವುದು ಉತ್ತಮ.

ತಪ್ಪದೇ ಓದಿ-ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ರಿವರ್ಸ್ ಪಾರ್ಕ್

ನಿಮ್ಮ ದೈನಂದಿನ ಚಟುವಟಿಕೆಗಳ ಬಳಿಕ ಮನೆಗೆ ಹಿಂತಿರುಗಿದ ಬಳಿಕ ಮೇಲೆ ತಿಳಿಸಿದ ರೀತಿಯಲ್ಲೇ ನಿಮ್ಮ ಕಾರನ್ನು ರಿವರ್ಸ್ ಪಾರ್ಕ್ ಮಾಡಿಟ್ಟುಕೊಳ್ಳಿರಿ. ಇದರಿಂದ ಬೆಳಗ್ಗಿನ ಜಾವದಲ್ಲಿ ಎಂಜಿನ್ ಕೂಲಾಗಿದ್ದಾಗ ರಿವರ್ಸ್ ಮಾಡುವ ಗೋಜಿನಿಂದ ತಪ್ಪಿಸಬಹುದಾಗಿದೆ.

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಈ ಮೂಲಕ ಬಹು ಅಮೂಲ್ಯ ಇಂಧನವನ್ನು ಬಚತ್ ಮಾಡಬಹುದಾಗಿದೆ. ವಿ.ಸೂ: ಸಮತಲ ಪಾರ್ಕಿಂಗ್ ಪ್ರದೇಶ ಹೊಂದಿದವರು ಮಾತ್ರ ಹೀಗೆ ಮಾಡಬೇಕು. ಇಲ್ಲದಿದ್ದಲ್ಲಿ ಮೇಲ್ಗುಖದತ್ತ ರಿವರ್ಸ್ ಮಾಡುವುದರಿಂದ ಹೆಚ್ಚಿನ ಇಂಧನ ವ್ಯಯವಾಗಲಿದೆ.

ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಈ ಉಪಯುಕ್ತ ಲೇಖನ ನಿಮ್ಮ ನೆರವಿಗೆ ಬಂದಿರುವ ವಿಶ್ವಾಸ ನಮ್ಮದ್ದು. ಇದು ಇಂಧನ ಜತೆಗೆ ನಿಮ್ಮ ದುಡ್ಡನ್ನು ಉಳಿತಾಯ ಮಾಡಲಿದೆ. ಈ ಎಲ್ಲ ಸಲಹೆಗಳನ್ನು ಅನುಸರಿಸುವುದರಿಂದ ಖಂಡಿತವಾಗಿಯೂ ದೀರ್ಘ ಪಯಣದಲ್ಲಿ ಗಮನಾರ್ಹ ಫಲಿತಾಂಶ ಕಾಣಲಿದೆ.

ತಪ್ಪದೇ ಓದಿ-ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಯಶ್ ಖರೀದಿಸಿದ್ದು ಏಕೆ ಗೊತ್ತೆ?

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on driving tips mileage
English summary
Some Chilly Mistakes That Affect Your Car's Mileage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X