ಹೆಲ್ಮೆಟ್‌ ತೆಗೆದುಕೊಳ್ಳುವ ಧಾವಂತದಲ್ಲಿದ್ದೀರಾ?: ಈ ಕೆಳಗಿನ ಅಂಶಗಳನ್ನು ಗಮನಿಸದೆ ತೆಗೆದುಕೊಳ್ಳಬೇಡಿ

ಬೈಕ್‌ ಸವಾರರಿಗೆ ಪ್ರಮುಖವಾಗಿ ಇರಬೇಕಾದ ವಸ್ತುವೆಂದರೆ ಅದು ಹೆಲ್ಮೆಟ್‌. ಹೆಲ್ಮೆಟ್‌ (Helmet) ಧರಿಸಿ ಬೈಕ್‌ ಓಡಿಸಿದರೆ ಮುಂದೆ ನಡೆಯಬಹುದಾದ ಅನಾಹುತವನ್ನು ತಪ್ಪಿಸಬಹುದು ಎಂದು ಗೊತ್ತಿದ್ದರೂ ಇಂದು ಹಲವರು ಈ ನಿಯಮವನ್ನು ಪಾಲಿಸುತ್ತಿಲ್ಲ. ಇಂದು ನಮ್ಮಲ್ಲಿ ನಡೆಯುತ್ತಿರುವ ಅಪಘಾತದಲ್ಲಿ ಅತೀ ಹೆಚ್ಚು ಸಾವಿಗೆ ಒಳಗಾಗುವುದು ಹೆಲ್ಮೆಟ್‌ ಧರಿಸದೆ ಇರುವುದರಿಂದ.

ಪ್ರತಿಯೊಬ್ಬರೂ ಹೆಲ್ಮೆಟ್‌ ಕೊಳ್ಳುವಾಗ ಬ್ರಾಂಡ್‌ ಹೊರತುಪಡಿಸಿ, ಇತರ ಇನ್ನೊಂದಷ್ಟು ವಿಷಯಗಳನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇಂದಿನ ಈ ಲೇಖನದಲ್ಲಿ, ಒಬ್ಬ ಬೈಕ್‌ ಸವಾರ ಹೆಲ್ಮೆಟ್ ಖರೀದಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು ಯಾವುವು ಎಂಬುದನ್ನು ನಾವು ನೋಡೋಣ. ಈ ಕೆಳಗಿನ ಅಂಶಗಳು ನೀವು ಹೆಲ್ಮೆಟ್‌ ತೆಗೆದುಕೊಳ್ಳುವಾಗ ಉಪಯೋಗಕ್ಕೆ ಬರಬಹುದು.

Remember These Things When You Buy New Helmet

೧. ಸೇಫ್ಟಿ ಸ್ಟ್ಯಾಂಡರ್ಡ್‌: ಪ್ರತಿಯೊಬ್ಬರೂ ಸಹ ಹೆಲ್ಮೆಟ್‌ ಕೊಳ್ಳುವಾಗ ನೆನಪಿಟ್ಟು ಗಮನಿಸಬೇಕಾದ ವಿಷಯ ಈ ಸೇಫ್ಟಿ ಸ್ಟ್ಯಾಂಡರ್ಡ್. ಭಾರತದ ನಿಯಮದ ಪ್ರಕಾರ ಕಡಿಮೆ ಎಂದರೂ ಐಎಸ್‌ಐ ಹೋಲ್ ಮಾರ್ಕ್‌ ಉಳ್ಳ ಹೆಲ್ಮೆಟ್‌ ಅನ್ನು ಧರಿಸಿರಬೇಕು. ಅದು ಮಾತ್ರವಲ್ಲದೇ ಇತ್ತೀಚೆಗೆ ಡಾಟ್‌ ಎಂಬಿತ್ಯಾದಿ ಸೇಫ್ಟಿ ಸ್ಟ್ಯಾಂಡರ್ಡ್ ಸಹ ಚಾಲ್ತಿಯಲ್ಲಿದೆ.

೨. ಸರಿಯಾದ ಅಳತೆ: ಹೆಲ್ಮೆಟ್‌ ಕೊಳ್ಳುವಾಗ ಸಮರಿಯಾದ ಅಳತೆಯ ಹೆಲ್ಮೆಟ್‌ ಅನ್ನು ಕೊಳ್ಳಬೇಕು. ಹಾಗಾಗಿ ಅಂಗಡಿಗೆ ಹೋಗಿ ನೀವು ಅಲ್ಲಿಂದ ಹೆಲ್ಮೆಟ್‌ (Helmet) ಧರಿಸಿ ನೋಡಿ ಆ ನಂತರದಲ್ಲಿ ಅದನ್ನು ಕೊಳ್ಳುವುದು ಉತ್ತಮ. ಆನ್‌ ಲೈನ್‌ ಶಾಪಿಂಗ್‌ ಅನ್ನು ಹೆಲ್ಮೆಟ್‌ ಕೊಳ್ಳುವಾಗ ಕೊಂಚ ಬದಿಗಿಡುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ.

Remember These Things When You Buy New Helmet

೩. ವೆಂಟಿಲೇಷನ್‌: ಹೆಲ್ಮೆಟ್‌ ಧರಿಸಿ ಬೈಕ್‌ ಸವಾರಿ ಮಾಡುವಾಗ ವೆಂಟಿಲೇಷನ್‌ ಅಥವಾ ಹೆಲ್ಮೆಟ್‌ ಒಳಗಿನ ಗಾಳಿಯ ಚಲನೆ ಬಹು ಮುಖ್ಯವಾದುದು. ಇದು ಬೈಕ್‌ ಸವಾರರಿಗೆ ಆರಾಮದಾಯಕ ಸವಾರಿಯನ್ನು ನೀಡುತ್ತದೆ. ಹೀಗಾಗಿ ಏರ್‌ ವೆಂಡ್ಸ್‌ ಅಥವಾ ಗಾಳಿ ಒಳ ಹೋಗಲು ರಂಧ್ರ/ವ್ಯವಸ್ಥೆಗಳಿರುವ ಹೆಲ್ಮೆಟ್‌ ಕೊಳ್ಳುವುದು ಉತ್ತಮ.

೪. ಭಾರ: ಹೆಲ್ಮೆಟ್‌ ಕೊಳ್ಳುವಾಗ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೇನೆಂದರೆ ಅದರ ತೂಕ. ಹೌದು, ಹೆಲ್ಮೆಟ್‌ನ ತೂಕ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. ಹೆಚ್ಚು ತೂಕ ಇರುವ ಹೆಲ್ಮೆಟ್‌ ಬಳಸುವುದರಿಂದ ಬೈಕ್‌ ಸವಾರನಿಗೆ ತಲೆ ನೋವು ಉಂಟಾಗುವ ಸಾಧ್ಯತೆಗಳು ಹೆಚ್ಚು. ಯಾಕೆಂದರೆ ಅಧಿಕ ಭಾರವಿರುವ ಹೆಲ್ಮೆಟ್‌ ಅನ್ನು ಹೆಚ್ಚು ಹೊತ್ತು ಬಳಸುವುದರಿಂದ ತಲೆ ನೋವು ಆರಂಭವಾಗಬಹುದು. ಇದು ಆರಾಮದಾಯಕ ಬೈಕ್‌ ಸವಾರಿಯನ್ನು ಕೆಡಿಸುತ್ತದೆ.

೫. ವೈಸರ್‌ ಮತ್ತು ಫೇಸ್‌ ಶೀಲ್ಡ್‌: ಹೆಲ್ಮೆಟ್‌ನ ಪ್ರಮುಖ ವಸ್ತುಗಳಲ್ಲಿ ವೈಸರ್‌ ಮತ್ತು ಪೇಸ್‌ ಶೀಲ್ಡ್‌ ಪ್ರಮುಖ ಅಂಶಗಳು. ಕೆಲವು ಹೆಲ್ಮೆಟ್‌ಗಳು ಬಿಲ್ಟ್‌ ಇನ್ ವೈಸರ್‌ ಇರುತ್ತದೆ. ಕೆಲವು ಹೆಲ್ಮೆಟ್‌ಗಳಲ್ಲಿ ವೈಸರ್‌ಗಳು ಇರುವುದಿಲ್ಲ. ಈ ವೈಸರ್‌ಗಳು ಸೂರ್ಯನ ಕಿರಣ, ಗಾಳಿ, ಧೂಳು ಮುಂತಾದವುಗಳಿಂದ ಸವಾರನಿಗೆ ರಕ್ಷಣೆ ಒದಗಿಸುತ್ತದೆ. ಫೇಸ್ ಶೀಲ್ಡ್‌ ಸಹ ಸವಾರನಿಗೆ ಇದೇ ರೀತಿಯಾದ ಸಹಾಯವನ್ನು ಮಾಡುತ್ತದೆ.

೬. ಸ್ಟೈಲ್‌: ಹೆಲ್ಮೆಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸುರಕ್ಷತೆ, ಗುಣಮಟ್ಟ ಎಷ್ಟು ಮುಖ್ಯವೋ ಆ ಹೆಲ್ಮೆಟ್‌ನ ವಿನ್ಯಾಸ ಸಹ ಅಷ್ಟೇ ಮುಖ್ಯ. ಹೆಲ್ಮೆಟ್‌ನಲ್ಲಿ ಹಲವಾರು ವಿನ್ಯಾಸಗಳಿವೆ. ಅದರಲ್ಲೂ ಹೆಲ್ಮೆಟ್‌ ಗಾಳಿಯನ್ನು ಸೀಳಿ ಮುನ್ನುಗ್ಗುವಂತಹ ಏರೋ ಡೈನಾಮಿಕ್‌ ಡಿಸೈನ್‌ಗಳಿರುತ್ತವೆ. ಅಂತಹ ಹೆಲ್ಮೆಟ್‌ಗಳನ್ನು ಬಳಸುವುದರಿಂದ ಗಾಳಿಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಂದೊಳ್ಳೆ ಹೆಲ್ಮೆಟ್‌ ಅನ್ನು ನೀವು ತೆಗೆದುಕೊಳ್ಳುವುದು ಖಂಡಿತಾ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 28, 2023, 18:21 [IST]
English summary
Remember these things when you buy new helmet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+