ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಯಶ್ ಖರೀದಿಸಿದ್ದು ಏಕೆ ಗೊತ್ತೆ ?

Written By:

ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ಮದುವೆಗೆ ಇದೇ ಡಿಸೆಂಬರ್​ 9 ಕ್ಕೆ ಒಂದು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ತಮ್ಮ ಪೋಷಕರಿಗೆ ಮತ್ತು ಮಡದಿಗೆ ಚಂದದ ಮೂರು ಬೆಂಜ್ ಕಾರುಗಳನ್ನು ಖರೀದಿಸಿದ್ದಾರೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ಹೌದು, ಕನ್ನಡ ಚಿತ್ರರಂಗದ ಸ್ಟಾರ್ ನಟ ಯಶ್ ತಮ್ಮ ಮೊದಲ ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತೇಲುತ್ತಿದ್ದು, ಇದೇ ಸಂದರ್ಭದಲ್ಲಿ ಬೆಂಗಳೂರಿನ ಮರ್ಸಿಡಿಸ್ ಶೋರೂಂಗೆ ಬುಧವಾರದಂದು ಭೇಟಿ ನೀಡಿದ ಯಶ್, ಮರ್ಸಿಡಿಸ್ ಕಂಪನಿಯ ಮೂರು ಐಷಾರಾಮಿ ಟಾಪ್ ಎಂಡ್ ಕಾರುಗಳನ್ನು ಖರೀದಿ ಮಾಡಿದ್ದಾರೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ತಮ್ಮ ಪೋಷಕರಿಗೆ ಬೆಂಜ್ ಇ-ಕ್ಲಾಸ್ ಕಾರು, ಪತ್ನಿ ರಾಧಿಕಾ ಪಂಡಿತ್ ಅವರಿಗೆ ಬೆಂಜ್ ಜಿಎಲ್ಎಸ್ ಕಾರು ಮತ್ತು ತಮ್ಮ ಸ್ವಂತ ಬಳಕೆಗೆ ಬೆಂಜ್ ಜಿಎಲ್‌ಸಿ 43 ಎಎಂಜಿ ಕೂಪೆ ಕಾರನ್ನು ಕೆ.ಜಿ.ಎಫ್ ಹೀರೊ ಖರೀದಿ ಮಾಡಿದ್ದಾರೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ಒಂದೇ ಶೋರೂಮಿನಲ್ಲಿ ಮೂರು ಕಾರ್ ಖರೀದಿಸಿದ ಮೊದಲ ಗ್ರಾಹಕ ಎಂಬ ಖ್ಯಾತಿಗೆ ಯಶ್ ಪಾತ್ರರಾಗಿದ್ದಾರೆ. ಖರೀದಿಸಿದ ನಂತರ ಮನೆಗೆ ಕೊಂಡೊಯ್ಯುವ ಮೊದಲು ಎಲ್ಲಾ ಕಾರುಗಳಿಗೂ ಪೂಜೆ ಮಾಡಿಸಿ, ನಂತರ ತೆಗೆದುಕೊಂಡು ಹೋಗಿದ್ದಾರೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ಒಟ್ಟಿನಲ್ಲಿ ತಮ್ಮ ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತಮ್ಮ ಕುಟುಂಬಕ್ಕೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ ರಾಕಿಂಗ್ ಸ್ಟಾರ್. ಖರೀದಿಸುವ ವೇಳೆ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಸೇರಿದಂತೆ ಯಶ್ ಸ್ನೇಹಿತರು ಭಾಗಿಯಾಗಿದ್ದಾರೆ.

ಈ ಸಂಗತಿಗಳ ಹೊರತಾಗಿ, ಮೊದಲಿನಿಂದಲೂ ಸಹ ಯಶ್ ಕಾರು ಸಂಗ್ರಹಣೆಗೆ ಹೆಸರುವಾಸಿ ಎನ್ನಬಹುದು. ಅವರ ಬಳಿ ಆಡಿ ಎ 4, ಆಡಿ ಕ್ಯೂ7, ರೇಂಜ್ ರೋವರ್, ಪಜೆರೊ ಸ್ಪೋರ್ಟ್, ಮರ್ಸಿಡಿಸ್ ಜಿಎಲ್ 350 ಹಾಗು ಮುಂತಾದ ಹಲವು ಕಾರುಗಳನ್ನು ಯಶ್ ಹೊಂದಿದ್ದು, ಈ ಬಳಗಕ್ಕೆ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆಯಾಗಿದೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ಕಾರುಗಳ ಬಗ್ಗೆ :

1. ಜಿಎಲ್‌ಸಿ 43 ಎಎಂಜಿ ಕೂಪೆ :

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡ ಈ ಮರ್ಸಿಡಿಸ್ ಬೆಂಝ್ ಕಾರಿನ ಜಿಎಲ್‌ಸಿ 43 ಕ್ರಾಸ್ಒವರ್ ಕಾರು ರೂ. 74,80,000 ಲಕ್ಷ ಮೂಲ ಬೆಲೆ ಪಡೆದುಕೊಂಡಿದೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ಯಶ್ ಖರೀದಿಸಿರುವ ಈ ಜಿಎಲ್‌ಸಿ 43 ಕೂಪೆ ಕಾರು, 3.0-ಲೀಟರ್ ವಿ6 ಬೈ-ಟರ್ಬೊ ಎಂಜಿನ್ ಹೊಂದಿದ್ದು, ಈ ಎಂಜಿನ್ 520 ಏನ್‌ಎಂ ತಿರುಗುಬಲದಲ್ಲಿ ಬಲಿಷ್ಠ 367ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ಇ-ಕ್ಲಾಸ್ :

ಆರಾಮದಾಯಕ ಪ್ರಯಾಣಕ್ಕೆ ಇದು ಹೇಳಿ ಮಾಡಿಸದಂತಿದ್ದು, ಯಶ್ ಅವರ ಪೋಷಕರ ದೂರದ ಪ್ರಯಾಣ ಸುಖಕರವಾಗಿರಲಿ ಎಂಬ ಉದ್ದೇಶದಿಂದ ಈ ಕಾರು ಖರೀದಿಸಲಾಗಿದೆ. ಈ ಕಾರು ಕೇವಲ 6.6 ಸೆಕೇಂಡ್‌ಗಳಲ್ಲಿ 100ಕಿಮಿ ವೇಗ ಪಡೆದುಕೊಳ್ಳಬಲ್ಲ ಸಾಮರ್ಥ್ಯವಿದ್ದು, 250 ಕಿಮಿ ಗರಿಷ್ಠ ವೇಗದಲ್ಲಿ ಚಲಿಸುವಷ್ಟು ಶಕ್ತಿಶಾಲಿ ಎಂಜಿನ್ ಹೊಂದಿದೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ಜಿಎಲ್ಎಸ್ :

ಹೆಚ್ಚು ಆನಂದವಾಗಿರುವ ಆಂತರಿಕವಾಗಿ ಹೆಚ್ಚು ಶ್ರೀಮಂತವಾಗಿರುವ ಈ ಕಾರು, ನವೀನ ವಿನ್ಯಾಸದ ಆವೃತಿಯಾಗಿದ್ದು, ಅಂದಗೊಂಡ ಸುಂದರಿಯಾಗಿ ರಸ್ತೆಯ ಮೇಲೆ ಕಂಗೊಳಿಸುತ್ತದೆ. ಈ ಕಾರು ರಾಧಿಕಾ ಪಂಡಿತ್ ಅವರಿಗೆ ಸೂಕ್ತ ಎನ್ನುವ ಕಾರಣಕ್ಕೆ ಯಶ್ ಈ ಕಾರನ್ನು ತಮ್ಮ ಪತ್ನಿಗೆ ಪ್ರೆಸೆಂಟ್ ಮಾಡಲು ನಿರ್ಧರಿಸಿದ್ದಾರೆ.

ಬರೋಬ್ಬರಿ 3 ಮರ್ಸಿಡಿಸ್ ಐಷಾರಾಮಿ ಕಾರುಗಳನ್ನು ಖರೀದಿಸಿದ ರಾಕಿಂಗ್ ಸ್ಟಾರ್ !!

ಒಟ್ಟಿನಲ್ಲಿ ಸೆಲ್ಫ್ ಮೇಡ್ ಮ್ಯಾನ್ ಎಂಬ ಪದಕ್ಕೆ ಹೆಚ್ಚು ಹೋಲುವ ವ್ಯಕ್ತಿತ್ವ ಹೊಂದಿರುವ ಯಶ್, ಸದ್ಯ ಕನ್ನಡ ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದು, ಸಮಾಜಕ್ಕೂ ಸಹ ಹಣ ವ್ಯಹಿಸುವ ಜೊತೆಗೆ ತಮ್ಮ ಕುಟುಂಬಕ್ಕೂ ಸಹ ಯಾವುದೇ ಕೊರತೆ ಬಾರದೆ ಇರುವ ರೀತಿಯಲ್ಲಿ ನೋಡಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಮಾದರಿ ಎನ್ನಬಹುದು.

Image Source : Public TV

Trending articles in DriveSpark Kannada;

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

English summary
actor yash buys 3 benz cars for his 1st wedding anniversary

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark