ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಕಳಪೆ ಕಾರ್ಯಕ್ಷಮತೆ ಕುರಿತು ದೂರು ನೀಡಿದ್ದರ ಹಿನ್ನೆಲೆ ಗ್ರಾಹಕರ ನ್ಯಾಯಾಲಯು ಕಾರು ಡೀಲರ್ಸ್ ಹಾಗೂ ಮಾರುತಿ ಸಂಸ್ಧೆಯಿಂದ 1.60 ಲಕ್ಷ ದಂಡ ಪಾವತಿ ಮಾಡುವಂತೆ ಆದೇಶ ನೀಡಿರುವ ಘಟನೆ ನಡೆದಿದೆ.

By Praveen

ಕಳೆದ 8 ವರ್ಷಗಳ ಹಿಂದೆ ಮಾರುತಿ ಸುಜುಕಿ ಆಲ್ಟೋ ಖರೀದಿ ಮಾಡಿದ್ದ ಗ್ರಾಹಕರೊಬ್ಬರು ಹೊಸ ಕಾರಿನ ಕಳಪೆ ಕಾರ್ಯಕ್ಷಮತೆ ಕುರಿತು ದೂರು ನೀಡಿದ್ದರ ಹಿನ್ನೆಲೆ ಗ್ರಾಹಕರ ನ್ಯಾಯಾಲಯು ಕಾರು ಡೀಲರ್ಸ್ ಹಾಗೂ ಮಾರುತಿ ಸಂಸ್ಧೆಯಿಂದ 1.61 ಲಕ್ಷ ದಂಡ ಪಾವತಿ ಮಾಡುವಂತೆ ಆದೇಶ ನೀಡಿರುವ ಘಟನೆ ನಡೆದಿದೆ.

ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಸ್ವಂತದ ಕಾರನ್ನು ಹೊಂದಬೇಕೆಂಬ ಮಹಾದಾಸೆ ಇದ್ದೆ ಇರುತ್ತೆ. ಇದಕ್ಕಾಗಿ ಬಹುತೇಕ ಜನ ಕೂಡಿಟ್ಟ ಹಣದಲ್ಲಿ ಇಲ್ಲವೇ ಸಾಲ ಮಾಡಿ ಕಾರು ಖರೀದಿ ಮಾಡಿರುತ್ತಾರೆ. ಆದ್ರೆ ಖರೀದಿ ಮಾಡಿದ ಹೊಸ ಕಾರು ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇದ್ರೆ ಹೇಗೆ? ಇಂತದ್ದೆ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಕಳೆದ 8 ವರ್ಷಗಳ ಹಿಂದೆ ವಿಜೇತ್ ಎಂ ಎನ್ನುವರು ಸುಳ್ಯದಲ್ಲಿರುವ ಮಾರುತಿ ಸುಜುಕಿ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್ಸ್‌ನಲ್ಲಿ ಆಲ್ಟೋ ಎಲ್ಎಕ್ಸ್ ಖರೀದಿ ಮಾಡಿದ್ದರು. ಆದ್ರೆ ಹೊಸ ಕಾರು ಖರೀದಿಸಿದ ಮೂರನೇ ದಿನದಿಂದಲೇ ತೊಂದರೆ ಶುರುವಾಗಿದ್ದವು.

Recommended Video

[Kannada] Mahindra KUV 100 NXT Launched In India - DriveSpark
ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಮೊದಮೊದಲು ತಾಳ್ಮೆಯಿಂದಲೇ ತೊಂದರೆಗಳನ್ನು ಸಹಿಸಿಕೊಂಡಿದ್ದ ಕಾರು ಮಾಲೀಕರು ತದನಂತರ ಡೀಲರ್ಸ್ ವಿರುದ್ದ ಗ್ರಾಹಕ ನ್ಯಾಯಲಯದಲ್ಲಿ ದಾವೆ ಹೂಡಿ ಸೂಕ್ತ ಪರಿಹಾರವನ್ನು ಒದಗಿಸುವಂತೆ ಬೇಡಿಕೆಯಿಟ್ಟಿದ್ದರು.

ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸುಳ್ಯದಲ್ಲಿ ಕಾರು ಖರೀದಿಸಿದ್ದ ವಿಜೇತ್ ಅವರು ತದನಂತರ ಬೆಂಗಳೂರಿನಲ್ಲಿ ಕಾರು ಬೀಡಿಭಾಗಗಳ ಸೇವೆಗೆ ಪರವಾಗಿಗೆ ಪಡೆದಿದ್ದರು. ಆದ್ರೆ ಪರಿಹಾರ ನೀಡಲು ನಿರಾಕರಿಸಿದ್ದ ಮಾಂಡೋವಿ ಮೋಟಾರ್ಸ್, ತೊಂದರೆಯಲ್ಲಿರುವ ಆಲ್ಟೋ ಎಲ್ಎಕ್ಸ್ ಬೀಡಿಭಾಗಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೂ ಹೊಸ ಕಾರಿನಿಂದಾಗಿ ಸಾಕಷ್ಟು ಸಮಯ ವ್ಯರ್ಥ ಸೇರಿದಂತೆ ಹತ್ತಾರು ಬಾರಿ ಕಾರು ರೀಪೆರಿಗಾಗಿ ಅಲೆದಾಡಿದ್ದ ವಿಜೇತ್ ಅವರು ಪರಿಹಾರಕ್ಕಾಗಿ ಪಟ್ಟು ಹಿಡಿದ್ದರು.

ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಹೀಗಾಗಿ ಕಾರಿನ ಸ್ಥಿತಿಗತಿ ಆಧರಿಸಿ ಮತ್ತು ಗ್ರಾಹಕನ ಬೇಡಿಕೆಗೆ ಮನ್ನಣೆ ನೀಡಿರುವ ಗ್ರಾಹಕ ನ್ಯಾಯಾಲಯವು ಮಾಂಡೋವಿ ಮೋಟಾರ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ. ಕಾರು ಸೇವೆಯಲ್ಲಿ ಆದ ವಿಳಂಭ ಮತ್ತು ಸುಳ್ಳು ಭರವಸೆಗಳನ್ನು ನೀಡಿದ ಹಿನ್ನೆಲೆ ಬರೋಬ್ಬರಿ 1.61 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.

ತಪ್ಪದೇ ಓದಿ-

ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಇನ್ನು ವಿಜೇತ್ ಎಂ ಖರೀದಿಸಿದ್ದ ಆಲ್ಟೋ ಎಲ್ಎಕ್ಸ್ ಕಾರಿನಲ್ಲಿ ಬಾಡಿ ವೈಬ್ರೆಷನ್ ತೊಂದರೆ ಅನುಭವಿಸಿದ್ದರು. ಜೊತೆಗೆ ಕಾರಿನಲ್ಲಿರುವ ತೊಂದರೆಗಳನ್ನು ಸರಿಪಡಿಸಲು ಮಾಂಡೋವಿ ಮೋಟಾರ್ಸ್ ನವರು ತೆಗೆದುಕೊಂಡಿದ್ದು 9 ತಿಂಗಳು ಅಂದ್ರೆ ನೀವು ನಂಬಲೇಬೇಕು.

ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಆಲ್ಟೋ ಎಲ್ಎಕ್ಸ್ ಕಾರಿನ ತಾಂತ್ರಿಕ ಮಾಹಿತಿ ಹೀಗಿದೆ...

ತ್ರಿ ಸಿಲಿಂಡರ್ ಎಂಜಿನ್ ಹೊಂದಿರುವ ಆಲ್ಟೋ ಎಲ್ಎಕ್ಸ್ ಮಾದರಿಯು ಪೆಟ್ರೋಲ್ ಟ್ರಾನ್ಸ್‌ಮಿಷನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆ 796 ಸಿಸಿ ಎಂಜಿನ್ ಹೊಂದಿದೆ.

ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಇದಲ್ಲದೇ ಪ್ರತಿ ಲೀಟರ್ ಪೆಟ್ರೋಲ್‌ಗೆ 35 ಕಿಮಿ ಮೈಲೇಜ್ ಸಾಮರ್ಥ್ಯ ಕೂಡಾ ಹೊಂದಿದೆ. ಆದ್ರೆ ವಿಜೇತ್ ಎಂ ಖರೀದಿಸಿದ್ದ ಕಾರು ಮಾದರಿಯು ಸಾಕಷ್ಟು ತಾಂತ್ರಿಕ ದೋಷಗಳಿಂದ ಕೂಡಿದ್ದರಿಂದ ದಂಡ ಪಾವತಿಸುವ ಸ್ಥಿತಿ ಬಂದಿದ್ದು ಮಾತ್ರ ಸುಳ್ಳಲ್ಲ.

Trending on DriveSparkKannada:

ಕೇಂದ್ರದಿಂದ ಹೊಸ ರೂಲ್ಸ್- ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

Most Read Articles

Kannada
English summary
Read in Kannada: 8 years after filing case of faulty car against Maruti and its dealer, consumer finally gets his money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X