ಕೇಂದ್ರದಿಂದ ಹೊಸ ರೂಲ್ಸ್- ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಎಲ್ಲಂದ್ರಲ್ಲೇ ಕಾರ್ ಪಾರ್ಕ್ ಮಾಡುವ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಲು ಮುಂದಾಗಿದೆ.

By Praveen

ನಗರಪ್ರದೇಶಗಳಲ್ಲಿ ಕೆಲಕಡೆಗಳಲ್ಲಿ ಸ್ಥಳ ಕೊರತೆ ಇದ್ರೆ ಇನ್ನು ಕೆಲ ಕಡೆ ಪಾರ್ಕಿಂಗ್ ಸ್ಲಾಟ್ ಇದ್ರು ಕೆಲವರು ಶುಲ್ಕ ಪಾವತಿಸಲು ಹಿಂದೇಟು ಹಾಕ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಲ್ಲದೇ ಸರ್ಕಾರಕ್ಕೂ ಕೂಡಾ ಆರ್ಥಿಕ ನಷ್ಟ ಅಷ್ಟಿಲ್ಲ. ಇದರಿಂದಾಗಿ ಎಲ್ಲಂದ್ರಲ್ಲೇ ಕಾರ್ ಪಾರ್ಕ್ ಮಾಡುವ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಲು ಮುಂದಾಗಿದೆ.

ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಅಕ್ರಮವಾಗಿ ಅಥವಾ ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಲು ಮುಂದಾಗಿರುವ ಕೇಂದ್ರ ಸರಕಾರವು ನಾಗರಿಕರಿಗೆ ನೆರವಾಗಬಲ್ಲ ಯೋಜನೆಯನ್ನು ಒಂದನ್ನು ರೂಪಿಸಿದೆ. ಯಾರು ಅಕ್ರಮವಾಗಿ ಪಾರ್ಕ್‌ ಮಾಡಿರುವ ವಾಹನಗಳ ಫೋಟೋ ತೆಗೆದು ಅಧಿಕಾರಿಗಳಿಗೆ ಕಳುಹಿಸುತ್ತಾರೋ ಅವರಿಗೆ ಸೂಕ್ತ ಬಹುಮಾನ ನೀಡುವ ಯೋಜನೆಗೆ ಚಾಲನೆ ನೀಡುತ್ತಿದೆ.

ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಹೀಗಾಗಿ ಅಕ್ರಮವಾಗಿ ಅಥವಾ ನೋ ಪಾರ್ಕಿಂಗ್‌ ಝೋನ್‌ನಲ್ಲಿ ರಸ್ತೆಗೆ ಅಡ್ಡವಾಗಿ ಪಾರ್ಕಿಂಗ್‌ ಮಾಡಿರುವ ವಾಹನಗಳ ಫೋಟೋಗಳನ್ನು ಕಳುಹಿಸಿ ಸೂಕ್ತ ಬಹುಮಾನವನ್ನು ಪಡೆಯಬಹುದಾಗಿದ್ದು, ಪಾರ್ಕಿಂಗ್ ಅಕ್ರಮ ತಡೆಯಲು ಇದು ನೆರವಾಗಲಿದೆ.

ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಇನ್ನು ರಾಜಧಾನಿ ಹೊಸದಿಲ್ಲಿಯ ಸಂಸತ್‌ ಭವನದ ಸುತ್ತಮುತ್ತಲಿನಲ್ಲಿಯೇ ಕೆಲವು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ನೋ ಪಾರ್ಕಿಂಗ್‌ ಝೋನ್‌ನಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಕೋಪೋದ್ರಿಕ್ತರಾಗಿದ್ದಾರೆ.

ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ನಿತಿನ್‌ ಗಡ್ಕರಿ ಈಗ ಹೊಸ ತಿದ್ದುಪಡಿವೊಂದನ್ನು ತರಲು ಮುಂದಾಗಿದ್ದು, ಜನದಟ್ಟಣೆ ಪ್ರದೇಶಗಳಲ್ಲಿ ಅಕ್ರಮವಾಗಿ ಕಾರ್ ಪಾರ್ಕಿಂಗ್ ಮಾಡುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಇದಲ್ಲದೇ ಸಂಸತ್‌ ಭವನಕ್ಕೆ ಪ್ರತಿ ದಿನವೂ ಹಲವು ಗಣ್ಯರು ಬರುತ್ತಿರುತ್ತಾರೆ. ಇಂಥವರ ಮುಂದೆ ಸಾರಿಗೆ ದಟ್ಟಣೆ ಉಂಟಾದಾಗ ನಿಜಕ್ಕೂ ನಮಗೆ ನಾಚಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಈ ರೀತಿಯ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.

ತಪ್ಪದೇ ಓದಿ- ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

ರೈಲಿನ 'ಹಾರನ್' ಬಗ್ಗೆ ಈ ವಿಚಾರ ನಿಮಗೆ ಖಂಡಿತ ಗೊತ್ತಿರೋದಿಲ್ಲ !!

ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಫೋಟೋ ಕಳುಹಿಸುವುದು ಹೇಗೆ?

ಅಕ್ರಮವಾಗಿ ಕಾರ್ ಪಾರ್ಕಿಂಗ್ ಮಾಡುವರ ವಿರುದ್ಧ ಜಾರಿ ತರಲಾಗುತ್ತಿರುವ ಹೊಸ ಯೋಜನೆಗೆ ಕೇಂದ್ರವು ಹೊಸದೊಂದು ಆ್ಯಪ್ ಬಿಡುಗಡೆ ಮಾಡಲಿದ್ದು, ಈ ಮೂಲಕ ನೀವು ಅಕ್ರಮವಾಗಿ ಪಾರ್ಕ್ ಮಾಡಲಾಗಿರುವ ವಾಹನಗಳ ಬಗ್ಗೆ ಮಾಹಿತಿ ನೀಡಬಹುದು.

ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಒಂದು ವೇಳೆ ನೀವು ಕಳುಹಿಸಿರುವ ಮಾಹಿತಿಯು ಸರಿ ಇದ್ದಲ್ಲಿ ಕಾರು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಿರುವ ಟ್ರಾಫಿಕ್ ಪೊಲೀಸರು, ದಂಡದ ಮೊತ್ತದಲ್ಲೇ ಇಂತಿಷ್ಟು ಪ್ರಮಾಣವನ್ನು ಮಾಹಿತಿ ನೀಡಿದವರಿಗೆ ನೀಡುವ ಸಾಧ್ಯತೆಗಳಿವೆ.

ಎಲ್ಲಂದ್ರಲ್ಲೆ ಕಾರ್ ಪಾರ್ಕ್ ಮಾಡುವ ಮುನ್ನ ಹುಷಾರ್

ಇಲ್ಲಿ ಇನ್ನೊಂದು ಮುಖ್ಯ ವಿಚಾರ ಎನೆಂದರೆ ಅಕ್ರಮವಾಗಿ ಕಾರ್ ಪಾರ್ಕ್ ಮಾಡಿದವರ ಬಗ್ಗೆ ಮಾಹಿತಿ ನೀಡುವರರ ಬಗೆಗಿನ ಮಾಹಿತಿಯನ್ನು ಗೌಪ್ಯವಾಗಿ ಇಡಲು ನಿರ್ಧರಿಸಲಾಗಿದ್ದು, ಎಲ್ಲೆಂದ್ರಲ್ಲೇ ಕಾರ್ ಪಾರ್ಕ್ ಮಾಡುವರರ ವಿರುದ್ಧ ಕ್ರಮ ಜರಗಿಸಲಿದೆ.

Trending Kannada DriveSpark Stories:

ಅಬ್ಬಾ!! ತಿಂಗಳಿನಲ್ಲಿ ಟಿಕೆಟ್ ಇಲ್ಲದೆ ಬಿಎಂಟಿಸಿ ಬಸ್‌ಗಳಲ್ಲಿ ಎಷ್ಟು ಜನ ಪ್ರಯಾಣಿಸುತ್ತಾರೆ ಗೊತ್ತೆ ?

ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

Most Read Articles

Kannada
English summary
Read in Kannada: Click pics of illegally parked cars; get rewarded: Gadkari
Story first published: Tuesday, November 21, 2017, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X