ಬಿಡುಗಡೆಯಾಗಲಿರುವ ಮಹೀಂದ್ರಾ ಟಿಯುವಿ300 ಪ್ಲಸ್ ಕಾರಿನ ಬೆಲೆ ಮಾಹಿತಿ ಸೋರಿಕೆ
ಎಸ್‌ಯುವಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಪ್ಲಸ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.
ಎಸ್‌ಯುವಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಪ್ಲಸ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಎಸ್ಯುವಿ ಪ್ರಿಯರಿಗಾಗಿ ಐದು ಹೊಸ ಕಾರು ಮಾದರಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಸರಣಿಯ ಮುಂದುವರಿದ ಭಾಗವನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.9.46 ಲಕ್ಷಕ್ಕೆ ನಿಗದಿ ಮಾಡಿದೆ.

ಈ ಸಂಬಂಧ ಹೊಸ ಕಾರಿನ ಬೆಲೆಗಳ ಕುರಿತಾದ ಕೈಪಿಡಿಯೊಂದು ದೊರೆತಿದ್ದು, ಟಿಯುವಿ300 ಪ್ಲಸ್ ಬೆಲೆಯನ್ನು ರೂ.9.46 ಲಕ್ಷಕ್ಕೆ ನಿಗದಿ ಮಾಡುವ ಮೂಲಕ ಇನ್ಸುರೆನ್ಸ್ ಮತ್ತು ಲೈಫ್ ಟ್ಯಾಕ್ಸ್, ರಿಜಿಸ್ಟೇಷನ್ ಸೇರಿ ಆನ್ ರೋಡ್ ಬೆಲೆಯನ್ನು ರೂ.11.15 ಲಕ್ಷಕ್ಕೆ ಮಾರಾಟ ಮಾಡಲಿದೆ ಎಂಬ ಮಾಹಿತಿ ದೊರೆತಿದೆ.

ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಯುವಿ300 ಮಾದರಿಗಿಂತ ಪ್ಲಸ್ ಆವೃತ್ತಿಯು ಅತಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದ್ದು, ಕ್ಯಾಬಿನ್ ಭಾಗ ಮತ್ತು ಕಾರಿನ ಎಡ್ಜ್‌ಗಳಲ್ಲಿ ವಿಶೇಷ ವಿನ್ಯಾಸವನ್ನು ಕೈಗೊಂಡಿರುವುದು ಈ ಹಿಂದಿ ಸ್ಪಾಟ್ ಟೆಸ್ಟಿಂಗ್‌ನಲ್ಲಿ ಖಚಿತವಾಗಿದೆ.
Recommended Video


ಇನ್ನು ಹೆಚ್ಚುವರಿಯಾಗಿ ಟಿಯುವಿ300 ಪ್ಲಸ್ ಮಾದರಿಯಲ್ಲಿ ಆಟೋಮೆಟಿಕ್ ಕ್ಲೈಮೆಟ್ ಕಂಟ್ರೊಲರ್, ಹಿಂಭಾಗದ ಕ್ಯಾಬಿನ್‌ನಲ್ಲೂ ಎಸಿ ವ್ಯವಸ್ಥೆ ಸೇರಿದಂತೆ ಸುಧಾರಿತ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಚಾಲಕ ಸೇರಿ 7 ಜನ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ.

ಎಂಜಿನ್ ಸಾಮರ್ಥ್ಯ ಈ ಹಿಂದಿನ ಮಾದರಿಯಂತೆ ಟಿಯುವಿ300 ಪ್ಲಸ್ ಮಾದರಿಯು 1.99-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 119-ಬಿಎಚ್‌ಪಿ ಉತ್ಪಾದಿಸಬಲ್ಲ ಗುಣಹೊಂದಿದೆ.
ತಪ್ಪದೇ ಓದಿ- ಹೇಗಿದೆ ನೋಡ್ರಿ ಸ್ವಾಮಿ- ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್ಯುವಿ

ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿರುವ ಟಿಯುವಿ300 ಪ್ಲಸ್ ಆವೃತ್ತಿಯು 2018ರ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಮತ್ತು ಹೊಸ ಎಂಪಿವಿ ಒಂದನ್ನು ಬಿಡುಗಡೆ ಮಾಡುವ ತವಕದಲ್ಲಿರುವ ಮಹೀಂದ್ರಾ ಸಂಸ್ಥೆಯು ಟಿಯುವಿ300 ಪ್ಲಸ್ ಮಾದರಿಯನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಬಿಡುಗಡೆಯ ಸಂಪೂರ್ಣ ಮಾಹಿತಿ ನಿಮ್ಮ ಡ್ರೈವ್ ಸ್ಪಾರ್ಕ್‌ನಲ್ಲಿ ಲಭ್ಯವಾಗಲಿದೆ.
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications