ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಾಗಲಿವೆ ಮಹೀಂದ್ರಾ ಎಕ್ಸ್‌ಯುವಿ500..!!

ಎಸ್‌ಯುವಿ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮಹೀಂದ್ರಾ ಸಂಸ್ಥೆಯ ಎಕ್ಸ್‌ಯುವಿ 500 ಕಾರು ಆವೃತ್ತಿಯು ಸದ್ಯ ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು,ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿ ಪರಿಚಯಿಸುತ್ತಿದೆ.

By Praveen

ಎಸ್‌ಯುವಿ ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮಹೀಂದ್ರಾ ಸಂಸ್ಥೆಯ ಎಕ್ಸ್‌ಯುವಿ 500 ಕಾರು ಆವೃತ್ತಿಯು ಸದ್ಯ ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲೂ ಪರಿಚಯಿಸುತ್ತಿದೆ.

ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಾಗಲಿವೆ ಮಹೀಂದ್ರಾ ಎಕ್ಸ್‌ಯುವಿ500..!!

ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆಯ ಅತಿಹೆಚ್ಚು ಬೇಡಿಕೆ ಹೊಂದಿರುವ ಎಕ್ಸ್‌ಯುವಿ500 ಮಾದರಿಯನ್ನು ಡೀಸೆಲ್ ಜೊತೆ ಪೆಟ್ರೋಲ್ ಮಾದರಿಯಲ್ಲೂ ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಹೊಸ ಎಂಜಿನ್‌ಗಳು ಬಿಡುಗಡೆಗೆ ಸಜ್ಜುಗೊಂಡಿವೆ.

ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಾಗಲಿವೆ ಮಹೀಂದ್ರಾ ಎಕ್ಸ್‌ಯುವಿ500..!!

ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ500 ಕಾರು ಸದ್ಯ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿದ್ದು, 2.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಾಗಲಿವೆ ಮಹೀಂದ್ರಾ ಎಕ್ಸ್‌ಯುವಿ500..!!

ಜೊತೆಗೆ ಪೆಟ್ರೋಲ್ ಆವೃತ್ತಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಗಳಲ್ಲಿ ಆಯ್ಕೆಗೆ ಲಭ್ಯವಿರುವ ಸಾಧ್ಯತೆಗಳಿದ್ದು, ಎಂ ಹವಾಕ್ ಎಂಜಿನ್ ಪಡೆದುಕೊಳ್ಳಲಿವೆ.

ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಾಗಲಿವೆ ಮಹೀಂದ್ರಾ ಎಕ್ಸ್‌ಯುವಿ500..!!

ಇದಲ್ಲದೇ ಮಹೀಂದ್ರಾ ಸಂಸ್ಥೆಯ ಮತ್ತೊಂದು ಬಹುನೀರಿಕ್ಷಿತ ಮಾದರಿಯಾದ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕೂಡಾ ಮುಂದಿನ ತಿಂಗಳು ಬಿಡುಯಾಗುತ್ತಿದ್ದು, ಅದು ಕೂಡಾ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದೆ.

ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಾಗಲಿವೆ ಮಹೀಂದ್ರಾ ಎಕ್ಸ್‌ಯುವಿ500..!!

ಹೀಗಾಗಿ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ನಂತರವಷ್ಟೇ ಎಕ್ಸ್‌ಯುವಿ500 ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಮಹೀಂದ್ರಾ ಸಂಸ್ಥೆಯು, ಹೊಸದಾಗಿ ಬಿಡುಗಡೆಯಾಗಿ ಜೀಪ್ ಕಂಪಾಸ್ ಮಾದರಿಗಳಿಗೆ ಪೈಪೋಟಿ ನೀಡುವ ಕಾತುರದಲ್ಲಿದೆ.

ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಾಗಲಿವೆ ಮಹೀಂದ್ರಾ ಎಕ್ಸ್‌ಯುವಿ500..!!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ಉತ್ತಮ ಕಾರ್ಯಕ್ಷಮತೆ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿರುವ ಮಹೀಂದ್ರಾ ಸಂಸ್ಥೆಯು, ಜೀಪ್ ಕಂಪಾಸ್ ಸೇರಿದಂತೆ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗುವ ನಿಟ್ಟಿನಲ್ಲಿ ಹೊಸ ಉತ್ಪನ್ನಗಳನ್ನು ಅಭಿವೃದ್ದಿ ಕೈಗೊಳ್ಳುತ್ತಿದೆ.

Most Read Articles

Kannada
English summary
Read in Kannada about Mahindra XUV500 Petrol Model Under Development.
Story first published: Monday, August 7, 2017, 18:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X