ಯುಎಇಯಲ್ಲಿ ಕಾಣಿಸಿಕೊಂಡ ಮಹೀಂದ್ರಾ ಪೆಟ್ರೋಲ್ ಎಕ್ಸ್‌ಯುವಿ500 ಕಾರು

Written By:

ಪೆಟ್ರೋಲ್ ಎಂಜಿನ್ ಹೊಂದಿರುವ ಸಣ್ಣ ಕಾರುಗಳು ಭಾರತದ ಅನೇಕ ಕಾರು ಖರೀದಿದಾರರಿಗೆ ಹೆಚ್ಚು ಒಲವು ಹೊಂದಿದ್ದಾರೆ, ಆದರೆ ಇದೇ ರೀತಿಯ ಒಲವನ್ನು ಪೆಟ್ರೋಲ್ ಎಂಜಿನ್ ಹೊಂದಿರುವ ಎಸ್‌ಯುವಿ ಕಾರುಗಳ ಮೇಲೆ ಹೊಂದಿಲ್ಲ ಎನ್ನುವುದನ್ನು ನಾವಿಲ್ಲಿ ಕಾಣಬಹುದಾಗಿದೆ.

ಆದರೂ ಸಹ ಭಾರತೀಯ ವಾಹನ ತಯಾರಕ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಪೆಟ್ರೋಲ್ ರೂಪಾಂತರ ಹೊಂದಿರುವ ಎಕ್ಸ್‌ಯುವಿ500 ಕಾರನ್ನು ಪರೀಕ್ಷೆ ಮಾಡುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದರಲ್ಲಿಯೇ ತಿಳಿಸಲಿದೆ.

ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು ಯುಎಇ ದೇಶದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಗಳನ್ನು 4x4 ಎಂಬ ಭಾರತದ ಫೇಸ್‌ಬುಕ್ ಗ್ರೂಪ್ ಈ ಕಾರಿನ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಪರೀಕ್ಷೆ ನೆಡೆಸಲಾಗುತ್ತಿರುವ ಈ ಪೆಟ್ರೋಲ್ ಎಕ್ಸ್‌ಯುವಿ500 ವಾಹನ 1,00,000 ಕಿ.ಮೀ ದೂರ ಕ್ರಮಿಸಿದ ನಂತರ ಈ ಕಾರಿನ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲು ಕಂಪನಿ ತೀರ್ಮಾನಿಸಿದೆ.

ಪೆಟ್ರೋಲ್ ಎಕ್ಸ್‌ಯುವಿ500 ವಾಹನವು ಈಗಾಗಲೇ 70,000 ಕಿ.ಮೀ ಕ್ರಮಿಸಿದ್ದು, ಈ ವರ್ಷದ ಅಂತ್ಯದ ವೇಳೆಗೆ ಯುಎಇಯಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾರು 2-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಇಂಜಿನ್ ಹೊಂದಿರುವ ಕಾರು ಎನ್ನಲಾಗಿದ್ದು, ಟರ್ಬೊಚಾರ್ಜರ್‌ನೊಂದಿಗೆ ಬಿಡುಗಡೆಗೊಳ್ಳಲಿದೆಯೇ ಎಂಬ ಪ್ರೆಶ್ನೆ ಎದುರಾಗಿದೆ.

ಈ ಕಾರಿನ ಎಂಜಿನ್ 150 ರಷ್ಟು ಅಶ್ವಶಕ್ತಿ ಉತ್ಪಾಧಿಸಬಹುದು ಮತ್ತು ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರು ಹೊಂದಿರಲಿದೆ ಎನ್ನಲಾಗಿದೆ.

English summary
Indian automaker Mahindra and Mahindra is working on the petrol variant of the XUV500. The petrol version of the SUV was spotted in UAE.
Please Wait while comments are loading...

Latest Photos