ರೂ.15.45 ಲಕ್ಷಕ್ಕೆ ಮಹೀಂದ್ರಾ ಎಕ್ಸ್‌ಯುವಿ500 ಡಬ್ಲ್ಯು9 ಬಿಡುಗಡೆ

Written By:

ಎಸ್‌ಯುವಿ ವಿಭಾಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ನಿರ್ಮಾಣದ ಎಕ್ಸ್‌ಯುವಿ500 ಕಾರು ಮಾದರಿಯನ್ನು ಇದೀಗ ಉನ್ನತಿಕರಣ ಮಾಡಲಾಗಿದ್ದು, ಡಬ್ಲ್ಯು9 ಎಂಬ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ರೂ.15.45 ಲಕ್ಷಕ್ಕೆ ಮಹೀಂದ್ರಾ ಎಕ್ಸ್‌ಯುವಿ500 ಡಬ್ಲ್ಯು9 ಬಿಡುಗಡೆ

ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ತರದೇ ಕೇವಲ ಹೊರ ಮತ್ತು ಒಳ ವಿನ್ಯಾಸಗಳಲ್ಲಿ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಎಕ್ಸ್‌ಯುವಿ500 ಡಬ್ಲ್ಯು9 ಆವೃತ್ತಿಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 15.45 ಲಕ್ಷಕ್ಕೆ ಬಿಡುಗಡೆಗೊಳಿಸಿದೆ.

ರೂ.15.45 ಲಕ್ಷಕ್ಕೆ ಮಹೀಂದ್ರಾ ಎಕ್ಸ್‌ಯುವಿ500 ಡಬ್ಲ್ಯು9 ಬಿಡುಗಡೆ

ಹೀಗಾಗಿ ಈ ಹಿಂದಿನ 2.2-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಅನ್ನು ಎಕ್ಸ್‌ಯುವಿ500 ಡಬ್ಲ್ಯು9 ಮಾದರಿಯಲ್ಲೂ ಮುಂದುವರಿಸಲಾಗಿದ್ದು, 138-ಬಿಎಚ್‌ಪಿ ಮತ್ತು 330-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಒದಲಾಗಿದೆ.

ರೂ.15.45 ಲಕ್ಷಕ್ಕೆ ಮಹೀಂದ್ರಾ ಎಕ್ಸ್‌ಯುವಿ500 ಡಬ್ಲ್ಯು9 ಬಿಡುಗಡೆ

ಇನ್ನು ಹೊಸದಾಗಿ ಆಲ್ ವೀಲ್ಹ್ ಡ್ರೈವ್ ತಂತ್ರಜ್ಞಾನವನ್ನು ಆಯ್ಕೆ ರೂಪದಲ್ಲಿ ಒದಗಿಸಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಹೊಸ ಕಾರಿನಲ್ಲಿ ಅಳವಡಿಕೆ ಮಾಡಲಾಗಿದೆ.

Recommended Video - Watch Now!
Tata Nexon Price And Features Variant-wise - DriveSpark
ರೂ.15.45 ಲಕ್ಷಕ್ಕೆ ಮಹೀಂದ್ರಾ ಎಕ್ಸ್‌ಯುವಿ500 ಡಬ್ಲ್ಯು9 ಬಿಡುಗಡೆ

ಜೊತೆಗೆ ಒಳ ವಿನ್ಯಾಸದಲ್ಲಿ ಹಿಂದಿನ ಮಾದರಿಗಿಂತ ಗುರುತರ ಬದಲಾವಣೆ ತರಲಾಗಿದ್ದು, 7.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಪುಶ್ ಬಟನ್ ಸ್ಟಾರ್ಟ್, ಕೀ ಲೇಸ್ ಎಂಟ್ರಿ, ಇಕೋ ಸೆನ್ ಟೆಕ್ನಾಲಜಿ ಸೌಲಭ್ಯಗಳ ಅಳವಡಿಕೆ ಮಾಡಲಾಗಿದೆ.

ರೂ.15.45 ಲಕ್ಷಕ್ಕೆ ಮಹೀಂದ್ರಾ ಎಕ್ಸ್‌ಯುವಿ500 ಡಬ್ಲ್ಯು9 ಬಿಡುಗಡೆ

ಸುರಕ್ಷಾ ಸೌಲಭ್ಯಗಳಿಗೂ ಎಕ್ಸ್‌ಯುವಿ500 ಡಬ್ಲ್ಯು9ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ ಸೇರಿದಂತೆ ಅಗತ್ಯ ಸೌಲಭ್ಯಗಳು ಹೊಸ ಕಾರಿನಲ್ಲಿ ಲಭ್ಯವಿರಲಿವೆ.

ರೂ.15.45 ಲಕ್ಷಕ್ಕೆ ಮಹೀಂದ್ರಾ ಎಕ್ಸ್‌ಯುವಿ500 ಡಬ್ಲ್ಯು9 ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಸಕ್ತ ಮಾರುಕಟ್ಟೆಯಲ್ಲಿ ಸುಧಾರಿತ ಎಸ್‌ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ಹಿನ್ನೆಲೆಯಲ್ಲಿ ಮಹೀಂದ್ರಾ ಸಂಸ್ಥೆ ಕೂಡಾ ಈ ಹಿಂದೆ ಬಿಡುಗಡೆ ಮಾಡಿದ್ದ ಎಕ್ಸ್‌ಯುವಿ500 ಮಾದರಿಯನ್ನೇ ಸುಧಾರಿತ ತಂತ್ರಜ್ಞಾನಗಳ ಜೊತೆಗೆ ಉನ್ನತಿಕರಿಸಿ ಮರುಬಿಡುಗಡೆ ಮಾಡಿದೆ.

English summary
Read in Kannada about Mahindra XUV500 W9 Launched In India At Rs 15.45 Lakh.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark