ಬಲೆನೊ ಆಲ್ಫಾ ಆವೃತ್ತಿಯ ಸ್ವಯಂಚಾಲಿತ ಮಾದರಿ ಭಾರತದಲ್ಲಿ ಬಿಡುಗಡೆ

Written By:

ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಬಲೆನೊ ಆಲ್ಫಾ ಮಾದರಿಯಲ್ಲಿ ಸ್ವಯಂಚಾಲಿತ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
ಬಲೆನೊ ಆಲ್ಫಾ ಆವೃತ್ತಿಯ ಸ್ವಯಂಚಾಲಿತ ಮಾದರಿ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಬಲೆನೊ ಆಲ್ಫಾ ಸ್ವಯಂಚಾಲಿತ ಕಾರು ಅನಾವರಣಗೊಂಡಿದ್ದು, ಈ ಕಾರಿನ ಉನ್ನತ ಶೇಣಿಯ ಕಾರು ನಿರಂತರ ವೇರಿಯೇಬಲ್ ಪ್ರಸಾರ(ಸಿವಿಟಿ) ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿದ್ದು, ಈ ವಾಹನವು ರೂ. 8.34 ಲಕ್ಷ ರೂ ಎಕ್ಸ್ ಷೋ ರೂಂ (ದೆಹಲಿ) ಬೆಲೆ ಪಡೆದುಕೊಂಡಿದೆ.

ಬಲೆನೊ ಆಲ್ಫಾ ಆವೃತ್ತಿಯ ಸ್ವಯಂಚಾಲಿತ ಮಾದರಿ ಭಾರತದಲ್ಲಿ ಬಿಡುಗಡೆ

ಈ ಮೊದಲು ಮಾರುತಿ ಸುಜುಕಿ ತನ್ನ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು 2015ರಲ್ಲಿ ಪ್ರಾರಂಭಿಸಿದ್ದು, ಈ ಕಾರಿನ ಡೆಲ್ಟಾ ಮಾದರಿಯಲ್ಲಿ ಮಾತ್ರ ಸ್ವಯಂಚಾಲಿತ ಗೇರ್ ಬಾಕ್ಸ್ ನೀಡಿತ್ತು.

ಬಲೆನೊ ಆಲ್ಫಾ ಆವೃತ್ತಿಯ ಸ್ವಯಂಚಾಲಿತ ಮಾದರಿ ಭಾರತದಲ್ಲಿ ಬಿಡುಗಡೆ

ನಂತರದ ಬೆಳವಣಿಗೆಯಲ್ಲಿ ಕಂಪನಿಯ ನಿರ್ಧಾರದಂತೆ 2016ರಲ್ಲಿ ಬಲೆನೊ ಝೆಸ್ಟ್ ಆವೃತಿಯಲ್ಲಿಯೂ ಸಹ ಸ್ವಯಂಚಾಲಿತ ಪ್ರಸರಣ ನಿಗಮ ಅಳವಡಿಕೆ ಮಾಡಿದ್ದನ್ನು ನಾವು ನೋಡಬಹುದಾಗಿದೆ.

ಬಲೆನೊ ಆಲ್ಫಾ ಆವೃತ್ತಿಯ ಸ್ವಯಂಚಾಲಿತ ಮಾದರಿ ಭಾರತದಲ್ಲಿ ಬಿಡುಗಡೆ

ಕಾರಿನ ಆಲ್ಫಾ ಮತ್ತು ಝೆಸ್ಟ್ ಎರಡೂ ಮಾದರಿಗಳು ಸ್ವಯಂಚಾಲಿತ ಗೇರ್ ಬಾಕ್ಸ್ ಪಡೆದುಕೊಂಡಿದ್ದು, ಆದರೆ ಕಾರಿನ ಮೂಲ ರೂಪಾಂತರವಾದ ಸಿಗ್ಮಾ ಇನ್ನೂ ಸಹ ಈ ಆಯ್ಕೆ ಪಡೆದುಕೊಂಡಿಲ್ಲ. ಬಲೆನೊ ಫುಲ್ ಲೋಡೆಡ್ ಕಾರು ಪ್ರೊಜೆಕ್ಟರ್ ಲ್ಯಾಂಪುಗಳು, ಎಲ್ಇಡಿ DRLs ಒಳಗೊಂಡಿದೆ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹೊಂದಿದೆ.

ಬಲೆನೊ ಆಲ್ಫಾ ಆವೃತ್ತಿಯ ಸ್ವಯಂಚಾಲಿತ ಮಾದರಿ ಭಾರತದಲ್ಲಿ ಬಿಡುಗಡೆ

ಇದಲ್ಲದೆ, ಬಲೆನೊ ಆಲ್ಫಾ ಸ್ಮಾರ್ಟ್ ಪ್ಲೇ, ಆಪಲ್ ಕಾರ್‌ಪ್ಲೇ ಮತ್ತು ಮಿರರ್ ಲಿಂಕ್, ಪುಶ್ ಬಟನ್ ಸ್ಟಾರ್ಟ್, ಚರ್ಮದ ಸ್ಟೀರಿಂಗ್ ಚಕ್ರ, ಸ್ವಯಂಚಾಲಿತ ಲ್ಯಾಂಪುಗಳ, ಕೀ ಲೆಸ್ ಎಂಟ್ರಿ ಮತ್ತು ಅಲಾಯ್ ವೀಲ್ ಪಡೆದುಕೊಂಡಿದೆ.

ಬಲೆನೊ ಆಲ್ಫಾ ಆವೃತ್ತಿಯ ಸ್ವಯಂಚಾಲಿತ ಮಾದರಿ ಭಾರತದಲ್ಲಿ ಬಿಡುಗಡೆ

ಬಲೆನೊ ಆಲ್ಫಾ ಸ್ವಯಂಚಾಲಿತ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 115 ಏನ್.ಎಂ ತಿರುಗುಬಲದಲ್ಲಿ 83 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಇನ್ನು, ಈ ಪೆಟ್ರೋಲ್ ಎಂಜಿನ್ ಕಾರು 21.4 ಕಿ.ಮೀ ಮೈಲೇಜ್ ನೀಡಲಿದೆ.

ಬಲೆನೊ ಆಲ್ಫಾ ಆವೃತ್ತಿಯ ಸ್ವಯಂಚಾಲಿತ ಮಾದರಿ ಭಾರತದಲ್ಲಿ ಬಿಡುಗಡೆ

ಮಾರುತಿ ಸುಜುಕಿ ಇಲ್ಲಿಯವರೆಗೆ 2 ಲಕ್ಷ ಬಲೆನೊ ಕಾರುಗಳನ್ನು ಮಾರಾಟ ಮಾಡಿದೆ ಇವುಗಳಲ್ಲಿ ಶೇಕಡಾ 11% ರಷ್ಟು ಕಾರುಗಳು ಸ್ವಯಂಚಾಲಿತ ರೂಪಾಂತರ ಹೊಂದಿವೆ. 2020ರ ಒಳಗಾಗಿ 3 ಲಕ್ಷ ಸ್ವಯಂಚಾಲಿತ ಬಲೆನೊ ಕಾರುಗಳನ್ನು ಮಾರಾಟ ಮಾಡುವ ಗುರಿ ಮಾರುತಿ ಹೊಂದಿದೆ.

English summary
Maruti Suzuki has launched the Baleno Alpha automatic in India. The top-of-the-range Alpha variant with the Continuous Variable Transmission (CVT) automatic gearbox is priced at Rs 8.34 lakh ex-showroom (Delhi).
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark