ಯುಟಿಲಿಟಿ ವಾಹನಗಳ ಬಗ್ಗೆ ತನ್ನ ಯೋಜನೆಯನ್ನು ಬಹಿರಂಗಪಡಿಸಿದ ಮಾರುತಿ
ಭಾರತದ ವಾಹನೋದ್ಯಮದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ತನ್ನ ಪ್ರಸಿದ್ಧ ವಾಹನಗಳನ್ನು ಯುಟಿಲಿಟಿ ವಾಹನಗಳನ್ನಾಗಿ ಪರಿವರ್ತಿಸುವ ಬೃಹತ್ ಯೋಜನೆಗೆ ಅಸ್ತು ಎಂದಿದೆ.
ಭಾರತದ ವಾಹನೋದ್ಯಮದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ತನ್ನ ಪ್ರಸಿದ್ಧ ವಾಹನಗಳನ್ನು ಯುಟಿಲಿಟಿ ವಾಹನಗಳನ್ನಾಗಿ ಪರಿವರ್ತಿಸುವ ಬೃಹತ್ ಯೋಜನೆಗೆ ಅಸ್ತು ಎಂದಿದೆ.

ನಾಲ್ಕು ವರ್ಷಗಳ ಯೋಜನೆಯಡಿ ಹೊಸ ನಿರ್ಧಾರವನ್ನು ಕೈಗೊಳ್ಳುವ ಕಡೆ ದೇಶದ ವಾಹನ ಕ್ಷೇತ್ರದ ಅನಭಿಷಿಕ್ತ ದೊರೆ ಮಾರುತಿ ಕಂಪನಿ ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಹೆಚ್ಚು ಹೆಚ್ಚು ಪ್ರಯಾಣಿಕ ವಾಹನಗಳನ್ನು ತಯಾರಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಹಾಗು ಇದರ ಜೊತೆಗೆ ಯುಟಿಲಿಟಿ ವಾಹನಗಳ ವಿಭಾಗದ ಕಡೆಗೂ ಗಮನ ಹರಿಸಲು ಮುಂದಾಗಿದೆ.

'ವೈಎಚ್‌ಬಿ' ಕೋಡ್‌ನೇಮ್ ಯೋಜನೆಯಡಿಯಲ್ಲಿ ಈಗಾಗಲೇ ಎರ್ಟಿಗಾ ಕಾರಿಗೆ ಹೊಸ ರೂಪ ನೀಡಿ ಯುಟಿಲಿಟಿ ಕಾರನ್ನಾಗಿ ಪರಿವರ್ತಿಸುವ ಕೆಲಸ ಭರದಿಂದ ಸಾಗಿದ್ದು, ಮುಂದಿನ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

ಎರ್ಟಿಗಾ ಕಾರಿನ ಜೊತೆ ಎಸ್-ಕ್ರಾಸ್ ಕಾರನ್ನೂ ಸಹ ಉನ್ನತ ದರ್ಜೆಗೆ ತೆಗೆದುಕೊಂಡು ಹೋಗುವ ನಿರ್ಧಾರವನ್ನು ಮಾರುತಿ ಮಾಡಿದ್ದು, ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಈ ಕಾರಿನಲ್ಲಿ ಅಳವಡಿಕೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

"ನಾವು ಹೆಚ್ಚು ಗಮನಹರಿಸದ ವಿಭಾಗವೆಂದರೆ ದೊಡ್ಡ ಎಸ್‌ಯುವಿ ವಿಭಾಗ ಮಾತ್ರ, ಮುಂಬರುವ ದಿನಗಳಲ್ಲಿ ಆ ವಿಭಾಗದಲ್ಲಿಯೂ ಕೂಡ ನೆಲೆಯೂರಲಿ ಯತ್ನಿಸುತ್ತೇವೆ. ಸರಿಯಾದ ದಿನಾಂಕ ಇನ್ನೂ ನಿಗದಿಯಾಗಿಲ್ಲವಾದರೂ 2019ರೊಳಗೆ ಖಚಿತವಾಗಿ ಈ ಭಾಗದಲ್ಲೂ ನಾವಿರಲಿದ್ದೇವೆ" ಎಂದು ಮಾರುತಿ ಸುಜುಕಿ ಅಧ್ಯಕ್ಷ ಆರ್. ಸಿ. ಭಾರ್ಗವ ಹೇಳಿದ್ದಾರೆ.

ಮತ್ತೊಂದು ಪ್ರಸಿದ್ಧ ಕಾರು ಎಂಬ ಖ್ಯಾತಿ ಪಡೆದುಕೊಂಡಿರುವ ಎಸ್‌ಯುವಿ ಬ್ರೀಝಾ ಕಾರಿನ ಪೆಟ್ರೋಲ್ ರೂಪಾಂತರವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮಾರುತಿ ಉದ್ದೇಶಿಸಿದೆ ಎಂದು ಹೇಳಲಾಗಿದೆ.
Recommended Video


ಇದಲ್ಲದೆ ವ್ಯಾಗನಾರ್ ಎಂಪಿವಿ, ಬ್ರೀಝಾಕ್ಕಿಂತ ಉನ್ನತ ಮಟ್ಟದ ಪ್ರೀಮಿಯಂ ಎಸ್‌ಯುವಿ ಕೂಡ ಸಿದ್ಧವಾಗಲಿದೆ ಎಂದು ತಿಳಿದು ಬಂದಿದೆ. ಎರ್ಟಿಗಾ, ಬ್ರೀಝಾ, ಎಸ್ ಕ್ರಾಸ್ ಮತ್ತು ಇಗ್ನೀಸ್ ಮಾತ್ರವಲ್ಲದೆ ಒಟ್ಟು ಎಂಟು ಕಾರುಗಳನ್ನು ಬಿಡುಗಡೆ ಮಾಡಲು ಅದು ಮುಂದಾಗಿದೆ. ಇವುಗಳ ಬೆಲೆ ಐದರಿಂದ 18 ಲಕ್ಷ ರೂ. ಆಗಿರಲಿವೆ.

ಏನಿದು ವೈಎಚ್‌ಬಿ ? ಮೂರು ಸಾಲಿನ ಆಸನ ಹೊಂದಿರುವ ಕಾರಿಗೆ ವೈಎಚ್‌ಬಿ ಎಂದು ಕರೆಯಲ್ಪಡುತ್ತದೆ. ಈ ಕಾರಿನ ಬೆಲೆ ಕನಿಷ್ಠ ರೂ. 12 ಲಕ್ಷದಿಂದ 18 ಲಕ್ಷದ ವರೆಗೆ ಇರಲಿದೆ ಎಂದು ಅಂದಾಜಿಸಬಹುದು.


Click it and Unblock the Notifications








