ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲು ಬರಲಿದೆ ಎಂಜಿ ಮೋಟಾರ್ಸ್ ಕಾರು

Written By:

ಚೀನಾ ದೇಶದ ವಾಹನ ತಯಾರಕ ಎಸ್ಎಐಸಿ ಕಂಪನಿಯು ಎಂ.ಜಿ ಮೋಟಾರ್ಸ್‌ನೊಂದಿಗೆ ಭಾರತೀಯ ಮಾರುಕಟ್ಟೆನ್ನು ಪ್ರವೇಶಿಸಲು ಸಿದ್ವಾಗಿದ್ದು, ಹೊಚ್ಚ ಹೊಸ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲು ಬರಲಿದೆ ಎಂಜಿ ಮೋಟಾರ್ಸ್ ಕಾರು

ಜನರಲ್ ಮೋಟಾರ್ಸ್ ಕಂಪನಿಯ ಹ್ಯಾಲೊಲ್ ಉತ್ಪಾದನಾ ಸೌಲಭ್ಯವನ್ನು ತನ್ನದಾಗಿಸಿಕೊಳ್ಳುವ ಕಾರ್ಯಕ್ಕೆ ಎಂಜಿ ಮೋಟಾರ್ಸ್‌ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಲ್ಲ ಮೂಲಗಳ ಪ್ರಕಾರ, ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡುವ ಕಾಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಮೊದಲು ಬಿಡುಗಡೆಗೊಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲು ಬರಲಿದೆ ಎಂಜಿ ಮೋಟಾರ್ಸ್ ಕಾರು

ಎಂ.ಜಿ ಮೋಟಾರ್ಸ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿರುವಂತಹ ರಾಜೀವ್ ಚಾಬ ಅವರು ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ.

ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲು ಬರಲಿದೆ ಎಂಜಿ ಮೋಟಾರ್ಸ್ ಕಾರು

ಮೊದಲ ಹಂತದಲ್ಲಿ ಎಸ್ಎಐಸಿ ಕಂಪನಿಯು ಹ್ಯಾಲೊಲ್ ಘಟಕದ ನವೀಕರಣಕ್ಕೆ 2 ಸಾವಿರ ಕೋಟಿ ಹೂಡಿಕೆ ಮಾಡಲಿದ್ದು, ವಾರ್ಷಿಕ ಉತ್ಪಾದನೆಯನ್ನು 60,000 ಯುನಿಟ್‌ನಿಂದ 80,000 ಯುನಿಟ್‌ಗೆ ಏರಿಕೆ ಮಾಡಲು ಚಿಂತನೆ ನೆಡೆಸಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲು ಬರಲಿದೆ ಎಂಜಿ ಮೋಟಾರ್ಸ್ ಕಾರು

ಬಲಿಷ್ಠ ಸಾಮರ್ಥ್ಯದೊಂದಿಗೆ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯೋಜನೆಯನ್ನು ಕಂಪನಿ ಹಾಕಿಕೊಂಡಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲು ಬರಲಿದೆ ಎಂಜಿ ಮೋಟಾರ್ಸ್ ಕಾರು

ಆದರೆ, ಎಂ.ಜಿ ಮೋಟಾರ್ಸ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿರುವಂತಹ ರಾಜೀವ್ ಚಾಬ ಅವರು, ಎಂಜಿ ಮೋಟಾರ್ಸ್ ಉತ್ಪನ್ನದ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಮಾಹಿತಿ ಪ್ರಕಾರ, ಕಾಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ನಂತರ ಸಣ್ಣ ಗಾತ್ರದ ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಬಿಡುಗಡೆಯಾಗಲಿದೆ.

ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲು ಬರಲಿದೆ ಎಂಜಿ ಮೋಟಾರ್ಸ್ ಕಾರು

2019ರಲ್ಲಿ ಮೊದಲ ವಾಹನದ ಬಿಡುಗಡೆಯಾಗಲಿದ್ದು, ಈ ಕಂಪನಿಯ ಎರಡನೆಯ ಕಾರಿನ ಅನಾವರಣವು 2020ಕ್ಕೆ ನಿಗದಿಯಾಗಿದೆ ಎಂದು ಚಾಬಾ ತಿಳಿಸಿದ್ದಾರೆ.

English summary
Chinese automaker SAIC is all set to enter the Indian market with the MG Motors and The report also suggests that the first product from MG Motors will be a compact SUV which will rival the Hyundai Creta.
Story first published: Tuesday, September 12, 2017, 15:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark