2019ಕ್ಕೆ ಭಾರತ ಪ್ರವೇಶ ಪಡೆಯಲಿರುವ ಎಂ.ಜಿ ಮೋಟಾರ್ಸ್ ಸ್ಪೆಷಲ್ ಏನು?

ಭಾರತೀಯ ಆಟೋ ಉದ್ಯಮ ವಲಯಕ್ಕೆ ಇತ್ತೀಚೆಗೆ ಜಗತ್ತಿನ ಪ್ರಮುಖ ಕಾರು ಉತ್ಪಾದಕರು ಲಗ್ಗೆಯಿಡುತ್ತಿದ್ದು, ಇದೀಗ ಪ್ರತಿಷ್ಠಿತ ಎಂಜಿ ಮೋಟಾರ್ ಸಂಸ್ಥೆ ಕೂಡಾ ಹೊಸ ಉತ್ಪನ್ನಗಳೊಂದಿಗೆ ಭಾರತ ಪ್ರವೇಶ ಪಡೆಯುತ್ತಿದೆ.

By Praveen

ಭಾರತೀಯ ಆಟೋ ಉದ್ಯಮ ವಲಯಕ್ಕೆ ಇತ್ತೀಚೆಗೆ ಜಗತ್ತಿನ ಪ್ರಮುಖ ಕಾರು ಉತ್ಪಾದಕರು ಲಗ್ಗೆಯಿಡುತ್ತಿದ್ದು, ಇದೀಗ ಪ್ರತಿಷ್ಠಿತ ಎಂಜಿ ಮೋಟಾರ್ಸ್ ಸಂಸ್ಥೆ ಕೂಡಾ ಹೊಸ ಉತ್ಪನ್ನಗಳೊಂದಿಗೆ ಭಾರತ ಪ್ರವೇಶ ಪಡೆಯುತ್ತಿದೆ.

2019ಕ್ಕೆ ಭಾರತ ಪ್ರವೇಶ ಪಡೆಯಲಿರುವ ಎಂ.ಜಿ ಮೋಟಾರ್ ಸ್ಪೆಷಲ್ ಏನು?

1920ರಲ್ಲೇ ಆರಂಭವಾಗಿ ಸ್ಪೋರ್ಟ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬ್ರಿಟನ್ ಮುೂಲದ ಎಂಜಿ ಮೋಟಾರ್ಸ್ ಸಂಸ್ಥೆಯು ಇದೀಗ ಭಾರತದಲ್ಲೂ ತನ್ನ ವಾಣಿಜ್ಯ ಚಟುವಚಟಿಕೆ ಪ್ರಾರಂಭಿಸಿದ್ದು, ಹೊಸ ಮಾದರಿಯ ಪ್ರಯಾಣಿಕ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

2019ಕ್ಕೆ ಭಾರತ ಪ್ರವೇಶ ಪಡೆಯಲಿರುವ ಎಂ.ಜಿ ಮೋಟಾರ್ ಸ್ಪೆಷಲ್ ಏನು?

ಸದ್ಯ ಸಾಲದ ಸುಳಿಯಲ್ಲಿ ಸಿಲುಕಿರುವ ಎಂಜಿ ಮೋಟಾರ್ಸ್ ಸಂಸ್ಥೆಯನ್ನು ಖರೀದಿ ಮಾಡಿರುವ ಚೀನಾ ಮೂಲದ ಎಸ್‌ಎಐಸಿ ಸಂಸ್ಥೆಯು ಎಂಜಿ ಮೋಟಾರ್ಸ್ ಹೆಸರಿನಲ್ಲೇ ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಕೈಗೆಟುಕುವ ದರಗಳಲ್ಲಿ ಹೊಸ ಮಾದರಿಯ ಹ್ಯಾಚ್‌ಬ್ಯಾಕ್ ಕಾರುಗಳನ್ನು ಅಭಿವೃದ್ಧಿ ಮಾಡಲಿದೆ.

2019ಕ್ಕೆ ಭಾರತ ಪ್ರವೇಶ ಪಡೆಯಲಿರುವ ಎಂ.ಜಿ ಮೋಟಾರ್ ಸ್ಪೆಷಲ್ ಏನು?

ಈ ಹಿನ್ನೆಲೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿರುವ ಎಂಜಿ ಮೋಟಾರ್ಸ್, 2019ರ ಎರಡನೇ ತ್ರೈಮಾಸಿಕ ವೇಳೆಗೆ ಎಂಜಿ3 ಹ್ಯಾಚ್‌ಬ್ಯಾಕ್ ಕಾರ್‌ನ್ನು ಬಿಡುಗಡೆ ಮಾಡುವ ಸುಳಿವು ನೀಡಲಿದೆ.

2019ಕ್ಕೆ ಭಾರತ ಪ್ರವೇಶ ಪಡೆಯಲಿರುವ ಎಂ.ಜಿ ಮೋಟಾರ್ ಸ್ಪೆಷಲ್ ಏನು?

ಇದಕ್ಕಾಗಿಯೇ ಭಾರತದಿಂದ ನಿರ್ಗಮನವಾಗಿರೋ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕವನ್ನೇ ಖರೀದಿ ಮಾಡಿರುವ ಎಂಜಿ ಮೋಟಾರ್ಸ್ ಸಂಸ್ಥೆಯು ಗುಜರಾತಿನ ಹೊಲಾಲ್ ಘಟಕದಲ್ಲಿ ಕಾರು ಉತ್ಪಾದನೆಯನ್ನು ಆರಂಭಗೊಳಿಸಿದೆ.

2019ಕ್ಕೆ ಭಾರತ ಪ್ರವೇಶ ಪಡೆಯಲಿರುವ ಎಂ.ಜಿ ಮೋಟಾರ್ ಸ್ಪೆಷಲ್ ಏನು?

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಎಂಜಿ ಮೋಟಾರ್ಸ್ ಕಾರುಗಳು ಖರೀದಿ ಲಭ್ಯವಿರಲಿದ್ದು, ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಮಾರುತಿ ಬಲೆನೊ, ಹ್ಯುಂಡೈ ಐ20, ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಹೋಂಡಾ ಜಾ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ನೀಡುವ ತವಕದಲ್ಲಿದೆ.

2019ಕ್ಕೆ ಭಾರತ ಪ್ರವೇಶ ಪಡೆಯಲಿರುವ ಎಂ.ಜಿ ಮೋಟಾರ್ ಸ್ಪೆಷಲ್ ಏನು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಡಿಮೆ ಬೆಲೆಗಳಲ್ಲಿ ಅತ್ಯುತ್ತಮ ಕಾರು ಮಾದರಿಗಳನ್ನು ಅಭಿವೃದ್ದಿ ಮಾಡುವ ಬಗ್ಗೆ ಹೇಳಿಕೊಂಡಿರುವ ಎಂಜಿ ಮೋಟಾರ್ಸ್ ಭಾರತದಲ್ಲಿ ಹೊಸ ನೀರಿಕ್ಷೆಯೊಂದಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭ ಮಾಡುತ್ತಿದ್ದು, ಸದ್ಯದ ಜನಪ್ರಿಯ ಕಾರುಗಳಿಂತ ಹೇಗೆ ಭಿನ್ನವಾಗಿವೆ ಎಂಬುವುದು ಬಿಡುಗಡೆ ನಂತರವಷ್ಟೇ ತಿಳಿಯಬೇಕಿದೆ.

Most Read Articles

Kannada
English summary
Read in Kannada about MG Motors’ Premium Hatchback To Rival Maruti Baleno And Hyundai Elite i20 In India.
Story first published: Wednesday, August 9, 2017, 14:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X