ಪವರ್ ಫುಲ್ ಎಂಜಿನ್ ಪಡೆದುಕೊಳ್ಳಲಿದೆ ಮಹೀಂದ್ರಾ ಎಕ್ಸ್‌ಯುವಿ 500

Written By:

ಭಾರತೀಯ ಆಟೋ ವಲಯದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹಿನ್ನೆಲೆ ತನ್ನದೇ ಛಾಪು ಮೂಡಿಸಿರುವ ಮಹೀಂದ್ರಾ ಎಕ್ಸ್‌ಯುವಿ 500 ಕಾರು ಆವೃತ್ತಿಯು ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಪವರ್ ಫುಲ್ ಎಂಜಿನ್ ಸೌಲಭ್ಯವನ್ನು ಪಡೆದುಕೊಳ್ಳಲಿದೆ.

ಎಕ್ಸ್‌ಯುವಿ 500 ಮಾದರಿಯನ್ನು ಮತ್ತಷ್ಟು ಜನಪ್ರಿಯತೆಗೊಳಿಸಲು ಮುಂದಾಗಿರುವ ಮಹೀಂದ್ರಾ, ಸದ್ಯದಲ್ಲೇ ಎಂಜಿನ್ ವಿಭಾಗವನ್ನು ಉನ್ನತಿಕರಿಸುವ ಮಹತ್ವದ ಯೋಜನೆಗೆ ಹಸಿರುನಿಶಾನೆ ತೋರಿದೆ.

ಹೀಗಾಗಿ ಚಾಲ್ತಿಯಲ್ಲಿರುವ ಎಕ್ಸ್‌ಯುವಿ 500 ಕಾರಿನ ಎಂಜಿನ್ ಸಾಮರ್ಥ್ಯ ಹೆಚ್ಚಾಗಲಿದ್ದು, ಬಿಡುಗಡೆಗೆ ಸಜ್ಜುಗೊಂಡಿರುವ ಹೊಚ್ಚ ಹೊಸ ಎಕ್ಸ್‌ಯುವಿ 500 ಕಾರು ಮಾದರಿಯೂ 2.2-ಲೀಟರ್ ಟರ್ಬೋಚಾರ್ಜ್ಡ್ ಎಂ-ಹೋಕ್ ಡೀಸೆಲ್ ಎಂಜಿನ್ ಹೊಂದಿದೆ.

ಸದ್ಯ ಬಿಡುಗಡೆಯಾಗುತ್ತಿರುವ ಹೊಸ ಕಾರಿನಲ್ಲಿ 2.2-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಇರಲಿದ್ದು, ಭವಿಷ್ಯದ ಕಾರು ಮಾದರಿಗಳಲ್ಲಿ 2.8-ಲೀಟರ್ ಎಂಜಿನ್‌ಗಿಂತಲೂ ಹೆಚ್ಚಿನ ಶಕ್ತಿ ಪಡೆದುಕೊಳ್ಳಲಿವೆ.

ಇದಲ್ಲದೇ ಮುಂಬರುವ ಹೊಸ ಕಾರು ಮಾದರಿಗಳಲ್ಲೂ ಹೆಚ್ಚಿನ ಸಾಮರ್ಥ್ಯದ ಎಂಜಿನ್ ಸೌಲಭ್ಯಗಳನ್ನು ನೀಡಲಿರುವ ಮಹೀಂದ್ರಾ ಸಂಸ್ಥೆಯು, ಟಾಟಾ ಹೆಕ್ಸಾ, ಟೊಯೊಟೊ ಇನ್ನೋವಾ ಕ್ರೈಸ್ಟಾ, ಹ್ಯುಂಡೈ ಟಕ್ಸನ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಕೆಲವು ವರದಿಗಳ ಪ್ರಕಾರ ಮುಂಬುರುವ ಮಾದರಿಗಳಲ್ಲೇ ಸುಧಾರಿತ ಎಂಜಿನ್ ಸೌಲಭ್ಯವಿರಲಿದ್ದು, ಹೊರ ಮತ್ತು ಒಳ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ತರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುಕಟ್ಟೆಯಲ್ಲಿನ ಪ್ರಸ್ತುತ ಎಸ್‌ಯುವಿ ಮಾದರಿಗಳು ಸುಧಾರಿತ ತಂತ್ರಜ್ಞಾನ ಪಡೆದುಕೊಳ್ಳುತ್ತಿದ್ದು, ಈ ಹಿನ್ನೆಲೆ ಮಾರಾಟ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹೀಂದ್ರಾ ಸಂಸ್ಥೆ ಕೂಡ ಎಕ್ಸ್‌ಯುವಿ 500 ಮಾದರಿಯನ್ನು ಉನ್ನತಿಕರಿಸುತ್ತಿದೆ.

 

English summary
Read in Kannada about Mahindra and Mahindra is working on a more powerful version of the XUV500 SUV.
Story first published: Friday, June 30, 2017, 13:48 [IST]
Please Wait while comments are loading...

Latest Photos