ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

Written By:

ಆಟೋ ಉದ್ಯಮದಲ್ಲಿ ಪ್ರತಿದಿನ ಹೊಸ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಆದರೂ ಬೆಲೆ ಮತ್ತು ವಿನೂತನ ತಂತ್ರಜ್ಞಾನಗಳ ವಿಚಾರಕ್ಕೆ ಕೆಲವು ಕಾರು ಮಾದರಿಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುವುದರಲ್ಲಿ ಯಶಸ್ವಿಯಾಗುತ್ತವೆ. ಇಂತಹ ಪ್ರಮುಖ ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

ಆಡಿ-ಎ3

ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಆಡಿ, ತನ್ನ ಹೊಸ ಮಾದರಿಯ ಎ3 ಸೆಡಾನ್ ಕಾರನ್ನು ಇದೇ ತಿಂಗಳು 6ಕ್ಕೆ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ವಿನೂತನ ತಂತ್ರಜ್ಞಾನಗಳೊಂದಿಗೆ ಸಿದ್ಧಗೊಂಡಿರುವ ಎ3 ಮಾದರಿಯೂ ಸ್ಪರ್ಧಾತ್ಮಕ ಬೆಲೆಗಳಿಗೆ ಲಭ್ಯವಿರಲಿದೆ.

ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

ಲ್ಯಾಂಬೋರ್ಗಿನಿ- ಪರ್ಫಾರ್ಮೆನೆಟ್

ಸೂಪರ್ ಕಾರುಗಳಲ್ಲಿ ಒಂದಾಗಿರುವ ಇಟಾಲಿಯನ್ ಮೂಲದ ಲ್ಯಾಂಬೋರ್ಗಿನಿ ಸಂಸ್ಥೆಯ, ಇದೇ ತಿಂಗಳು 7ರಂದು ಹೊಸ ಆವೃತ್ತಿ ಪರ್ಫಾರ್ಮೆನೆಟ್ಬಿಡುಗಡೆ ಮಾಡಲಿದೆ. ಪ್ರತಿಷ್ಠಿತ ಕಾರುಗಳಲ್ಲಿ ಒಂದಾಗಿರುವ ಲ್ಯಾಂಬೋರ್ಗಿನಿ ಪರ್ಫಾರ್ಮೆನೆಟ್ ಬೆಲೆ ರೂ. 5 ಕೋಟಿ ಹೆಚ್ಚು ಎಂದು ಅಂದಾಜಿಸಲಾಗಿದೆ.

ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

ವೋಲ್ವೋ- ಎಸ್60 ಪೋಲೆಸ್ಟಾರ್

ಐಷಾರಾಮಿ ಕಾರು ವಿಭಾಗದಲ್ಲಿ ತನ್ನದೇ ಆದ ಮಾರಾಟ ವಲಯ ಕಾಪಾಡಿಕೊಂಡಿರುವ ವೋಲ್ವೋ ಮಗದೊಂದು ಆಕರ್ಷಕ ಕಾರನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಬೆಲೆ ವಿಚಾರವಾಗಿ ಗಮನ ಸೆಳೆದಿರುವ ಎಸ್60 ಪೋಲೆಸ್ಟಾರ್ ಶ್ರೇಣಿಯು ಇದೇ ತಿಂಗಳು 17ಕ್ಕೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

ದಟ್ಸನ್ ಗೋ- ಗೋ+

4 ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ದಟ್ಸನ್ ಗೋ ಸಂಸ್ಥೆಯು ಮತ್ತೇರಡು ಹೊಚ್ಚ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಗೋ ಆ್ಯಂಡ್ ಗೋ+ ಮಾದರಿಗಳನ್ನು ಪರಿಚಯಿಸುತ್ತಿದ್ದು, ವಿನೂತನ ತಂತ್ರಜ್ಞಾನಗಳಿಂದ ಸಿದ್ದಗೊಂಡಿವೆ.

ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

ಟೊಯೊಟಾ- ಇನೋವಾ ಕ್ರಿಸ್ಟಾ(ಸ್ಪೋರ್ಟ್ಸ್)

ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಸ್ಥಾನ ಹೊಂದಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು, ಸದ್ಯದಲ್ಲೇ ಸ್ಟೋರ್ಟ್ಸ್ ಆವೃತ್ತಿಯ ಇನೋವಾ ಕ್ರಿಸ್ಟಾ ಕಾರನ್ನು ಬಿಡುಗಡೆಗೊಳಿಸಲಿದೆ. ಆಕರ್ಷಕ ಹೊರ ವಿನ್ಯಾಸ ಹೊಂದಿರುವ ನೂತನ ಮಾದರಿಯೂ, ಐಷಾರಾಮಿ ಕಾರುಗಳಿಗೂ ಸ್ಪರ್ಧೆ ಒಡ್ಡುವ ತವಕದಲ್ಲಿದೆ.

ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

ಜೀಪ್- ಕಂಪಾಸ್

ಎಸ್‌ಯುವಿ ಮಾದರಿಯಲ್ಲಿ ಅಭಿವೃದ್ದಿ ಹೊಂದಿರುವ ಹೊಚ್ಚ ಹೊಸ ಜೀಪ್ ಕಂಪಾಸ್ ಇದೇ ವಾರ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಬೆಲೆ ವಿವರಗಳನ್ನು ಬಿಟ್ಟು

ಕೊಡದ ಜೀಪ್ ಸಂಸ್ಥೆಯು, ಭಾರತೀಯ ಮಾರುಕಟ್ಟೆಗೆ ತಕ್ಕಂತೆ ಹೊಸ ವಿನ್ಯಾಸಗಳನ್ನು ಪರಿಚಯಿಸುತ್ತಿದೆ.

ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

ಮಾರುತಿ ಸುಜುಕಿ- ಸ್ವಿಫ್ಟ್ ಡಿಜೈರ್

ಭಾರತೀಯ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ, ಇದೇ ತಿಂಗಳು ಕೊನೆಯಲ್ಲಿ ಹೊಚ್ಚ ಹೊಸ ಸ್ವಿಫ್ಟ್ ಡಿಜೈರ್ ಕಾರು ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದೆ. ಸೆಡಾನ್ ಮಾದರಿಯಲ್ಲಿ ಸಿದ್ಧಗೊಂಡಿರುವ ಹೊಸ ಮಾದರಿಯ ರಹಸ್ಯ ಚಿತ್ರಗಳು ಈ ಹಿಂದೆಯೇ ಸೋರಿಕೆಯಾಗಿದ್ದು, ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಕಾರು ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿ..!

ರಾಜ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ ವಿನೂತನ ಟಿಗೋರ್ ಕಾರಿನ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿ ಕ್ಲಿಕ್ ಮಾಡಿ.

English summary
Here is a list of new cars to be launched in the Indian market in April 2017. Read more to get all the details on the soon to be launched cars.
Please Wait while comments are loading...

Latest Photos