ಹ್ಯುಂಡೈ ವೆರ್ನಾ ನ್ಯೂ ಜನರೇಷನ್ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಅಗಸ್ಟ್ 22ರಂದು ಬಿಡುಗಡೆಯಾದ ನ್ಯೂ ಜನರೇಷನ್ ವೆರ್ನಾ ಖರೀದಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದ್ದು, ಹೊಸ ಬಗೆಯ ಸೌಲಭ್ಯಗಳು ಮತ್ತು ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಹಿನ್ನೆಲೆ ಬೃಹತ್ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

By Praveen

ಅಗಸ್ಟ್ 22ರಂದು ಬಿಡುಗಡೆಯಾದ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಖರೀದಿಗೆ ಭಾರೀ ಬೇಡಿಕೆ ಸೃಷ್ಠಿಯಾಗಿದ್ದು, ಹೊಸ ಬಗೆಯ ಸೌಲಭ್ಯಗಳು ಮತ್ತು ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಹಿನ್ನೆಲೆ ಬೃಹತ್ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹ್ಯುಂಡೈ ವೆರ್ನಾ ನ್ಯೂ ಜನರೇಷನ್ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಬಿಡುಗಡೆಯಾದ ದಿನದಿಂದ ಇದುವರೆಗೆ ನ್ಯೂ ಜನರೇಷನ್ ವೆರ್ನಾ ಖರೀದಿಗಾಗಿ 7 ಸಾವಿರ ಬುಕ್ಕಿಂಗ್ ಬಂದಿದ್ದು, 70 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಹೊಸ ಕಾರಿನ ಕುರಿತಾದ ಅಗತ್ಯ ಮಾಹಿತಿಯನ್ನು ಪಡೆದುಕೊಂಡಿರುವುದಾಗಿ ಹ್ಯುಂಡೈ ಇಂಡಿಯಾ ಅಧಿಕೃತ ಮಾಹಿತಿ ಹೊರಹಾಕಿದೆ.

Recommended Video

2017 Hyundai Verna Launched In India - DriveSpark
ಹ್ಯುಂಡೈ ವೆರ್ನಾ ನ್ಯೂ ಜನರೇಷನ್ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಇನ್ನು ವಿಶೇಷ ವಿನ್ಯಾಸಗಳಿಂದಾಗಿ ಗ್ರಾಹಕರನ್ನು ಸೆಳೆಯುತ್ತಿರುವ ನ್ಯೂ ಜನರೇಷನ್ ವೆರ್ನಾ ಆರಂಭಿಕ ಕಾರು ಆವೃತ್ತಿಯ ಬೆಲೆಯು ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ರೂ.7.99 ಲಕ್ಷಕ್ಕೆ ಹಾಗೂ ಉನ್ನತ ಆವೃತ್ತಿಯ ಬೆಲೆಯು ರೂ.12.23 ಲಕ್ಷಕ್ಕೆ ಲಭ್ಯವಿದೆ.

ಹ್ಯುಂಡೈ ವೆರ್ನಾ ನ್ಯೂ ಜನರೇಷನ್ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಮೂರನೆಯ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಎಕ್ಸಿಕ್ಯೂಟಿವ್ ಸೆಡಾನ್ ಮಾದರಿಯಲ್ಲಿ ಅಭಿವೃದ್ಧಿಗೊಂಡಿದ್ದು, ಹೋಂಡಾ ಕಂಪನಿಯ ಸಿಟಿ, ಮಾರುತಿ ಸುಜುಕಿ ಸಿಯಾಜ್ ಕಾರು ಮಾದರಿಗಳೊಂದಿಗೆ ತೀವ್ರ ಸ್ಪರ್ಧೆ ನೆಡೆಸುವ ತವಕದಲ್ಲಿದೆ.

ಹ್ಯುಂಡೈ ವೆರ್ನಾ ನ್ಯೂ ಜನರೇಷನ್ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಸುಧಾರಿತ ತಂತ್ರಜ್ಞಾನವನ್ನು ಪಡೆದುಕೊಂಡು ಬಿಡುಗಡೆಗೊಂಡಿರುವ ನ್ಯೂ ಜನರೇಷನ್ ಹ್ಯುಂಡೈ ವೆರ್ನಾ ಕಾರು ಡಿಸೇಲ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಿದ್ದು, ಇಎಕ್ಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ಎಂಬ ಆರು ವಿವಿಧ ಆವೃತಿಗಳಲ್ಲಿ ಸಿದ್ಧಗೊಂಡಿದೆ.

ಹ್ಯುಂಡೈ ವೆರ್ನಾ ನ್ಯೂ ಜನರೇಷನ್ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಮೂರನೆಯ ತಲೆಮಾರಿನ ನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರು, 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್ 151 ಎನ್‌ಎಂ ತಿರುಗುಬಲದಲ್ಲಿ 121ರಷ್ಟು ಟಾರ್ಕ್ ಉತ್ಪಾದಿಸುತ್ತದೆ ಮತ್ತು ಡೀಸೆಲ್ ಎಂಜಿನ್ 260 ಎನ್‌ಎಂ ತಿರುಗುಬಲದಲ್ಲಿ 126ರಷ್ಟು ಟಾರ್ಕ್ ಉತ್ಪಾದಿಸಬಲ್ಲವು.

ಹ್ಯುಂಡೈ ವೆರ್ನಾ ನ್ಯೂ ಜನರೇಷನ್ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಎರಡೂ ಮಾದರಿಯೂ ಸಹ 6-ಸ್ಪೀಡ್ ಮಾನ್ಯುಯಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಪೆಟ್ರೋಲ್ ಆವೃತಿಯ ಕಾರು ಲೀಟರಿಗೆ 17.7 ಕಿಲೋಮೀಟರ್‌ ಮೈಲೇಜ್ ನೀಡಲಿದೆ ಹಾಗು ಡೀಸೆಲ್ ಕಾರು 24.76 ಕಿಲೋಮೀಟರ್‌ ಮೈಲೇಜ್ ನೀಡಲಿದೆ.

ಹ್ಯುಂಡೈ ವೆರ್ನಾ ನ್ಯೂ ಜನರೇಷನ್ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಇದೇ ಕಾರಣಕ್ಕೆ ನ್ಯೂ ಜನರೇಷನ್ ವೆರ್ನಾ ಖರೀದಿಗೆ ಭಾರೀ ಬೇಡಿಕೆ ಬಂದಿದ್ದು, ಗ್ರಾಹಕರ ಬೇಡಿಕೆ ಅನುಗುಣವಾಗಿ ಹೊಸ ಕಾರು ಉತ್ಪಾದನೆಗೆ ವಿಶೇಷ ಗಮನಹರಿಸಿರುವ ಹ್ಯುಂಡೈ ಸಂಸ್ಥೆಯು ಮುಂಬರುವ ದಿನಗಳಲ್ಲಿ ಸೆಡಾನ್ ವಿಭಾಗದ ಬೆಸ್ಟ್ ಆವೃತ್ತಿಗಳಲ್ಲಿ ನಂ.1 ಆಗಿ ಹೊರಹೊಮ್ಮುವ ತವಕದಲ್ಲಿದೆ.

Most Read Articles

Kannada
English summary
Read in Kannada about Newly Launched Hyundai Verna Receives Tremendous Response.
Story first published: Friday, September 1, 2017, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X