Subscribe to DriveSpark

ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಟೀಸರ್ ಬಿಡುಗಡೆ

Written By:

ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಭಾರತದಲ್ಲಿ ಮೂರನೇ ತಲೆಮಾರಿನ ವೆರ್ನಾ ಕಾರಿನ ಪರಿಚಯ ಮಾಡಲಿದ್ದು, ಈ ಹಿನ್ನೆಲೆ ಹೊಸ ಕಾರಿನ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಟೀಸರ್ ಬಿಡುಗಡೆ ಮಾಡಿದೆ.

ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಟೀಸರ್ ಬಿಡುಗಡೆ

ಹ್ಯುಂಡೈ ಸಂಸ್ಥೆಯ ಯಶಸ್ವಿ ವೆರ್ನಾ ಸೆಡಾನ್ ಕಾರಿನ ಮೂರನೇ ಆವೃತಿ ಈಗಾಗಲೇ ಬಿಡುಗಡೆಗೊಳ್ಳಲು ಸಿದ್ದವಾಗಿದ್ದು, ಟೀಸರ್ ಮೂಲಕ ಹೊಸ ಕಾರಿನ ವಿನ್ಯಾಸಗಳ ಪರಿಚಯಿಸುವ ನಿಟ್ಟಿನಲ್ಲಿ ಟೀಸರ್‌ಗೊಳಿಸಿರುವ ಹ್ಯುಂಡೈ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಟೀಸರ್ ಬಿಡುಗಡೆ

ಹ್ಯುಂಡೈ ಬಿಡುಗಡೆ ಮಾಡಿರುವ ಟೀಸರ್‌ ಪ್ರಕಾರ ಹೊಚ್ಚ ಹೊಸ ವೆರ್ನಾ ಮಾದರಿಯೂ ಅದ್ಭುತ ಹೊರ ವಿನ್ಯಾಸಗಳನ್ನು ಹೊಂದಿದ್ದು, ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಬದಲಾವಣೆ ತರಲಾಗಿದೆ.

ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಟೀಸರ್ ಬಿಡುಗಡೆ

ಹೊಸ ಕಾರಿನ ಬಾರ್ಡರ್‌ಗಳಲ್ಲಿ ಎಲ್‌ಇಡಿ ವ್ಯವಸ್ಥೆಯಿದ್ದು, ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್ ವಿಭಾಗದಲ್ಲಿ ಹೊಸ ತಲೆಮಾರಿನ ವಿನ್ಯಾಸಗಳನ್ನು ಅಭಿವೃದ್ದಿಗೊಳಿಸಲಾಗಿದೆ.

ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಟೀಸರ್ ಬಿಡುಗಡೆ

ಮುಂಭಾಗ ಮತ್ತು ಹಿಂಭಾಗದ ನೋಟದಲ್ಲಿ ವೆರ್ನಾ ಮಾದರಿಗೆ ಸ್ಪೋರ್ಟ್ ಲುಕ್ ನೀಡಲಾಗಿದ್ದು, 7-ಇಂಚಿನ ಇನ್ಫೋಮೆಟಿಕ್ ಡಿಸ್‌ಫೈ, ಡಬಲ್ ನೆವಿಗೆಷನ್ ಸಿಸ್ಟಮ್ ಮತ್ತು ಕಾರ್ ಪಾರ್ಕಿಂಗ್‌ಗೆ ನೆರವಾಗಬಲ್ಲ ರಿರ್ ಕ್ಯಾಮೆರಾ ಸೌಲಭ್ಯ ನೀಡಲಾಗಿದೆ.

ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಟೀಸರ್ ಬಿಡುಗಡೆ

ಇನ್ನು ವೆರ್ನಾ ಕಾರು ಮಾದರಿಯೂ 1.4-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಾಗಲಿದ್ದು, 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 122 ಬಿಎಚ್‌ಪಿ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಲಿವೆ.

ಪ್ರಸ್ತತ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಮಾರುತಿ ಸುಜುಕಿ ಸಿಯಾಜ್ ಮತ್ತು ಹೋಂಡಾ ಸಿಟಿಗೆ ಪ್ರತಿಸ್ಪರ್ಧಿಯಾಗುವ ನಿಟ್ಟಿನಲ್ಲಿ ವೆರ್ನಾ ಕಾರನ್ನು ಅಭಿವೃದ್ಧಿಗೊಳ್ಳುತ್ತಿದ್ದು, ಬೆಲೆಗಳು ರೂ.8.50 ಲಕ್ಷದಿಂದ ರೂ.10.50ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

English summary
Read in Kannada about Hyundai Teases The Next-Generation Verna In A Video.
Story first published: Friday, July 14, 2017, 16:22 [IST]
Please Wait while comments are loading...

Latest Photos