ಮುಂದಿನ ವರ್ಷ ಭಾರತಕ್ಕೆ ಲಗ್ಗೆಯಿಡಲಿರುವ ಕಿಯಾ ಮೋಟಾರ್ಸ್ 'ರಿಯೊ ಪಲ್ಸ್' ಕಾರಿನ ಮಾಹಿತಿ.

Written By:

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ 2019ರಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಿರುವ ಸೀಮಿತ ಆವೃತಿಯ ರಿಯೊ ಪಲ್ಸ್ ಕಾರಿನ ಬಗ್ಗೆ ಮಾಹಿತಿ ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
ಸೀಮಿತ ಆವೃತಿಯ ರಿಯೊ ಪಲ್ಸ್ ಕಾರಿನ ಬಗ್ಗೆ ಮಾಹಿತಿ

ಹ್ಯುಂಡೈ ಅಂಗ ಸಂಸ್ಥೆಯಾದ ಕಿಯಾ ಮೋಟಾರ್ಸ್ ಈಗಾಗಲೇ ತನ್ನ ಭಾರತದ ಪ್ರವೇಶವನ್ನು ಮುಂದಿನ ವರ್ಷ ಆರಂಭಿಸಲು ನಿರ್ಧರಿಸಿದ್ದು, ಉತ್ಪಾದನೆಗೊಳ್ಳಲಿರುವ ಹೊಸ ಸೀಮಿತ ಆವೃತಿಯ ರಿಯೊ ಪಲ್ಸ್ ಕಾರಿನ ಸ್ಪೇಷಲ್ ವರದಿ ಇಲ್ಲಿದೆ.

ಸೀಮಿತ ಆವೃತಿಯ ರಿಯೊ ಪಲ್ಸ್ ಕಾರಿನ ಬಗ್ಗೆ ಮಾಹಿತಿ

ಎಂದಿನಂತೆ ಈ ವಿಶೇಷ ಆವೃತಿಯ ಹ್ಯಾಚ್‌ಬ್ಯಾಕ್ ಕಿಯಾ ರಿಯೊ ಪಲ್ಸ್ ಕಾರು ವಿಶಿಷ್ಟ ಡುಯಲ್ ಟೋನ್ ಬಣ್ಣ ಪಡೆದುಕೊಂಡಿದ್ದು, ಶುಭ್ರ ಬಿಳಿ ಮತ್ತು ಮಿಡ್‌ನೈಟ್ ಕಪ್ಪು ಎಂಬ ಎರಡು ರೀತಿಯ ಬಣ್ಣಗಳಲ್ಲಿ ಲಭ್ಯವಿದೆ.

ಸೀಮಿತ ಆವೃತಿಯ ರಿಯೊ ಪಲ್ಸ್ ಕಾರಿನ ಬಗ್ಗೆ ಮಾಹಿತಿ

ಸಾಮಾನ್ಯ ಮಾದರಿಯಿಂದ ಪ್ರತ್ಯೇಕತೆ ಹೊಂದಿರುವಂತೆ ಕಾಣಲು, ಹೊಸ ಸೀಮಿತ ಆವೃತಿಯ ರಿಯೊ ಪಲ್ಸ್ ಕಾರಿನ ರೂಫ್, ಮುಂಭಾಗದ ವೆಂಟ್ಸ್, ಕನ್ನಡಿಯ ಕ್ಯಾಪ್‌ಗಳು, ಸೈಡ್ ಸ್ಕರ್ಟ್ ಟ್ರೀಮ್ಸ್ ಕೆಂಪು ಬಣ್ಣ ಹೊಂದಿರಲಿದೆ.

ಸೀಮಿತ ಆವೃತಿಯ ರಿಯೊ ಪಲ್ಸ್ ಕಾರಿನ ಬಗ್ಗೆ ಮಾಹಿತಿ

ರಿಯೊ ಪ್ರೆಸ್ ಆವೃತ್ತಿ ಕಾರಿನ ಒಳಭಾಗದ ಡ್ಯಾಶ್‌ಬೋರ್ಡ್ ಸಹ ರೆಡ್ ಮೆಟಾಲಿಕ್ ಬಣ್ಣ ಹೊಂದಿರಲಿದ್ದು, ಕಾರಿನ ಹೊರಭಾಗದಲ್ಲಿ ಇರುವಂತಹ ಕೆಂಪು ಬಣ್ಣದ ಬಳಕೆಯನ್ನು ಕ್ಯಾಬಿನ್ ಒಳಗೆ ಸಹ ಮಾಡಲಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಕಪ್ಪು ಮತ್ತು ಕೆಂಪು ಬಣ್ಣದ ಲೆದರ್ ಆಸನ ನಾವು ಕಾಣಬಹುದು.

ಸೀಮಿತ ಆವೃತಿಯ ರಿಯೊ ಪಲ್ಸ್ ಕಾರಿನ ಬಗ್ಗೆ ಮಾಹಿತಿ

ಈ ವಿಶೇಷ ಕಾರು 205/45 ಆರ್17 ನಂಬರ್ 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಪಡೆಯಲಿದ್ದು, ಕ್ರೋಮ್ ಹೊದಿಕೆಯ ಕಪ್ಪು ರೇಡಿಯೇಟರ್ ಗ್ರಿಲ್ ಈ ಕಾರು ಪಡೆದುಕೊಳ್ಳಿದೆ.

ಮುಂದಿನ ವರ್ಷ ಭಾರತಕ್ಕೆ ಲಗ್ಗೆಯಿಡಲಿರುವ ಕಿಯಾ ಮೋಟಾರ್ಸ್ 'ರಿಯೊ ಪಲ್ಸ್' ಕಾರಿನ ಮಾಹಿತಿ.

ಸುರಕ್ಷತಾ ಲಕ್ಷಣಗಳ ಬಗ್ಗೆ ಹೇಳುವುದಾದರೆ, ರಿಯೊ ಪ್ರೆಸ್ ಆವೃತ್ತಿಯು ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ, ವಾಹನ ಸ್ಥಿರತೆ ನಿರ್ವಹಣೆ, ಕಾರ್ನರ್ ಬ್ರೇಕ್ ಕಂಟ್ರೋಲ್, ನೇರ ಸಾಲಿನ ಸ್ಥಿರತೆ ಮತ್ತು ಹಿಲ್ ಸ್ಟಾರ್ಟ್ ಸಹಾಯ ಪಡೆದುಕೊಳ್ಳಲಿದೆ.

ಮುಂದಿನ ವರ್ಷ ಭಾರತಕ್ಕೆ ಲಗ್ಗೆಯಿಡಲಿರುವ ಕಿಯಾ ಮೋಟಾರ್ಸ್ 'ರಿಯೊ ಪಲ್ಸ್' ಕಾರಿನ ಮಾಹಿತಿ.

ತಂತ್ರಜ್ಞಾನ ಮತ್ತು ಸಂಪರ್ಕದ ವಿಚಾರದ ಬಗ್ಗೆ ಹೇಳುವುದಾದರೆ, 5 ಇಂಚಿನ ಟಚ್‌ಸ್ಕ್ರೀನ್ ಟಿವಿ ವ್ಯವಸ್ಥೆ, DAB ರೇಡಿಯೊ, ಬ್ಲೂಟೂತ್ ಸಂಪರ್ಕ ಮತ್ತು ಯುಎಸ್‌ಬಿ ಪೋರ್ಟ್, ಡಿಸ್‌ಪ್ಲೇ‌ಗೆ ಹೊಂದಿಕೆ ಇರುವಂತಹ ರಿವರ್ಸ್ ಕ್ಯಾಮೆರಾ, 6 ಸ್ಪೀಕರ್ ಆಡಿಯೋ ಸೆಟಪ್ ಈ ಕಾರು ಪಡೆದುಕೊಂಡಿದೆ.

ಮುಂದಿನ ವರ್ಷ ಭಾರತಕ್ಕೆ ಲಗ್ಗೆಯಿಡಲಿರುವ ಕಿಯಾ ಮೋಟಾರ್ಸ್ 'ರಿಯೊ ಪಲ್ಸ್' ಕಾರಿನ ಮಾಹಿತಿ.

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ಕಾರು ಮಾದರಿಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಆರಂಭಗೊಳಿಸಲು ಮುಂದಾಗಿರುವ ಕಿಯಾ ಮೋಟಾರ್ಸ್, ಸದ್ಯ ರಿಯೊ ಪ್ರೆಸ್ ಆವೃತ್ತಿಯು ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮುಂದೆ ಈ ಬಗ್ಗೆ ಮಾಹಿತಿಯನ್ನು ಡ್ರೈವ್ ಸ್ಪಾರ್ಕ್ ನಲ್ಲಿ ತಿಳಿಸಲಾಗುವುದು.

English summary
Kia Motors, who will start selling cars in India from 2019, has revealed a limited edition of the Rio Pulse.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark