ಹೊಸ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದ ಮಾರುತಿ ಸುಜುಕಿ

ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ, ನೆಕ್ಸಾ ಮಾದರಿಗಳನ್ನೊಳಗೊಂಡಂತೆ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಗಳಿಗೆ ಹೊಸ ವಿಸ್ತರಿತ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದೆ.

By Girish

ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ, ನೆಕ್ಸಾ ಮಾದರಿಗಳನ್ನೊಳಗೊಂಡಂತೆ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಗಳಿಗೆ ಹೊಸ ವಿಸ್ತರಿತ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದೆ.

ಹೊಸ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದ ಮಾರುತಿ

ಪ್ರಸ್ತುತ, ಎಲ್ಲಾ ಮಾರುತಿ ಕಾರುಗಳು ಸ್ಟ್ಯಾಂಡರ್ಡ್ ಎಂಬಂತೆ ಕೇವಲ 2 ವರ್ಷಗಳ ಅಥವಾ 40,000 ಕಿ.ಮೀ ವಾರೆಂಟಿಯನ್ನು ಪಡೆದು ಮಾರಾಟವಾಗುತ್ತಿವೆ. ಆದರೆ ಈ ನಿಯಮವನ್ನು ಸಡಿಲಿಸಿರುವ ಮಾರುತಿ, ಗ್ರಾಹಕರಿಗೆ ಬೇಕಾದ ಪ್ಲಾನ್ ಆರಿಸಿಕೊಳ್ಳುವ ಮತ್ತು ವಾರೆಂಟಿ ವಿಸ್ತರಿಸುವ ಆಯ್ಕೆಯನ್ನು ನೀಡಿದೆ.

ಹೊಸ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದ ಮಾರುತಿ

ವಿಸ್ತರಿತ ಖಾತರಿ ಯೋಜನೆಗಳ ಅಡಿಯಲ್ಲಿ ಹೈ ಪ್ರೆಷರ್ ಪಂಪ್, ಕಂಪ್ರೆಸರ್, ಇಸಿಎಂ, ಟರ್ಬೊಚಾರ್ಜರ್ ಅಸೆಂಬ್ಲಿ, ಆಯ್ದ ಇಂಜಿನ್ ಭಾಗಗಳು, ಸ್ಟೀರಿಂಗ್ ಜೋಡಣೆ ಮತ್ತು ಸೂಸ್ಪೆನ್‌ಷನ್ ಸ್ಟ್ರಟ್‌ಗಳು ಸೇರಿದಂತೆ ಬಿಡಿಭಾಗಗಳನ್ನು ಬದಲಿಸುವ ಸೌಲಭ್ಯ ನೀಡಲಾಗಿದೆ.

ಹೊಸ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದ ಮಾರುತಿ

ಮಾರುತಿ ವಿಸ್ತರಿತ ವಾರೆಂಟಿ ಯೋಜನೆಗಳು ಈ ಕೆಳಗಿನಂತಿವೆ :

ಗೋಲ್ಡ್ : 3 ವರ್ಷ / 60,000 ಕಿ.ಮೀ

ಪ್ಲಾಟಿನಮ್: 3 ವರ್ಷ ಮತ್ತು 4 ವರ್ಷ / 80,000 ಕಿ.ಮೀ

ರಾಯಲ್ ಪ್ಲ್ಯಾಟಿನಮ್: 3, 4 ಮತ್ತು 5 ವರ್ಷ / 1,00,000 ಕಿ.ಮೀ

ಹೊಸ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದ ಮಾರುತಿ

ಮಾರುತಿ ಸುಜುಕಿ ಸಂಸ್ಥೆಯು ಬಲೆನೊ ಹ್ಯಾಚ್‌ಬ್ಯಾಕ್, ಸಿಯಾಜ್ ಸೆಡಾನ್, ಇಗ್ನಿಸ್ ಹ್ಯಾಚ್‌ಬ್ಯಾಕ್ ಮತ್ತು ಎಸ್-ಕ್ರಾಸ್ ಕ್ರಾಸ್ಒವರ್ ಕಾರುಗಳನ್ನು ನೆಕ್ಸಾ ಮಳಿಗೆಗಳ ಮೂಲಕ ಮಾರಾಟ ಮಾಡುತ್ತಿದೆ ಮತ್ತು ಉಳಿದ ಉತ್ಪನ್ನ ಶ್ರೇಣಿಗಳನ್ನು ತನ್ನ ಅರೆನಾ ಔಟ್‌ಲೆಟ್ ಮೂಲಕ ಮಾರಲಾಗುತ್ತಿದೆ.

ಹೊಸ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದ ಮಾರುತಿ

ಮಾರುತಿ ಸುಜುಕಿ ಅರೆನಾ ಮಳಿಗೆಗಳ ಮೂಲಕ ಮಾರಾಟವಾಗುವ ವಾಹನಗಳಿಗೆ ಮೂರು ಪ್ಯಾಕೇಜುಗಳು ಲಭ್ಯವಿದೆ. ಆದರೆ, ಅಂಗಡಿಗಳ ಮೂಲಕ ಮಾರಾಟವಾಗುವ ಮಾದರಿಗಳ ಮೇಲೆ ಗೋಲ್ಡ್ ಪ್ಲಾನ್ ಬಗ್ಗೆ ನೆಕ್ಸಾ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿಲ್ಲ.

ಹೊಸ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದ ಮಾರುತಿ

ವ್ಯಾಪಕವಾದ ಮಾರಾಟ ಮತ್ತು ಸೇವಾ ಜಾಲದೊಂದಿಗೆ, ಮಾರುತಿ ಸುಜುಕಿ ಕಂಪನಿಯು ಗರಿಷ್ಠ 5 ವರ್ಷಗಳ / 1,00,000 ಕಿ.ಮೀ ವಿಸ್ತರಿತ ವಾರೆಂಟಿಯನ್ನು ಒದಗಿಸುತ್ತಿದ್ದು, ಇದರೊಂದಿಗೆ ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಕಡೆ ಗಮನ ಹರಿಸಿದೆ ಎನ್ನಬಹುದು.

Most Read Articles

Kannada
English summary
ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ, ನೆಕ್ಸಾ ಮಾದರಿಗಳನ್ನೊಳಗೊಂಡಂತೆ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಗಳಿಗೆ ಹೊಸ ವಿಸ್ತರಿತ ವಾರೆಂಟಿ ಯೋಜನೆಗಳನ್ನು ಪರಿಚಯಿಸಿದೆ.
Story first published: Tuesday, November 7, 2017, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X