ಬಿಡುಗಡೆಗೂ ಮುನ್ನ ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರಿನ ಚಿತ್ರಗಳು ಸೋರಿಕೆ
ಮುಂಬರುವ ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಗೆ ಸಜ್ಜುಗೊಂಡಿರುವ ನಿಸ್ಸಾನ್ ಬಹುನೀರಿಕ್ಷಿತ ಲೀಫ್ ಎಲೆಕ್ಟ್ರಿಕ್ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿ ಇಲ್ಲಿದೆ.
ಮುಂಬರುವ ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಗೆ ಸಜ್ಜುಗೊಂಡಿರುವ ನಿಸ್ಸಾನ್ ಬಹುನೀರಿಕ್ಷಿತ ಲೀಫ್ ಎಲೆಕ್ಟ್ರಿಕ್ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ಹೊಸ ಕಾರಿನ ತಾಂತ್ರಿಕ ಮಾಹಿತಿ ಇಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆ ನಿಸ್ಸಾಸ್ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಹೊಂದಿರುವ ಲೀಫ್ ಎಲೆಕ್ಟ್ರಿಕ್ ಕಾರು ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.

ಸೋರಿಕೆಯಾದ ಚಿತ್ರಗಳ ಪ್ರಕಾರ ಹ್ಯಾಚ್‌ಬ್ಯಾಕ್ ಶೈಲಿಯನ್ನು ಹೊಂದಿರುವ ನಿಸ್ಸಾನ್ ಲೀಫ್, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ನಮೂನೆಯ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದೆ.

2ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಲೀಫ್ ಕಾರ್‌ನ್ನು ಅಭಿವೃದ್ಧಿ ಮಾಡಿರುವ ನಿಸ್ಸಾನ್, ಸುಧಾರಿತ ಎಲೆಕ್ಟ್ಕಿಕ್ ಎಂಜಿನ್ ಅಳವಡಿಸಿರುವುದು ಮತ್ತೊಂದು ವಿಶೇಷ.

ಇದೇ ಕಾರಣಕ್ಕೆ ಒಂದು ಬಾರಿ ಚಾರ್ಜ್ ಮಾಡಿದಲ್ಲಿ 547 ಕಿಮಿ ಮೈಲೇಜ್ ನೀಡಲಿದೆ ಎಂದು ಹೇಳಿಕೊಂಡಿರುವ ನಿಸ್ಸಾನ್, 380 ಕಿಮಿ ಮೈಲೇಜ್ ನೀಡುವ ಟೆಸ್ಲಾ ಮಾಡೆಲ್ 3 ಕಾರಿಗಿಂತಲೂ ಉತ್ತಮವಾಗಿವೆ ಎಂದಿದೆ.

ಹೀಗಾಗಿ 2020ರ ವೇಳೆಗೆ ಶೇ.20ರಷ್ಟು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಗುರಿ ಸಾಧನೆಯ ನೀರಿಕ್ಷೆ ಹೊಂದಿರುವ ನಿಸ್ಸಾನ್, ಸೆಪ್ಟೆಂಬರ್ 16ಕ್ಕೆ ವಿಶೇಷ ಮಾದರಿಯ ಲೀಫ್ ಎಲೆಕ್ಟ್ರಿಕ್ ಕಾರು ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಮೈಲೇಜ್ ವಿಚಾರವಾಗಿ ಇಡೀ ಆಟೋ ಉದ್ಯಮ ವಲಯವನ್ನೇ ಸೆಳೆದಿರುವ ನಿಸ್ಸಾನ್, ಲೀಫ್ ಎಲೆಕ್ಟ್ರಿಕ್ ಕಾರು ಆವೃತ್ತಿ ಮೂಲಕ ಹೊಸ ಯುಗಾರಂಭ ಮಾಡುವ ಬಹುತೇಕ ಖಚಿತವಾಗಿದೆ.


Click it and Unblock the Notifications