ರಾಜಧಾನಿಯಲ್ಲಿ ಡೀಸೆಲ್ ವಾಹನಗಳ ನಿಷೇಧ ಹಿಂಪಡೆಯಲು ಎನ್‌ಜಿಟಿ ನಕಾರ..!!

Written By:

ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಈ ಹಿಂದೆ ರಾಷ್ಟ್ರೀಯ ಹಸಿರು ಪೀಠವು 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳನ್ನು ನಿಷೇಧಗೊಳಿಸಿತ್ತು. ಆದ್ರೆ ಇದೀಗ ಎನ್‌ಜಿಟಿ ಮೊರೆ ಹೋಗಿರುವ ಕೇಂದ್ರ ಸರ್ಕಾರವು ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿದೆ.

ರಾಜಧಾನಿಯಲ್ಲಿ ಡೀಸೆಲ್ ವಾಹನಗಳ ನಿಷೇಧ ಹಿಂಪಡೆಯಲು ಎನ್‌ಜಿಟಿ ನಕಾರ..!!

ಅತಿಯಾದ ಮಾಲಿನ್ಯಕ್ಕೆ ಕಾರಣವಾಗಿದ್ದ 10 ವರ್ಷ ಮೇಲ್ಪಟ್ಟ ಕಾರು ಮಾದರಿಗಳ ನಿಷೇಧದ ವಿಚಾರವಾಗಿ ಎನ್‌ಜಿಟಿ ಮೊರೆ ಹೋಗಿರುವ ಕೇಂದ್ರ ಸರ್ಕಾರವು ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದು, ಕೇಂದ್ರದ ಮನವಿಯನ್ನು ಎನ್‌ಜಿಟಿ ತಳ್ಳಿಹಾಕಿದೆ.

ರಾಜಧಾನಿಯಲ್ಲಿ ಡೀಸೆಲ್ ವಾಹನಗಳ ನಿಷೇಧ ಹಿಂಪಡೆಯಲು ಎನ್‌ಜಿಟಿ ನಕಾರ..!!

ಕೇಂದ್ರದ ಮನವಿಯನ್ನು ತಳ್ಳಿಹಾಕಿದ ನಂತರ ಪರಿಸರ ಮಾಲಿನ್ಯ ಹೆಚ್ಚಳವಾಗುತ್ತಿರುವ ಕುರಿತಂತೆ ಕೆಲವು ಅಭಿಪ್ರಾಯಗಳನ್ನು ಮಂಡಿಸಿದ ಎನ್‌ಜಿಟಿ, ಹತ್ತು ವರ್ಷ ಮೇಲ್ಪಟ್ಟ ಒಂದು ಡೀಸೆಲ್ ವಾಹನದ ಮಾಲಿನ್ಯ ಹೊರಸೂಸುವಿಕೆಯ ಪ್ರಮಾಣವು 20 ಪೆಟ್ರೋಲ್ ವಾಹನಗಳು ಹಾಗೂ 40 ಸಿಎನ್‌ಜಿ ಪ್ರೇರಿತ ವಾಹನಗಳು ಹೊರಸೂಸುವ ಮಾಲಿನ್ಯ ಪ್ರಮಾಣಕ್ಕೆ ಸಮಾನವಾಗಿರುತ್ತವೆ ಎಂದಿದೆ.

Recommended Video - Watch Now!
2017 Skoda Octavia RS Launched In India | In Kannada - DriveSpark ಕನ್ನಡ
ರಾಜಧಾನಿಯಲ್ಲಿ ಡೀಸೆಲ್ ವಾಹನಗಳ ನಿಷೇಧ ಹಿಂಪಡೆಯಲು ಎನ್‌ಜಿಟಿ ನಕಾರ..!!

ಈ ಹಿನ್ನೆಲೆ ನಿಷೇಧಗೊಂಡ ವಾಹನ ಮಾದರಿಗಳಿಗೆ ಮತ್ತೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದಿರುವ ಎನ್‌ಜಿಟಿ, ಪರಿಸರ ಮಾಲಿನ್ಯ ತಡೆ ನಿಟ್ಟಿನಲ್ಲಿ ಮತ್ತಷ್ಟು ಹೊಸ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ರಾಜಧಾನಿಯಲ್ಲಿ ಡೀಸೆಲ್ ವಾಹನಗಳ ನಿಷೇಧ ಹಿಂಪಡೆಯಲು ಎನ್‌ಜಿಟಿ ನಕಾರ..!!

ಆದ್ರೆ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳಲ್ಲ ಎಂದಿರುವ ಕೇಂದ್ರ ಸರ್ಕಾರವು, ಡೀಸೆಲ್ ಅಷ್ಟೇ ಅಲ್ಲದೇ ಪೆಟ್ರೋಲ್ ವಾಹನಗಳು ಮತ್ತು ಸಿಎನ್‌ಜಿ ಎಂಜಿನ್ ಪ್ರೇರಿತ ವಾಹನಗಳಿಂದಲೂ ಮಾಲಿನ್ಯ ಸೃಷ್ಠಿಯಾಗುತ್ತಿದೆ ಎಂದು ವಾದಿಸಿದೆ.

ರಾಜಧಾನಿಯಲ್ಲಿ ಡೀಸೆಲ್ ವಾಹನಗಳ ನಿಷೇಧ ಹಿಂಪಡೆಯಲು ಎನ್‌ಜಿಟಿ ನಕಾರ..!!

ಇದರಿಂದ ನಿಷೇಧಗೊಂಡಿರುವ ಡೀಸೆಲ್ ವಾಹನಗಳಿಗೆ ಮರು ಅವಕಾಶ ಕೋರಿರುವ ಕೇಂದ್ರ, ಪರ್ಯಾಯ ಇಂಧನಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳುವುದಾಗಿ ಹಸಿರು ಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಆದರೂ ಕೇಂದ್ರದ ವಾದವನ್ನು ಎನ್‌ಜಿಟಿ ತಳ್ಳಿಹಾಕಿದೆ.

ರಾಜಧಾನಿಯಲ್ಲಿ ಡೀಸೆಲ್ ವಾಹನಗಳ ನಿಷೇಧ ಹಿಂಪಡೆಯಲು ಎನ್‌ಜಿಟಿ ನಕಾರ..!!

ಡ್ರೈವ್ ಸ್ಪಾಕ್ ಅಭಿಪ್ರಾಯ

ಒಂದು ಹಂತದಲ್ಲಿ ನಿಷೇಧಿತ ವಾಹನಗಳಿಗೆ ಎನ್‌ಜಿಟಿ ಅವಕಾಶ ನೀಡದಿರುವುದೇ ಒಳ್ಳೆಯದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಮಾಲಿನ್ಯ ತಡೆಗೆ ಪೂರಕವಾಗಿ ಮತ್ತಷ್ಟು ಹೊಸ ಕ್ರಮಗಳನ್ನು ಕೈಗೊಳ್ಳಬೇಕೇಂಬ ಅಭಿಪ್ರಾಯಗಳು ಕೇಳಿಬಂದಿವೆ.

English summary
Read in Kannada about Centre Asks To Lift 10 Year Old Diesel Vehicle Ban In Delhi But NGT Refuses.
Story first published: Thursday, September 14, 2017, 20:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark