4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

2018ರಲ್ಲಿ ಕೊನೆಗೂ ತನ್ನ ಕಿಕ್ಸ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಜಪಾನಿನ ವಾಹನ ತಯಾರಕ ನಿಸ್ಸಾನ್ ಬಿಡುಗಡೆಯಾಗಲಿದೆ ಎಂಬ ದೃಢ ಮಾಹಿತಿ ಹೊರ ಬಂದಿದೆ.

By Girish

ನಿಸ್ಸಾನ್ ಸಂಸ್ಥೆಯ ಹಿರಿಯ ವಿ.ಪಿ ಮತ್ತು ಆಫ್ರಿಕಾ, ಮಧ್ಯ ಪೂರ್ವ ಮತ್ತು ಭಾರತ ದೇಶಗಳ ಮ್ಯಾನೇಜ್ಮೆಂಟ್ ಕಮಿಟಿಯ ಅಧ್ಯಕ್ಷರಾಗಿರುವ ಪೇಮೆನ್ ಕಾರ್ಗರ್‌ರವರು 'ಮುಂದಿನ ಮುಂದಿನ ವರ್ಷ 2018ರಲ್ಲಿ ತನ್ನ ಕಿಕ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಲಿದ್ದೇವೆ" ಎಂದು ತಿಳಿಸಿದ್ದಾರೆ.

4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

ಭಾರತೀಯ ಮಾರುಕಟ್ಟೆ ವಿಭಾಗದಲ್ಲಿ 2013ರಿಂದಲೂ ಇಲ್ಲಿಯವರೆಗೆ ನಿಸ್ಸಾನ್ ತನ್ನ ಯಾವುದೇ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿಲ್ಲ. ಕಿಕ್ಸ್‌ನೊಂದಿಗೆ, ನಿಸ್ಸಾನ್ ತನ್ನ ನೂತನ ಹೊಸ ಮಾದರಿಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ.

4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

ನಿಸ್ಸಾನ್ ಕಿಕ್ಸ್ ರೆನಾಲ್ಟ್ ಕಂಪನಿಯ M0 ಪ್ಲಾಟ್‌ಫಾರಂ ಆಧಾರದ ಮೇಲೆ ಅಭಿವೃದ್ಧಿ ಮಾಡಲಾಗಿದ್ದು, ಇದರಿಂದಾಗಿ ಡಸ್ಟರ್ ಮತ್ತು ಕ್ಯಾಪ್ಟರ್ ಕಾರಿನಂತೆ ಈ ಕಾರೂ ಕೂಡ ಗುಣಮಟ್ಟ ಮತ್ತು ದರದಲ್ಲಿ ಜನರ ವಿಶ್ವಾಸವನ್ನು ಗಳಿಸಿಕೊಳ್ಳಬಹುದು ಎನ್ನಲಾಗಿದೆ.

4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

"ಭವಿಷ್ಯದಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ನಿಸ್ಸಾನ್ ಸಂಸ್ಥೆಯು ಪರಿಚಯಿಸಲಿದ್ದು, ಅನಾವರಣಗೊಳ್ಳಲಿರುವ ವಾಹನಗಳು ಜಾಗತಿಕವಾಗಲಿದೆ. ಆದರೆ, ಭಾರತೀಯ ಮಾರುಕಟ್ಟೆಯ ಪರಿಸ್ಥಿತಿಗಳಿಗೆ ಸರಿಹೊಂದುವಂತೆ ಬದಲಾವಣೆ ಮಾಡಲಿದ್ದೇವೆ ಎಂದು ಪೇಮೆನ್ ಕಾರ್ಗರ್‌ರವರು ಹೇಳಿಕೆ ನೀಡಿದ್ದಾರೆ.

4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

ಕಿಕ್ಸ್ ಕಾರಿನ ಒಟ್ಟಾರೆ ವಿನ್ಯಾಸವು ರೆನಾಲ್ಟ್ ಮಾದರಿಗಳಿಗೆ ಹೋಲುತ್ತದೆ. ಇಳಿಜಾರು ಛಾವಣಿ ವಿನ್ಯಾಸ, ಸ್ಟೈಲಿಂಗ್, ಆಕ್ರಮಣಕಾರಿ ನೋಟವನ್ನು ಹೊಂದಲಿದೆ. ಮೇಲ್ಛಾವಣಿಯ ಹಳಿಗಳು ಮತ್ತು ಬಾಷ್ ಫಲಕಗಳು ಕಾರಿಗೆ ಒರಟು ನೋಟವನ್ನು ನೀಡುತ್ತವೆ.

Recommended Video

[Kannada] BMW 330i Gran Turismo Launched In India - DriveSpark
4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

ಆಂತರಿಕವಾಗಿ, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಂಪರ್ಕ ಆಯ್ಕೆ, ಡಿಜಿಟಲ್-ಅನಲಾಗ್ ಇನ್ಸ್ಟ್ರು‌ಮೆಂಟ್ ಕ್ಲಸ್ಟರ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಫ್ಲಾಟ್-ಬಾಟಮ್ ಸ್ಟೀರಿಂಗ್ ಚಕ್ರ ಮತ್ತು ಡ್ಯುಯಲ್-ಟೋನ್ ಅಪ್‌ಹೋಲ್‌ಸ್ಟ್ರೇ ಅಳವಡಿಸಲ್ಪಡುತ್ತದೆ.

4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

ನಿಸ್ಸಾನ್ ಕಿಕ್ಸ್ ಕಾರು, 1.5-ಲೀಟರ್ ಅಥವಾ 1.6-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುವ ಸಾಧ್ಯತೆಯಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಪ್ರದರ್ಶನಗೊಂಡ ಕ್ಯಾಪ್ಚರ್ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಈ ಕಾರೂ ಸಹ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಭಾರತದಲ್ಲಿ ಈಗಾಗಲೇ ಮಾರಾಟಕ್ಕೆ ಸಿದ್ದವಾಗಿರುವ ಕ್ಯಾಪ್ಚರ್ ಕಾರು 108 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

4 ವರ್ಷದ ನಂತರ ತನ್ನ ಹೊಸ ಕಾರಿನೊಂದಿಗೆ ಮತ್ತೆ ಎಂಟ್ರಿ ಕೊಡ್ತಿದೆ ನಿಸ್ಸಾನ್

ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಭಾರತದಲ್ಲಿ ಶೀಘ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಕಿಕ್ಸ್ ಪರಿಚಯಿಸುವ ಮೂಲಕ ನಿಸ್ಸಾನ್ ಅದರ ಲಾಭವನ್ನು ಪಡೆಯಲು ಯೋಜಿಸುತ್ತಿದೆ. ಕಿಕ್ಸ್ ಟೆರಾನೋ ಕಾರಿನ ಮೇಲೆ ಸ್ಥಾನ ಪಡೆಯಲಿರುವ ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರು, 15 ಲಕ್ಷದಿಂದ 20 ಲಕ್ಷ ಬೆಲೆ ಪಡೆಯುವ ಸಾಧ್ಯತೆ ಇದೆ. ಈ ಕಾರು ಹ್ಯುಂಡೈ ಕ್ರೆಟಾ, ಮುಂಬರುವ ರೆನಾಲ್ಟ್ ಕ್ಯಾಪ್ಟರ್ ಮತ್ತು ಟಾಟಾ ನೆಕ್ಸನ್ ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದೆ.

Most Read Articles

Kannada
English summary
Japanese automaker Nissan has finally confirmed that the Kicks compact SUV will be launched in the Indian market in 2018.
Story first published: Monday, October 30, 2017, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X