ಎರಡನೇ ಆವೃತಿಯ 'ಸ್ಕ್ರಾಂಬಲ್' ಪಂಜಾಬ್‌ನಲ್ಲಿ ನೆಡೆಯಲಿದೆ: ರಾಯಲ್ ಏನ್‌ಫೀಲ್ಡ್
ಸಾಂಪ್ರದಾಯಿಕ ಸೈಕಲ್ ತಯಾರಕ ಕಂಪೆನಿಯಾದ ರಾಯಲ್ ಏನ್‌ಫೀಲ್ಡ್ ಸಂಸ್ಥೆ ಸಾಹಸ ಉತ್ಸಾಹಿಗಳಿಗೆ ಎರಡನೇ ಆವೃತ್ತಿಯ ಹೊಸ ಸ್ವರೂಪ ಪ್ರಸ್ತುತಪಡಿಸಿದೆ.
ಸಾಂಪ್ರದಾಯಿಕ ಸೈಕಲ್ ತಯಾರಕ ಕಂಪೆನಿಯಾದ ರಾಯಲ್ ಏನ್‌ಫೀಲ್ಡ್ ಸಂಸ್ಥೆ ಸಾಹಸ ಉತ್ಸಾಹಿಗಳಿಗೆ ಎರಡನೇ ಆವೃತ್ತಿಯ ಹೊಸ ಸ್ವರೂಪ ಪ್ರಸ್ತುತಪಡಿಸಿದೆ.

ಶಿಮ್ಲಾದಲ್ಲಿ ಮೊದಲ ಆವೃತ್ತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ರಾಯಲ್ ಎನ್‌ಫೀಲ್ಡ್ ಮತ್ತೊಮ್ಮೆ ಸ್ಕ್ರಾಂಬಲ್ ಎರಡನೇ ಆವೃತ್ತಿಯನ್ನು ಆಗಸ್ಟ್ 23 ರಿಂದ 27ರ ವರೆಗೂ ಪಂಜಾಬ್ ರಾಜ್ಯದಲ್ಲಿ ನೆಡೆಸಲು ಮುಂದಾಗಿದೆ.

ಎರಡು ತಂಡಗಳ ಸವಾರಿ ನಿಯಮದಂತೆ ಮೂರು ದಿನಗಳ ಕಾಲ ಸ್ಪರ್ದಿಸಲು ಅನುಕೂಲ ಮಾಡಿಕೊಡಲಾಗಿವುದು ಎಂದು ಆಯೋಜಕರು ತಿಳಿಸಿದ್ದಾರೆ.

ಟೂರ್ ಆಫ್ ನೇಪಾಳ, ಟೂರ್ ಆಫ್ ಭೂತಾನ್, ಟೂರ್ ಆಫ್ ರಾಜಸ್ಥಾನ್ ಕಾರ್ಯಕ್ರಮಗಳ ಮೂಲಕ ರಾಯಲ್ ಎನ್‌ಫೀಲ್ಡ್ ಸಂಸ್ಥೆ ತನ್ನ ಮೋಟಾರ್ ಸೈಕಲ್‌ಗಳ ಬಗ್ಗೆ ಪ್ರಚಾರ ಈಗಾಗಲೇ ಆರಂಭಿಸಿದೆ.

ಇತ್ತೀಚೆಗೆ ಸಾಹಸ ಮೋಟಾರ್ ಕ್ರೀಡೆಯಲ್ಲಿ ಯುವಜನತೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದೂ ಸಹ ರಾಯಲ್ ಎನ್‌ಫೀಲ್ಡ್ ಸ್ಪರ್ಧಾತ್ಮಕ ರೂಪದಲ್ಲಿ ಸಾಹಸ ಮೋಟಾರ್ ಕ್ರೀಡೆಯನ್ನು ಆಯೋಜಿಸಲು ಹೆಚ್ಚು ಉತ್ತೇಜನ ನೀಡುತ್ತಿದೆ ಎನ್ನುವುದು ಸತ್ಯ ಸಂಗತಿ.


Click it and Unblock the Notifications