ಎಸ್ಐಎಎಂ ನೂತನ ಅಧ್ಯಕ್ಷರಾಗಿ ಡಾ. ಅಭಯ್ ಫಿರೋಡಿಯಾ ಆಯ್ಕೆ

Written By:

ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಎಸ್ಐಎಎಂ) ಸೊಸೈಟಿಯು ಫೋರ್ಸ್ ಮೋಟಾರ್ಸ್‌ನ ಚೇರ್ಮನ್ ಡಾ. ಅಭಯ್ ಫಿರೋಡಿಯಾ ಅವರನ್ನು ಹೊಸ ಅಧ್ಯಕ್ಷರಾಗಿ ನೇಮಕ ಮಾಡಿದ್ದು, ಈ ಹಿಂದೆ ಇದ್ದ ವಿನೋದ್ ಕೆ ದಾಸರಿ ಸ್ಥಾನವನ್ನು ಅಭಯ್ ನಿರ್ವಹಿಸಲಿದ್ದಾರೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಎಸ್ಐಎಎಂ) ಸೊಸೈಟಿಯ ಪಧಾದಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಅಶೋಕ್ ಲೇಲ್ಯಾಂಡ್‌ನ ಎಂ.ಡಿ ಮತ್ತು ಸಿಇಒ ವಿನೋದ್ ಕೆ ದಾಸರಿ ಅವರ ಸ್ಥಾನಕ್ಕೆ ಡಾ. ಅಭಯ್ ಫಿರೋಡಿಯಾ ಆಯ್ಕೆಯಾಗಿದ್ದಾರೆ.

ಎಸ್ಐಎಎಂ ನೂತನ ಅಧ್ಯಕ್ಷರಾಗಿ ಡಾ. ಅಭಯ್ ಫಿರೋಡಿಯಾ ಆಯ್ಕೆ

ಇನ್ನು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಆಟೋಮೋಟಿವ್ ವಿಭಾಗದ ಉಪಾಧ್ಯಕ್ಷರಾಗಿರುವ ರಾಜಾನ್ ವಧೇರಾ ಅವರನ್ನು ಎಸ್ಐಎಎಂ ಸಮಿತಿಯ ಖಜಾಂಚಿ ಆಗಿ ಆಯ್ಕೆ ಮಾಡಲಾಗಿದ್ದು, ಈ ಹಿಂದಿನ ಮಾರುತಿ ಸುಜುಕಿ ಇಂಡಿಯಾ ಸಿಇಒ ಕೆನಿಚಿ ಆಯುಕಾವಾ ಅವರನ್ನು ಹುದ್ದೆಯನ್ನು ರಾಜಾನ್ ವಧೇರಾ ನಿಭಾಯಿಸಲಿದ್ದಾರೆ.

ಇನ್ನು ಡಾ. ಅಭಯ್ ಫಿರೋಡಿಯಾ ಅವರು ಈ ಹಿಂದೆ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ, ಇಂಡೋ-ಜರ್ಮನ್ ಚೇಂಬರ್ ಆಫ್ ಕಾಮರ್ಸ್, ಆಟೊಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಇಂಡಸ್ಟ್ರೀಸ್ ಅಂಡ್ ಅಗ್ರಿಕಲ್ಚರ್ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ.

2017 Mercedes New GLA India Launch Kannada - DriveSpark ಕನ್ನಡ

1975ರಲ್ಲೇ ಫೋರ್ಸ್ ಇಂಡಿಯಾ ಉದ್ಯೋಗಿಯಾಗಿ ಸದ್ಯ ಅಧ್ಯಕ್ಷ ಸ್ಥಾನ ನಿಭಾಯಿಸುತ್ತಿರುವ ಡಾ. ಅಭಯ್ ಅವರು ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಎಸ್ಐಎಎಂ) ಸೊಸೈಟಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಭಾರತೀಯ ಆಟೋ ಉದ್ಯಮಕ್ಕೆ ಹೊಸ ಮೆರಗು ತಂದಿದೆ ಎನ್ನಬಹುದು.

English summary
Read in Kannada about SIAM Appoints Dr Abhay Firodia, The Chairman Of Force Motors As The New President.
Story first published: Saturday, September 9, 2017, 13:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark