'ಸುರಕ್ಷತಾ ಸಾಫ್ಟ್‌ವೇರ್' ವಿಚಾರಕ್ಕೆ ಸಂಬಂಧಿಸಿದಂತೆ 663 ಲಾರಾ ಕಾರುಗಳನ್ನು ಹಿಂಪಡೆದ ಸ್ಕೋಡಾ

Written By:

ಬ್ರೇಕಿಂಗ್ ಸುರಕ್ಷತಾ ವ್ಯವಸ್ಥೆಯ ತಂತ್ರಾಂಶ ನಿಯಂತ್ರಣ ಘಟಕವನ್ನು ನವೀಕರಿಸುವ ಉದ್ದೇಶದಿಂದ 2009ರ ಮತ್ತು 2010ರ ನಡುವೆ ತಯಾರಿಸಲಾದ ಸ್ಕೋಡಾ ಲಾರಾ ಕಾರುಗಳನ್ನು ಸ್ಕೋಡಾ ಆಟೋ ಇಂಡಿಯಾ ಕಂಪನಿ ಹಿಂಪಡೆದಿದೆ.

'ಸುರಕ್ಷತಾ ಸಾಫ್ಟ್‌ವೇರ್' ವಿಚಾರಕ್ಕೆ ಸಂಬಂಧಿಸಿದಂತೆ 663 ಲಾರಾ ಕಾರುಗಳನ್ನು ಹಿಂಪಡೆದ ಸ್ಕೋಡಾ

ಈ ಸಮಯದಲ್ಲಿ ಮಾರಾಟಗೊಂಡ ಸುಮಾರು 663 ಲಾರಾ ಕಾರುಗಳನ್ನು ಮರು ಪಡೆಯಲಿದೆ. ಸ್ಕೋಡಾ ಆಟೋ ಇಂಡಿಯಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇರುವಂತಹ ಸರ್ವಿಸ್ ಆಕ್ಷನ್ ಅಲರ್ಟ್ ವಿಭಾಗದಲ್ಲಿ ಈ ವಿಚಾರವಾಗಿ ಪ್ರಕಟಣೆ ನೀಡಿದ್ದು, ಸದ್ಯದರಲ್ಲಿಯೇ ಈ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

'ಸುರಕ್ಷತಾ ಸಾಫ್ಟ್‌ವೇರ್' ವಿಚಾರಕ್ಕೆ ಸಂಬಂಧಿಸಿದಂತೆ 663 ಲಾರಾ ಕಾರುಗಳನ್ನು ಹಿಂಪಡೆದ ಸ್ಕೋಡಾ

ಸೇವಾ ಕಾರ್ಯಾಚರಣೆ ನೆಡೆಸುವ ಮೂಲಕ, 2009 ಮತ್ತು 2010ರ ನಡುವೆ ತಯಾರಿಸಲಾದ 663 ಲಾರಾ ಮಾದರಿಯ ಕಾರುಗಳಲ್ಲಿನ ಎಬಿಎಸ್ / ಇಎಸ್‌ಸಿ ಕಂಟ್ರೋಲ್ ಯುನಿಟ್ ಸಾಫ್ಟ್‌ವೇರ್ ನವೀಕರಿಸುವುದಾಗಿ ಜೆಕ್ ಕಾರು ಉತ್ಪಾದಕ ತಿಳಿಸಿದೆ.

'ಸುರಕ್ಷತಾ ಸಾಫ್ಟ್‌ವೇರ್' ವಿಚಾರಕ್ಕೆ ಸಂಬಂಧಿಸಿದಂತೆ 663 ಲಾರಾ ಕಾರುಗಳನ್ನು ಹಿಂಪಡೆದ ಸ್ಕೋಡಾ

ನಮಗೆಲ್ಲರಿಗೂ ತಿಳಿದಿರುವಂತೆ, ವಿರೋಧಿ ಲಾಕ್ ಬ್ರೇಕಿಂಗ್ ಸಿಸ್ಟಮ್(ಎಬಿಎಸ್) ತಂತ್ರಜ್ಞಾನವು ಚಕ್ರಗಳನ್ನು ಲಾಕ್ ಮಾಡುವ ಮೂಲಕ ಅನಿಯಂತ್ರಿತ ಸ್ಕೈಡಿಂಗ್ ತಪ್ಪಿಸುತ್ತದೆ ಹಾಗು ತುರ್ತು ಸಂದರ್ಭಗಳಲ್ಲಿ ಬ್ರೇಕ್ ಹಿಡಿದಾಗ, ವಾಹನ ಸ್ಥಿರತೆಯನ್ನು ನಿಯಂತ್ರಿಸುವಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ) ಸಹಾಯ ಮಾಡುತ್ತದೆ.

'ಸುರಕ್ಷತಾ ಸಾಫ್ಟ್‌ವೇರ್' ವಿಚಾರಕ್ಕೆ ಸಂಬಂಧಿಸಿದಂತೆ 663 ಲಾರಾ ಕಾರುಗಳನ್ನು ಹಿಂಪಡೆದ ಸ್ಕೋಡಾ

ಇತ್ತೀಚೆಗೆ, ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ ಕಂಪನಿಯು, 2017ರ ಸೆಪ್ಟೆಂಬರ್ 5 ಮತ್ತು ನವೆಂಬರ್ 19ರ ನಡುವೆ ನಿರ್ಮಿಸಲಾಗಿದ್ದ ಜೀಪ್ ಕಂಪಾಸ್ ಕಾರುಗಳಲ್ಲಿ ಇರುವಂತಹ ಮುಂಭಾಗದ ಪ್ಯಾಸೆಂಜರ್ ಏರ್‌ಬ್ಯಾಗ್ ಬದಲಿಸಲು 1,200 ಕಾರುಗಳನ್ನು ಭಾರತದಲ್ಲಿ ಹಿಂಪಡೆದಿತ್ತು.

'ಸುರಕ್ಷತಾ ಸಾಫ್ಟ್‌ವೇರ್' ವಿಚಾರಕ್ಕೆ ಸಂಬಂಧಿಸಿದಂತೆ 663 ಲಾರಾ ಕಾರುಗಳನ್ನು ಹಿಂಪಡೆದ ಸ್ಕೋಡಾ

"ಈ ಸೇವೆಯನ್ನು ಪಡೆಯಲು ಗ್ರಾಹಕರು ಶೋರೂಂಗೆ ಭೇಟಿ ಕೊಡಬೇಕಾಗುತ್ತದೆ. ಈ ನವೀಕರಣಕ್ಕೆ ಸುಮಾರು 1 ಗಂಟೆ ಸಮಯ ಹಿಡಿಯಲಿದ್ದು, ಗ್ರಾಹಕರಿಂದ ಯಾವುದೇ ರೀತಿಯ ಶುಲ್ಕ ತೆಗೆದುಕೊಳ್ಳುವುದಿಲ್ಲ" ಎಂದು ಸ್ಕೋಡಾ ಕಂಪನಿಯ ಅಧಿಕೃತ ಮಾರಾಟ ಮಳಿಗೆಯ ಮಾಲೀಕರು ತಿಳಿಸಿದ್ದಾರೆ.

'ಸುರಕ್ಷತಾ ಸಾಫ್ಟ್‌ವೇರ್' ವಿಚಾರಕ್ಕೆ ಸಂಬಂಧಿಸಿದಂತೆ 663 ಲಾರಾ ಕಾರುಗಳನ್ನು ಹಿಂಪಡೆದ ಸ್ಕೋಡಾ

ಸ್ವಯಂಪ್ರೇರಣೆಯಿಂದ ಈ ಕಾರ್ಯಕ್ಕೆ ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಕೈಹಾಕಿದ್ದು, ಈಗಾಗಲೇ ಸ್ಥಗಿತಗೊಂಡಿರುವ ಕಾರಿನ ಬಗ್ಗೆಯೂ ಈ ರೀತಿಯ ಕಾಳಜಿ ವಹಿಸುತ್ತಿರುವುದು ಮೆಚ್ಚುವಂತ ಸಂಗತಿಯಾಗಿದೆ.

Read more on skoda ಸ್ಕೋಡಾ
English summary
Skoda Auto India is recalling 663 units of its Laura model manufactured between 2009 and 2010 to update software control unit of the braking safety system.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark