ಶೀಘ್ರದಲ್ಲಿಯೇ ಎಕ್ಸ್‌ಪ್ರೆಸ್ ಹೆದ್ದಾರಿಗಳ ವೇಗ ಮಿತಿ ಹೆಚ್ಚಿಗೆ ಮಾಡಲಿದೆ ಕೇಂದ್ರ ಸರ್ಕಾರ

Written By:

ಶೀಘ್ರದಲ್ಲಿಯೇ ನೀವು ಎಕ್ಸ್‌ಪ್ರೆಸ್ ಟ್ರ್ಯಾಕ್‌ಗಳಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದಾದ ಹೊಸ ನಿಯಮವನ್ನು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತರಲಿದ್ದಾರೆ ಎನ್ನಲಾಗಿದೆ.

ಪ್ರಸ್ತುತ, ದೆಹಲಿ ಇಂದ ಆಗ್ರಾದ ನಡುವೆ ಇರುವ 165 ಕಿ.ಮೀ ಅಂತರವನ್ನು, ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಗಂಟೆಗೆ ಕೇವಲ 100 ಕಿ.ಮೀ ವೇಗದಲ್ಲಿ ಸಂಚರಿಸಲು ಮಾತ್ರ ಅನುಮತಿ ಇದ್ದು, ಇದನ್ನು 120 ಕಿ.ಮೀಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಹೆದ್ದಾರಿಗಳ ಗುಣಮಟ್ಟ ಸುಧಾರಣೆ ಮತ್ತು ಉತ್ತಮ ಗುಣಮಟ್ಟದ ವಾಹನಗಳ ತಯಾರು ಮಾಡುತ್ತಿರುವುದೇ ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ.

ದೇಶದ ಹೆದ್ದಾರಿಗಳ ವೇಗದ ಮಿತಿ ಹೆಚ್ಚಿಸುವ ಸಮಯ ಬಂದಿದ್ದು, ಈ ಪ್ರಸ್ತಾವನೆಯನ್ನು ಈಗಾಗಲೇ ಸಾರಿಗೆ ಸಚಿವಾಲಯ ಪ್ರಧಾನಿಗಳ ಪರಿಶೀಲನೆಗೆ ಕಳುಹಿಸಿದೆ.

ಕೇಂದ್ರ ಸರ್ಕಾರವು ಈಗಾಗಲೇ 1,000 ಕಿ.ಮೀ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್ ಮಾರ್ಗಗಳನ್ನು ನಿರ್ಮಿಸಲು ಮುಂದಾಗಿದ್ದು, ದೆಹಲಿ ಮತ್ತು ಮೀರತ್ ಹಾಗು ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್ ರಸ್ತೆಗಳಿಗೆ ಮೊದಲ ಆದ್ಯತೆ ನೀಡಲಿದೆ ಎನ್ನಲಾಗಿದೆ.

ಮುಂದುವರೆದ ದೇಶ ಅಮೇರಿಕಾದ ಟೆಕ್ಸಾಸ್‌ ಸೇರಿದಂತೆ ಹಲವಾರು ರಾಜ್ಯಗಳ ಎಕ್ಸ್ ಪ್ರೆಸ್ ಹೆದ್ದಾರಿಗಳಲ್ಲಿ ಈಗಾಗಲೇ 137 ಕಿ.ಮೀ ವರೆಗೂ ವೇಗವನ್ನು ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ.

English summary
Soon you could hit a top speed of 120km/h on expressways if Union Minister of Road Transport Nitin Gadkari has his way.
Please Wait while comments are loading...

Latest Photos