ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

Written By:

ಫೋರ್ಡ್ ಇಂಡಿಯಾ ಸದ್ಯ ತನ್ನ ಹೊಚ್ಚ ಹೊಸ ಇಕೊಸ್ಪೋರ್ಟ್ 2017 ಕಾರನ್ನು ಪರೀಕ್ಷೆ ನೆಡೆಸುತ್ತಿದ್ದು, ಈ ಸಂಸ್ಥೆಯ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.

ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

ಜಾಗತಿಕ ಮಾರುಕಟ್ಟೆಯಲ್ಲಿ ಸದ್ಯದರಲ್ಲೇ ಲಭ್ಯವಾಗಲಿರುವ ಗೋಲ್ಡನ್ ಬ್ರಾಂಜ್, ಕೈನೆಟಿಕ್ ಬ್ಲೂ ಮತ್ತು ಅರ್ಪೋಡರ್ ರೆಡ್ ಎಂಬ ಮೂರು ಬಣ್ಣಗಳಲ್ಲಿ ಈ ಫೇಸ್ ಲಿಫ್ಟ್ ಕಾರು ಬಿಡುಗಡೆಗೊಳ್ಳುತ್ತಿದ್ದು, ಇಎಬಿ ಈ ಚಿತ್ರಗಳನ್ನು ಸೆರೆ ಹಿಡಿದಿದೆ.

ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

ಇಕೊಸ್ಪೋರ್ಟ್ 2017 ಕಾರಿನ ಮುಂಭಾಗ ಪುನರ್‌ವಿನ್ಯಾಸಗೊಂಡಿದ್ದು, ಕಾರಿನ ಬಂಪರ್ ಮತ್ತಷ್ಟು ಅಂದಗೊಂಡು ಗ್ರಾಹಕರ ಮುಂದೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

ಹಿಂದಿನ ಮಾದರಿಯಲ್ಲಿ ಇರಿಸಲಾಗಿದ್ದ ಟೂ ಪೀಸ್ ಸೆಟಪ್ ಹೊಂದಿರುವ ಗ್ರಿಲ್ ಬದಲು ಒಂದು ಪೀಸ್ ಹೊಂದಿರುವ ಫೇಸ್ ಲಿಫ್ಟ್ ಗ್ರಿಲ್ ಈ ಕಾರು ಹೊಂದಿರಲಿದೆ.

ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

ಫೋರ್ಡ್ ಇಕೊಸ್ಪೋರ್ಟ್ 2017 ಕಾರು 16 ಇಂಚು ಇರುವಂತಹ ಮಿಶ್ರಲೋಹದ ಚಕ್ರಗಳು, ಪ್ರೊಜೆಕ್ಟರ್ ಹೆಡ್ ಲೈಟ್‌ಗಳನ್ನು ಮತ್ತು ಎಲ್ಇಡಿ ಹಗಲಿನ ಹೊತ್ತು ಬೆಳಗುವ ದೀಪಗಳನ್ನು ಹೊಂದಿರಲಿದೆ.

ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

ಬಿಡುಗಡೆಗೊಂಡಿರುವ ರಹಸ್ಯ ಚಿತ್ರಗಳನ್ನು ಸೂಕ್ಷ್ಮವಾಗಿ ಹತ್ತಿರದಿಂದ ಗಮನಿಸಿದರೆ ಈ ಕಾರು ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿರುವುದನ್ನು ನಾವು ನೋಡಬಹುದು.

ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

ಸುಧಾರಿತ ಇಕೊಸ್ಪೋರ್ಟ್ 2017 ಕಾರಿನ ಎಂಜಿನ್ ಯಾವುದೇ ರೀತಿಯ ಬದಲಾವಣೆ ಹೊಂದದೆ ಹಾಗೆಯೆ ಉಳಿಯಲಿದೆ ಎನ್ನಲಾಗಿದ್ದು, 1 ಲೀಟರ್ ಇಕೊಬೂಟ್ ಪೆಟ್ರೋಲ್ ಇಂಜಿನ್, 1.5-ಲೀಟರ್ ಪೆಟ್ರೋಲ್ ಮೋಟಾರ್ ಮತ್ತು 1.5 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಈ ಕಾರು ಬಿಡುಗಡೆಯಾಗಲಿದೆ.

ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಹಿಂಭಾಗದ ಭಾಗವು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತದೆ ಎನ್ನಲಾಗಿದ್ದು, ಟೈಲ್‌ಗೇಟ್ ಬಳಿ ಬಿಡಿ ಚಕ್ರದೊಂದಿಗೆ ರಹಸ್ಯ ಕಾರು ಕಾಣಿಸಿಕೊಂಡಿದೆ.

ಸೋರಿಕೆಗೊಂಡ ಫೋರ್ಡ್ ಇಕೊಸ್ಪೋರ್ಟ್ 2017 ಕಾರಿನ ರಹಸ್ಯ ಚಿತ್ರಗಳು

ಈ ವರ್ಷದ ಉತ್ಸವ ಋತುವಿನಲ್ಲಿ ಇಕೋಸ್ಪೋರ್ಟ್ 2017 ಕಾರು ಭಾರತದ ರಸ್ತೆಗೆ ಇಳಿಯಲಿದ್ದು, ಈ ಕಾರಿನ ಮೇಲೆ ಹೆಚ್ಚು ವಿಶ್ವಾಸ ಹೊಂದಿರುವ ಸಂಸ್ಥೆ ಮತ್ತೆ ತನ್ನ ಅಧಿಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Read more on ಫೋರ್ಡ್ ford
English summary
Ford India has been testing the 2017 EcoSport for quite a while now. Once again the facelifted compact SUV has been spotted in three different colours.
Story first published: Friday, June 16, 2017, 16:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark