ಎಕ್ಸ್‌ಕ್ಲೂಸಿವ್- ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ ಸ್ಯಾಂಗ್‌ಯಾಂಗ್ ವಿನೂತನ ಎಸ್‌ಯುವಿ ಟಿವೊಲಿ
ಸ್ಯಾಂಗ್‌ಯಾಂಗ್ ಸಂಸ್ಥೆಯು ದೇಶಿಯ ಮಾರುಕಟ್ಟೆಗಾಗಿ ವಿನೂತನ ಎಸ್‌ಯುವಿ ಮಾದರಿಯನ್ನು ಸಿದ್ಧಗೊಳಿಸಿದ್ದು, ಸದ್ಯದಲ್ಲೇ ಬಿಡುಗಡೆಗೊಳಿಸುವ ಉದ್ದೇಶದಿಂದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ದಕ್ಷಿಣ ಕೊರಿಯಾದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಯಾಂಗ್‌ಯಾಂಗ್ ಸಂಸ್ಥೆಯು ದೇಶಿಯ ಮಾರುಕಟ್ಟೆಗಾಗಿ ವಿನೂತನ ಎಸ್‌ಯುವಿ ಮಾದರಿಯನ್ನು ಸಿದ್ಧಗೊಳಿಸಿದ್ದು, ಸದ್ಯದಲ್ಲೇ ಬಿಡುಗಡೆಗೊಳಿಸುವ ಉದ್ದೇಶದಿಂದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸುಧಾರಿತ ಕಾರು ಮಾದರಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಂಗ್‌ಯಾಂಗ್ ಸಂಸ್ಥೆಯು ಟಿವೊಲಿ ಎಂಬ ವಿನೂತನ ಎಸ್‌ಯುವಿ ಕಾರನ್ನು ನಿರ್ಮಾಣ ಮಾಡಿದ್ದು, ತಮಿಳುನಾಡಿನ ಕೊಯಮತ್ತೂರು ಬಳಿ ಸ್ಟಾಟ್ ಟೆಸ್ಟಿಂಗ್ ನಡೆಸುತ್ತಿರುವ ವೇಳೆ ಹೊಸ ಕಾರಿನ ಚಿತ್ರಗಳು ಸೆರೆ ಸಿಕ್ಕಿವೆ.

ಸ್ಟಾಟ್ ಟೆಸ್ಟಿಂಗ್ ಸಂದರ್ಭದಲ್ಲಿ ಹ್ಯುಂಡೈ ಕ್ರೇಟಾ ಜೊತೆ ಜೊತೆಯಲ್ಲೇ ಟೆಸ್ಟ್ ಡ್ರೈವ್ ನಡೆಸಿದ ಸ್ಯಾಂಗ್‌ಯಾಂಗ್ ಟಿವೊಲಿ ಸ್ಥಳದಲ್ಲಿ ನೆರೆದಿದ್ದ ಜನತೆಗೆ ಆಶ್ಚರ್ಯ ಉಂಟು ಮಾಡಿದ್ದಲ್ಲೇ ಕ್ಲಾಸ್ ಲೀಡಿಂಗ್ ಸೌಲಭ್ಯಗಳು ಎಸ್‌ಯುವಿ ಪ್ರಿಯರನ್ನು ಸೆಳೆಯುವಂತೆ ಮಾಡಿದ್ದು ಸುಳ್ಳಲ್ಲ.
Recommended Video


ಇನ್ನು ಸ್ಯಾಂಗ್‌ಯಾಂಗ್ ಟಿವೊಲಿ ಎಸ್‌ಯುವಿ ಮಾದರಿಯು ಯುರೋಪಿನ ಮಾರುಕಟ್ಟೆಗಳಲ್ಲಿ ಖರೀದಿ ಲಭ್ಯವಿದ್ದು, ಎಸ್‌ಯುವಿ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾದ ಹಿನ್ನೆಲೆ ಅದೇ ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡಲಾಗುತ್ತಿದೆ.

ಎಂಜಿನ್ ಸಾಮರ್ಥ್ಯ
ವರದಿಗಳ ಪ್ರಕಾರ ಟಿವೊಲಿ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಕಾರು ಖರೀದಿಗೆ ಲಭ್ಯವಿರಲಿದ್ದು, ಸ್ಪೋರ್ಟ್ ಕಾರ್ ಮಾದರಿಯ ಡ್ಯುಯಲ್ ಟೊನ್ ಡ್ಯಾಶ್‌ಬೋರ್ಡ್, ಟಚ್ ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ, ಪೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಡೇ ಟೈಮ್ ಎಲ್ಇಡಿ ರನ್ನಿಂಗ್ ಲೈಟ್ ಸೌಲಭ್ಯವನ್ನು ಪಡೆದುಕೊಂಡಿದೆ.

ಹೀಗಾಗಿ ಹೊಸ ಹೊಸ ಸುಧಾರಿತ ಸೌಲಭ್ಯಗಳನ್ನು ಹೊಂದಿರುವ ಟಿವೊಲಿ ಕಾರು, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿರುವ ಹ್ಯುಂಡೈ ಕ್ರೇಟಾ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‌ಯುವಿಗಳಿಗೆ ತೀವ್ರ ಪ್ರತಿಸ್ಪರ್ಧೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಯ ದಿನಾಂಕ
ಟಿವೊಲಿ ಬಿಡುಗಡೆಗೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲ ಸುದ್ಧಿ ಮೂಲಗಳ ಪ್ರಕಾರ 2018ರ ಮಾರ್ಚ್ ಅಂತ್ಯಕ್ಕೆ ಖರೀದಿಗೆ ಲಭ್ಯವಾಗಲಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ವಿನೂತನ ಕಾರುಗಳನ್ನು ಪರಿಚಯಿಸಿರುವ ಸ್ಯಾಂಗ್‌ಯಾಂಗ್ ಸಂಸ್ಥೆಯು ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಹೊಸ ತಲೆಮಾರಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಿವೊಲಿ ಕಾರನ್ನು ಅಭಿವೃದ್ಧಿ ಮಾಡಿದೆ.
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








