ಆಟೋನಮಸ್ ತಂತ್ರಜ್ಞಾನ ಪರೀಕ್ಷೆಗೆ ತನ್ನ ಹೆಕ್ಸಾ ಕಾರನ್ನು ಬಳಸಿಕೊಂಡ ಟಾಟಾ

ಟಾಟಾ ಟಿಯೊಗೊ ಇವಿ ವಾಹನವನ್ನು ಬಳಸಿಕೊಂಡು ಆಟೋನಮಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಟಾಟಾ ಸಂಸ್ಥೆಯು ಮುಂದಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಟಾಟಾ ಹೆಕ್ಸಾ ಎಸ್‌ಯುವಿ‌ಯನ್ನು ಈ ಕುಟುಂಬಕ್ಕೆ ಸೇರಿಸಿಕೊಂಡಿದೆ.

By Girish

ಟಾಟಾ ಮೋಟಾರ್ಸ್ ಸಂಸ್ಥೆಯು ಯುಕೆ ದೇಶದಲ್ಲಿರುವ ಟಾಟಾ ಮೋಟಾರ್ಸ್ ಯೂರೋಪಿಯನ್ ಟೆಕ್ನಿಕಲ್ ಸೆಂಟರ್ (ಟಿಎಮ್ಇಟಿಸಿ) ಸಂಶೋಧನಾ ಕೇಂದ್ರದಲ್ಲಿ ತನ್ನ ವಿದ್ಯುತ್ ವಾಹನವನ್ನು(ಇವಿ) ಮತ್ತು ಆಟೋನಮಸ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಭಿವೃದ್ಧಿಪಡಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಆಟೋನಮಸ್ ತಂತ್ರಜ್ಞಾನ ಪರೀಕ್ಷೆಗೆ ತನ್ನ ಹೆಕ್ಸಾ ಕಾರನ್ನು ಬಳಸಿಕೊಂಡ ಟಾಟಾ

ಈ ವಿಭಾಗಕ್ಕೆ ಮತ್ತೊಂದು ಸೇರ್ಪಡೆ ಹೆಕ್ಸಾ ಕಾರು ಎನ್ನಬಹುದು. ಬ್ರಿಟನ್ ಕೋವೆಂಟ್ರಿ ಬೀದಿಗಳಲ್ಲಿ ಟಾಟಾ ಸಂಸ್ಥೆಯ ಯುಕೆ ಆಟೊಡ್ರೈವ್‌ ಸಹಾಯದೊಂದಿಗೆ, ತನ್ನ ಹೆಕ್ಸಾ ಎಸ್‌ಯುವಿ ಕಾರಿನ ಸ್ವಯಂ ಚಾಲನಾ ಸಾಮರ್ಥ್ಯಗಳನ್ನು ಪರೀಕ್ಷಿಸುತ್ತಿದೆ.

ಆಟೋನಮಸ್ ತಂತ್ರಜ್ಞಾನ ಪರೀಕ್ಷೆಗೆ ತನ್ನ ಹೆಕ್ಸಾ ಕಾರನ್ನು ಬಳಸಿಕೊಂಡ ಟಾಟಾ

ಯುಕೆ ಆಟೊಡ್ರೈವ್ ಎಂಬುದು ಆಟೋಮೋಟಿವ್ ಕಂಪೆನಿಗಳ ಸಂಘಟನೆಯಾಗಿದೆ ಮತ್ತು ಬ್ರಿಟನ್ ಸರ್ಕಾರವು ಆಟೋನಮಸ್ ಮತ್ತು ಸ್ವಯಂ-ಚಾಲನಾ ಕಾರುಗಳನ್ನು ಯು.ಕೆ ನಲ್ಲಿ ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಸಹಕಾರ ನೀಡುತ್ತಿದೆ.

ಆಟೋನಮಸ್ ತಂತ್ರಜ್ಞಾನ ಪರೀಕ್ಷೆಗೆ ತನ್ನ ಹೆಕ್ಸಾ ಕಾರನ್ನು ಬಳಸಿಕೊಂಡ ಟಾಟಾ

ಟಾಟಾ ಹೆಕ್ಸಾ ಕಾರಿನ ಪರೀಕ್ಷೆ ಈಗಾಗಲೇ ಸುಗಮವಾಗಿ ಸಾಗಿದ್ದು, ಈ ಕಾರಿನ ಜೊತೆ ಆಟೊಡ್ರೈವ್‌ ಒಕ್ಕೂಟವು ಫೋರ್ಡ್ ಸಂಸ್ಥೆಯ ಮೊಂಡಿಯೊ ಮತ್ತು ರೇಂಜ್ ರೋವರ್ ಕಂಪನಿಯ ಸ್ಪೋರ್ಟ್ ಕಾರುಗಳನ್ನು ಸಹ ಪರೀಕ್ಷಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯದರಲ್ಲಿಯೇ ಮತ್ತಷ್ಟು ಕಂಪನಿಗಳು ಈ ಕಾರ್ಯಕ್ಕೆ ಕೈಜೋಡಿಸಲಿವೆ ಎನ್ನಲಾಗಿದೆ.

ಆಟೋನಮಸ್ ತಂತ್ರಜ್ಞಾನ ಪರೀಕ್ಷೆಗೆ ತನ್ನ ಹೆಕ್ಸಾ ಕಾರನ್ನು ಬಳಸಿಕೊಂಡ ಟಾಟಾ

ಟಾಟಾ ಮೋಟರ್ಸ್ ಮತ್ತು ಲ್ಯಾಂಡ್ ರೋವರ್ ಕಂಪನಿಗಳು ಸ್ವತಂತ್ರವಾಗಿ ಅಭಿವೃದ್ಧಿ ಮತ್ತು ಯು.ಕೆ ರಸ್ತೆಗಳಲ್ಲಿ ಸ್ವಾಯತ್ತ ತಂತ್ರಜ್ಞಾನದ ಪರೀಕ್ಷೆಯನ್ನು ಪ್ರಾರಂಭಿಸಿವೆ. ಆದರೆ, ಎಲ್ಲಾ ಸಮಯದಲ್ಲೂ ಸ್ಟೀರಿಂಗ್ ವೀಲ್ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾರಿನಲ್ಲಿ ತರಬೇತಿ ಪಡೆದ ಚಾಲಕರನ್ನು ನೇಮಿಸಲಾಗಿದೆ.

ಆಟೋನಮಸ್ ತಂತ್ರಜ್ಞಾನ ಪರೀಕ್ಷೆಗೆ ತನ್ನ ಹೆಕ್ಸಾ ಕಾರನ್ನು ಬಳಸಿಕೊಂಡ ಟಾಟಾ

ಆಟೋನಮಸ್ ತಂತ್ರಜ್ಞಾನಕ್ಕೆ ಅಗತ್ಯವಾದ ನವೀಕರಣಗಳೊಂದಿಗೆ ಈ ಹೆಕ್ಸಾ ಕಾರನ್ನು ಪರೀಕ್ಷಿಸುತ್ತಿದ್ದು, ಕಾರಿನ ಒಳಭಾಗದಲ್ಲಿ ಅಪ್‌ಡೇಟ್ ಆಗಿರುವಂತಹ ದೊಡ್ಡ ಕೇಂದ್ರೀಯ ಪರದೆಯೊಂದಿಗೆ ಇನ್ಫೋಟೈನ್ಮೆಂಟ್ ಸೆಟಪ್ ಇರಿಸಲಾಗಿದ್ದು, ಇದು ಸಂವೇದಕಗಳನ್ನು ಸಂಗ್ರಹಿಸಿ ಡೇಟಾವನ್ನು ಪ್ರಸಾರ ಮಾಡುತ್ತದೆ.

ಆಟೋನಮಸ್ ತಂತ್ರಜ್ಞಾನ ಪರೀಕ್ಷೆಗೆ ತನ್ನ ಹೆಕ್ಸಾ ಕಾರನ್ನು ಬಳಸಿಕೊಂಡ ಟಾಟಾ

ಟಾಟಾ ಮೋಟಾರ್ಸ್ ಸಂಸ್ಥೆಯು ಆಟೋನಮಸ್ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿದ್ದು, ಅದರಲ್ಲಿಯೂ ತನ್ನ ಹೊಸ ಕಾರುಗಳ ಮೇಲೆ ಈ ತಂತ್ರಜ್ಞಾನ ಪರೀಕ್ಷೆ ನೆಡೆಸುತ್ತಿರುವ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಆಟೋನಮಸ್ ತಂತ್ರಜ್ಞಾನ ಪರೀಕ್ಷೆಗೆ ತನ್ನ ಹೆಕ್ಸಾ ಕಾರನ್ನು ಬಳಸಿಕೊಂಡ ಟಾಟಾ

ಯುಕೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆಯಾದರೂ, ಅಸ್ತವ್ಯಸ್ತವಾಗಿರುವ ಭಾರತೀಯ ರಸ್ತೆಗಳಲ್ಲಿ ಈ ಕಾರುಗಳು ಎಷ್ಟರ ಮಟ್ಟಿಗೆ ಕಾರ್ಯಗತಗೊಳ್ಳುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

Most Read Articles

Kannada
Read more on ಟಾಟಾ
English summary
Tata Motors is extensively developing electric vehicle (EV) and autonomous technology at its research centre in the UK. While the Tata Tiago is being tested for its EV technology, the latest to join is the Tata Hexa, but this time the SUV has been put test its autonomous capabilities.
Story first published: Friday, November 17, 2017, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X