ಎಲೆಕ್ಟ್ರಿಕ್ ಬಸ್ ನಿರ್ಮಾಣಕ್ಕಾಗಿ ಒಂದಾದ ಆಟೋ ಮೊಬೈಲ್ ದಿಗ್ಗಜರು..!!

Written By:

ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ವಿಶೇಷ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್, ಅಶೋಕ್‌ ಲೈಲ್ಯಾಂಡ್‌ ಮತ್ತು ಮಹೀಂದ್ರಾ ಜೊತೆಗೂಡುತ್ತಿವೆ.

ಪರಿಸರ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಅತಿ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದ್ದು, ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಅಶೋಕ್ ಲೈಲ್ಯಾಂಡ್ ಒಂದಾಗಿ ಎಲೆಕ್ಟ್ರಿಕ್ ಬಸ್ ನಿರ್ಮಾಣಕ್ಕಾಗಿ ಬೃಹತ್ ಯೋಜನೆ ರೂಪಿಸಿವೆ.

ಸಾರಿಗೆ ಬಸ್‌ಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಅಶೋಕ್ ಲೈಲ್ಯಾಂಡ್, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಜೊತೆಗೂಡಿ ವಿನೂತನ ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕ್ ಬಸ್ ನಿರ್ಮಾಣ ಮಾಡುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಇದಕ್ಕಾಗಿ ವಿಶೇಷ ಯೋಜನೆ ರೂಪಿಸಿರುವ ಆಟೋ ಮೊಬೈಲ್ ದಿಗ್ಗಜರಾದ ಅಶೋಕ್ ಲೈಲ್ಯಾಂಡ್, ಟಾಟಾ ಮತ್ತು ಮಹೀಂದ್ರಾ, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಮಾರುಕಟ್ಟೆ ಪರಿಚಯಿಸಲಿವೆ.

ಎಲೆಕ್ಟ್ರಿಕ್ ಬಸ್ ನಿರ್ಮಾಣಕ್ಕಾಗಿ ದೇಶಿಯ ತಂತ್ರಜ್ಞಾನವನ್ನೇ ಬಳಕೆ ಮಾಡಲು ನಿರ್ಧರಿಸುವ ಮೂರು ಸಂಸ್ಥೆಗಳು, ಯಾವುದೇ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಒಪ್ಪಂದಕ್ಕೂ ಮುಂದಾಗದಿರುವುದು ಮತ್ತೊಂದು ವಿಶೇಷ.

ಈಗಾಗಲೇ ಟಾಟಾ ಕೂಡಾ ಕೆಲವು ಎಲೆಕ್ಟ್ರಿಕ್ ಬಸ್ ನಿರ್ಮಾಣ ಮಾಡಿದ್ದು, ಸದ್ಯ ಹಿಮಾಚಲ ಪ್ರದೇಶ ಸಾರಿಗೆ ಸಂಸ್ಥೆಗೆ ತನ್ನ ಎಲೆಕ್ಟ್ರಿಕ್ ಬಸ್‌ಗಳನ್ನು ಮಾರಾಟ ಮಾಡಿದೆ.

ಈ ಮೂಲಕ ಎಲೆಕ್ಟ್ರಿಕ್ ಬಸ್‌ಗಳಿಗೆ ಸಾಕಷ್ಟು ಬೇಡಿಕೆ ಇರುವುದನ್ನು ಅರಿತಿರುವ ಟಾಟಾ ಸಂಸ್ಥೆಯು, ಮಹೀಂದ್ರಾ ಮತ್ತು ಅಶೋಕ್ ಲೈಲ್ಯಾಂಡ್ ತಂತ್ರಜ್ಞಾನದೊಂದಿಗೆ ಮತ್ತಷ್ಟು ಉತ್ಕೃಷ್ಟ ಗುಣಮಟ್ಟಣದ ಬಸ್ ನಿರ್ಮಾಣದ ಗುರಿಹೊಂದಿದೆ.

ಇನ್ನು ಎಲೆಕ್ಟ್ರಿಕ್ ಬಸ್‌ಗಳ ನಿರ್ಮಾಣದ ಮೇಲೆ ಕೇಂದ್ರ ಸರ್ಕಾರ ಕೂಡಾ ವಿಶೇಷ ರಿಯಾಯ್ತಿ ಕೂಡಾ ನೀಡುತ್ತಿದ್ದು, ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಇಂತಹ ಮಹತ್ವದ ಯೋಜನೆಗಳನ್ನು ಪ್ರೋತ್ಸಾಹಿಸುತ್ತಿದೆ.

English summary
Read in Kannada about Indian automobile giant joins for the electric bus.
Story first published: Thursday, June 8, 2017, 18:01 [IST]
Please Wait while comments are loading...

Latest Photos