ಟಾಟಾ ಗ್ರಾಹಕರಿಗೆ ಭರ್ಜರಿ ಆಫರ್- ಬೆಂಗಳೂರಿನಲ್ಲಿ ನಡೆಯಲಿದೆ ಉಚಿತ ಕಾರು ಚೆಕ್ ಅಪ್ ಶಿಬಿರ..!

ಗ್ರಾಹಕರಿಗೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಭಾರತೀಯರ ಮನಗೆದ್ದಿರುವ ಟಾಟಾ ಮೋಟಾರ್ಸ್, ಇದೀಗ ಮತ್ತೊಂದು ಉಚಿತ ಸೌಲಭ್ಯವನ್ನು ನೀಡುತ್ತಿದೆ.

By Praveen

ಗ್ರಾಹಕರಿಗೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಭಾರತೀಯರ ಮನಗೆದ್ದಿರುವ ಟಾಟಾ ಮೋಟಾರ್ಸ್, ಇದೀಗ ಮತ್ತೊಂದು ಉಚಿತ ಸೌಲಭ್ಯವನ್ನು ನೀಡುತ್ತಿದೆ.

ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್

ದೇಶಾದ್ಯಂತ ಮಾನ್ಸೂನ್ ಆರಂಭವಾಗಿದ್ದು, ಈ ಹಿನ್ನೆಲೆ ತನ್ನ ಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಟಾಟಾ ಸಂಸ್ಥೆಯು ಉಚಿತ ಕಾರು ಚೆಕ್ ಅಪ್ ಶಿಬಿರವನ್ನು ಹಮ್ಮಿಕೊಂಡಿದೆ.

ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್

ದೇಶದ ವಿವಿಧ ನಗರಗಳಲ್ಲಿ ನಡೆಯಲಿರುವ ಟಾಟಾ ಮೋಟಾರ್ಸ್ ಉಚಿತ ಕಾರು ಚೆಕ್ ಅಪ್ ಶಿಬಿರವು ಬೆಂಗಳೂರಿನಲ್ಲಿ ಕೂಡಾ ನಡೆಯಲಿದ್ದು, ಇದೇ ತಿಂಗಳು 12 ರಿಂದ 21ರ ವರೆಗೆ ಹಮ್ಮಿಕೊಳ್ಳಲಾಗಿದೆ.

ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್

ಶಿಬಿರದಲ್ಲಿ ಕಾರು ಚೆಕ್ ಅಪ್ ಮಾತ್ರ ಉಚಿತವಾಗಿರಲಿದ್ದು, ಟಾಟಾ ಉತ್ಪಾದಿತ ಬಿಡಿಭಾಗಗಳು ಮತ್ತು ಲೆಬರ್ ಚಾರ್ಜ್‌ಗಳ ಮೇಲೆ ಶೇ.20ರಷ್ಟು ರಿಯಾಯ್ತಿ ದೊರೆಯಲಿದೆ.

ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್

ಉಚಿತ ಕಾರು ಚೆಕ್ ಅಪ್ ಶಿಬಿರದಲ್ಲಿ ಖ್ಯಾತ ಆಟೋ ಮೊಬೈಲ್ ತಂತ್ರಜ್ಞರು ಭಾಗಿಯಾಗಲಿದ್ದು, ಯಾವುದೇ ಶುಲ್ಕವಿಲ್ಲದೇ ಟಾಟಾ ಗ್ರಾಹಕರಿಗೆ ಅಗತ್ಯ ಮಾಹಿತಿ ನೀಡಲಿದ್ದಾರೆ.

ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್

ಇದಕ್ಕಾಗಿ ಬೃಹತ್ ಯೋಜನೆ ರೂಪಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ದೇಶಾದ್ಯಂತ 293 ನಗರಗಳಲ್ಲಿ 525 ವರ್ಕ್‌ಶಾಪ್‌ಗಳು ತೆರೆದಿದ್ದು, ಟಾಟಾ ಕಾರುಗಳ ಯಾವುದೇ ರೀತಿಯ ಸಮಸ್ಯೆಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ.

ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್

ಒಂದು ವೇಳೆ ನೀವು ಕೂಡಾ ಟಾಟಾ ಗ್ರಾಹಕರಾಗಿದ್ದಲ್ಲಿ ಉಚಿತ ಕಾರು ಚೆಕ್ ಶಿಬಿರದಲ್ಲಿ ಭಾಗಿಯಾಗಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಟಾಟಾ ಮೋಟಾರ್ಸ್ ಡೀಲರ್ಸ್ ಬಳಿ ಸಂಪರ್ಕಿಸಬಹುದಾಗಿದೆ.

Article Published On: Thursday, July 6, 2017, 14:26 [IST]
English summary
Read in Kannada about Tata Motors Announces Nationwide Free Monsoon Checkup For Passenger Vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+