ಎಎಂಟಿ ಆಯ್ಕೆಯೊಂದಿಗೆ ಟಾಟಾ ನೆಕ್ಸಾನ್ ಬಿಡುಗಡೆ ?

Written By:

ಟಾಟಾ ನೆಕ್ಸಾನ್ ಕಾರು ಸದ್ಯ ಇರುವಂತಹ 1.2 ಲೀಟರ್ REVOTRON ಮತ್ತು 1.5 ಲೀಟರ್ REVOTORQ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಮಾತ್ರ ಬಿಡುಗಡೆಗೊಳ್ಳಲಿದೆ.

ಎಎಂಟಿ ಆಯ್ಕೆಯೊಂದಿಗೆ ಟಾಟಾ ನೆಕ್ಸಾನ್ ಬಿಡುಗಡೆ ?

ಟಾಟಾ ಕಂಪನಿ ತನ್ನ ಬಹುನಿರೀಕ್ಷಿತ ನೆಕ್ಸನ್ ಕಾಂಪಾಕ್ಟ್ SUV ಕಾರನ್ನು ಸದ್ಯದರಲ್ಲಿಯೇ ಬಿಡುಗಡೆಗೊಳಿಸಿದ್ದು, ಈ ಕಾರನ್ನು ಮುಂದಿನ ವರ್ಷದ ಏಪ್ರಿಲ್ ಕೊನೆಯಲ್ಲಿ AMT(ಸ್ವಯಂಚಾಲಿತ ಮ್ಯಾನುಯಲ್ ಟ್ರಾನ್ಸ್ಮಿಷನ್) ಆಯ್ಕೆಯೊಂದಿಗೆ ಅನಾವರಣಗೊಳಿಸಿದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಎಎಂಟಿ ಆಯ್ಕೆಯೊಂದಿಗೆ ಟಾಟಾ ನೆಕ್ಸಾನ್ ಬಿಡುಗಡೆ ?

ನೆಕ್ಸಾನ್ ಕಾರು ಮೂರು ಸಿಲಿಂಡರ್ 1.2 ಲೀಟರ್ ಟರ್ಬೊಚಾರ್ಜ್ಡ್ REVOTRON Petrol ಎಂಜಿನ್ ಮತ್ತು ನಾಲ್ಕು ಸಿಲಿಂಡರ್ 1.5 ಲೀಟರ್ REVOTORQ Diesel ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.

ಎಎಂಟಿ ಆಯ್ಕೆಯೊಂದಿಗೆ ಟಾಟಾ ನೆಕ್ಸಾನ್ ಬಿಡುಗಡೆ ?

ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್‌ಗಳು 108.5 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದ್ದು, 6 ಸ್ಪೀಡ್ ಓವರ್ ಡ್ರೈವ್ ಮಾನ್ಯುಯಲ್ ಗೇರ್‌ಬಾಕ್ಸ್ ಹೊಂದಿರಲಿವೆ.

ಎಎಂಟಿ ಆಯ್ಕೆಯೊಂದಿಗೆ ಟಾಟಾ ನೆಕ್ಸಾನ್ ಬಿಡುಗಡೆ ?

ಈ ಹಬ್ಬದ ಋತುವಿನಲ್ಲಿ ಅಮೋಘವಾಗಿ ವಾಹನ ಮಾರುಕಟ್ಟಗೆ ಪ್ರವೇಶ ಮಾಡಲಿರುವ ಈ ಕಾರು 44 ಲೀಟರ್ ಫ್ಯೂಯೆಲ್ ಟ್ಯಾಂಕ್ ಕೆಪ್ಯಾಸಿಟಿ ಹೊಂದಿರಲಿದೆ. ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ರೀತಿಯ ಡ್ರೈವಿಂಗ್ ಮೋಡ್‌ಗಳಲ್ಲಿ ಈ ಕಾರಿನ ಚಾಲನೆ ಮಾಡಬಹುದು.

ಎಎಂಟಿ ಆಯ್ಕೆಯೊಂದಿಗೆ ಟಾಟಾ ನೆಕ್ಸಾನ್ ಬಿಡುಗಡೆ ?

ಇನ್ನು ಈ ಕಾರಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರು ರಿವರ್ಸ್ ಕ್ಯಾಮೆರಾ, 6.5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ HD ಡಿಸ್‌ಪ್ಲೇ, ಆಪಲ್ ಕಾರ್‌ಪ್ಲೇ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಎಎಂಟಿ ಆಯ್ಕೆಯೊಂದಿಗೆ ಟಾಟಾ ನೆಕ್ಸಾನ್ ಬಿಡುಗಡೆ ?

ಈ ಕಾರು ಧ್ವನಿ ನೆರವು ಇರುವಂತಹ ಆಂಡ್ರಾಯ್ಡ್ ಆಟೊ, ಸ್ವಯಂಚಾಲಿತ ಹವಾಮಾನ ಮೇಲ್ವಿಚಾರಣೆ ಮತ್ತು ಟಿಲ್ಟ್ ಮಾಡಬಹುದಾದ ಸ್ಟೀರಿಂಗ್ ಪಡೆಯುತ್ತದೆ.

ಎಎಂಟಿ ಆಯ್ಕೆಯೊಂದಿಗೆ ಟಾಟಾ ನೆಕ್ಸಾನ್ ಬಿಡುಗಡೆ ?

ಈ ಕಾರಿನಲ್ಲಿ ಹೆಚ್ಚು ಸುರಕ್ಷತೆ ಆಯ್ಕೆಗಳನ್ನು ನೀಡಲಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್ಸ್ ಮತ್ತು ಎಬಿಎಸ್ ಜೊತೆ ಈಬಿಡಿ ಸ್ಟ್ಯಾಂಡರ್ಡ್ ಆಯ್ಕೆಯಾಗಿವೆ. ಬಿಡುಗಡೆಯ ನಂತರ ಈ ಕಾರು ಮಾರುತಿ ಸುಜುಕಿ ವಿಟಾರಾ ಬ್ರೇಝ ಮತ್ತು ಫೋರ್ಡ್ ಇಕೊ ಸ್ಪೋರ್ಟ್ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

Read more on ಟಾಟಾ tata
English summary
Tata Motors will also introduce AMT variant of it much-anticipated sub-4 meter compact SUV, Nexon by the end of the financial year 17-18, Tata Motors confirmed.
Story first published: Friday, July 28, 2017, 12:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark