ಟಾಟಾ ನೆಕ್ಸನ್ ಬಿಡುಗಡೆಗೆ ದಿನಗಣನೆ- ಇಂದಿನಿಂದ ಬುಕ್ಕಿಂಗ್ ಶುರು..!!
ಭಾರತದ ಅತಿ ದೊಡ್ಡ ವಾಹನ ಸಂಸ್ಥೆಯಾದ ಟಾಟಾ ಮೋಟಾರ್ಸ್ ಅತಿ ನೂತನ ನೆಕ್ಸನ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಪರಿಚಯಿಸುತ್ತಿದ್ದು, ಕಾರು ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
ಭಾರತದ ಅತಿ ದೊಡ್ಡ ವಾಹನ ಸಂಸ್ಥೆಯಾದ ಟಾಟಾ ಮೋಟಾರ್ಸ್ ಅತಿ ನೂತನ ನೆಕ್ಸನ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಪರಿಚಯಿಸುತ್ತಿದ್ದು, ಕಾರು ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.ಈ ನಡುವೆ ಹೊಸ ಕಾರು ಖರೀದಿಗಾಗಿ ಅಧಿಕೃತವಾಗಿ ಬುಕ್ಕಿಂಗ್ ಕೂಡಾ ಆರಂಭಿಸಲಾಗಿದೆ.

ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ನೆಕ್ಸನ್ ಎಸ್‌ಯುವಿ ಕಾರು ಮಾದರಿಯು ಟಾಟಾ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದು, ಮುಂಬರುವ ಉತ್ಸವ ದಿನಗಳಲ್ಲಿ ಬಿಡುಗಡೆಯಾಗಿ ಸಜ್ಜುಗೊಳ್ಳುತ್ತಿದೆ. ಹೀಗಾಗಿ ನೆಕ್ಸನ್ ಖರೀದಿಸುವ ಗ್ರಾಹಕರು ಇಂದಿನಿಂದಲೇ ರೂ.11 ಸಾವಿರ ಮುಂಗಡದೊಂದಿಗೆ ನಿಮ್ಮ ನೆಚ್ಚಿನ ಕಾರುನ್ನು ಕಾಯ್ದಿರಿಸಬಹುದಾಗಿದೆ.

ಈ ಸಂಬಂಧ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಗ್ರಾಹಕರನ್ನು ಸೆಳೆಯಲು ಟಾಟಾ ಹತ್ತು ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ಹೊಸ ಕಾರು ಮಾರಾಟದಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ತವಕದಲ್ಲಿದೆ ಎನ್ನಬಹುದು.

ಇನ್ನು ನೆಕ್ಸನ್ ಕಾರು ಕೂಡಾ ಭಾರತೀಯ ಗ್ರಾಹಕನ್ನು ಸೆಳೆಯುವ ಎಲ್ಲ ಲಕ್ಷಣ ಹೊತ್ತು ಮಾರುಕಟ್ಟೆಗೆ ಪ್ರವೇಶಪಡೆಯುತ್ತಿದ್ದು, ಐದು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
Recommended Video


ಮಲ್ಟಿ ಡ್ರೈವ್ ಮೋಡ್
ಚಾಲಕನ ಅಗತ್ಯಗಳಿಗಾನುಸಾರವಾಗಿ ಇಕೊ, ಸಿಟಿ ಮತ್ತು ಸ್ಪೋರ್ಟ್‌ಗಳೆಂಬ ಬಹು ಚಾಲನಾ ವಿಧಗಳನ್ನು ಟಾಟಾ ನೆಕ್ಸನ್‌ನಲ್ಲಿ ಒದಗಿಸಲಾಗಿದೆ. ಸ್ಪೋರ್ಟ್ ಮೋಡ್‌ನಲ್ಲಿ ಗರಿಷ್ಠ ಶಕ್ತಿಯನ್ನು ನೀಡಲಿದ್ದು, ಸಿಟಿ ಡ್ರೈವ್ ನಗರ ಚಾಲನೆಗೆ ಯೋಗ್ಯವೆನಿಸಲಿದೆ. ಅಂತಯೇ ಇಕೊ ಮೋಡ್‌ನಲ್ಲಿ ಇಂಧನ ಉಳಿತಾಯಕ್ಕೆ ಆದ್ಯತೆ ಕೊಡಲಾಗಿದೆ.

ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್
ಹೊಂದಾಣಿಸಬಹುದಾದ 6.5 ಇಂಚುಗಳ ಹೆಚ್‌ಡಿ ಟಚ್ ಸ್ಕ್ರೀನ್ ಡಿಸ್‌ಪ್ಲೇ, ಮಾಹಿತಿ ಮನರಂಜನಾ ಪರದೆಯ ಬಳಕೆಯನ್ನು ಹೆಚ್ಚು ಸುಲಲಿತವಾಗಿಸುವುದಲ್ಲದೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಂಜಿನ್
ನೂತನ ಟಾಟಾ ನೆಕ್ಸನ್ ಎರಡು ಹೊಸ ಎಂಜಿನ್‌ಗಳಿಂದ ನಿಯಂತ್ರಿಸಲ್ಪಡಲಿದೆ. 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ರೆವೊಟ್ರಾನ್ ಮತ್ತು 1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ ಹೊಸತಾದ ಆರು ಸ್ಪೀಡ್ ಗೇರ್ ಬಾಕ್ಸ್ ಪರಿಚಯಿಸಲಾಗಿದೆ.

ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ
ಟಿಯಾಗೊ ಹಾಗೂ ಟಿಗೋರ್ ಮಾದರಿಯಲ್ಲಿರುವಂತೆಯೇ ನೆಕ್ಸನ್ ಕಾರಿನಲ್ಲಿ ಅತಿ ನೂತನ ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ ಆಳವಡಿಸಲಾಗಿದೆ. ಹಾಗೆಯೇ 8 ಸ್ಪೀಡ್ ಸಿಸ್ಟಂ ಆಂಡ್ರಾಯ್ಡ್ ಆಟೋ ಮತ್ತು ಶೀಘ್ರದಲ್ಲೇ ಆಪಲ್ ಕಾರ್ ಪ್ಲೇ ಲಭ್ಯವಾಗಲಿದೆ.

ಬೃಹತ್ತಾದ ಸೆಂಟ್ರಲ್ ಕನ್ಸಾಲ್
ಐಷಾರಾಮಿ ಹೈ ಎಂಡ್ ಕಾರಿನಲ್ಲಿರುವಂತೆಯೇ ಬೃಹತ್ತಾದ ಸೆಂಟ್ರಲ್ ಕನ್ಸಾಲ್ ವ್ಯವಸ್ಥೆಯನ್ನು ನೀಡಲಾಗಿದ್ದು, ಇದರಿಂದ ಟಾಟಾ ನೆಕ್ಸನ್‌ಗೆ ಹೆಚ್ಚಿನ ಕ್ರೀಡಾತ್ಮಕ ಹಾಗೂ ಪ್ರೀಮಿಯಂ ಶೈಲಿ ಲಭ್ಯವಾಗಲಿದೆ ಎನ್ನಬಹುದು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ನೆಕ್ಸನ್ ಅತ್ಯುತ್ತಮ ಮಾದರಿಯಾಗುವ ನೀರಿಕ್ಷೆಯಿದ್ದು, ಸ್ಪರ್ಧಾತ್ಮಕ ಬೆಲೆಗಳ ಮೂಲಕ ಪ್ರಮುಖ ಕಾರು ಮಾದರಿಗಳಾದ ಹ್ಯುಂಡೈ ಕ್ರೇಟಾ, ಫೋರ್ಡ್ ಇಕೋ ಸ್ಪೋರ್ಟ್‌ಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿವೆ.


Click it and Unblock the Notifications