ಬಿಡುಗಡೆಗೂ ಮುನ್ನ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ತಾಂತ್ರಿಕ ಅಂಶಗಳು ಸೋರಿಕೆ

Written By:

ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಸದ್ಯದಲ್ಲೇ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಈ ನಡುವೆ ಹೊಸ ಕಾರಿನ ತಾಂತ್ರಿಕ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ತಾಂತ್ರಿಕ ಅಂಶಗಳಲ್ಲಿ ಸೋರಿಕೆ

ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗಕ್ಕೆ ಮತ್ತೊಂದು ಹೊಸ ಪರಿಚಯ ಮಾಡುತ್ತಿರುವ ಟಾಟಾ ಮೋಟಾರ್ಸ್, ಸುಧಾರಿತ ವಿನ್ಯಾಸಗಳನ್ನು ಹೊಂದಿರುವ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಮಾದರಿಯನ್ನು ಬಿಡುಗೊಳಿಸುವ ನಿಟ್ಟಿನಲ್ಲಿ ಮೊನ್ನೆಯಷ್ಟೇ ಸ್ಪಾಟ್ ಟೆಸ್ಟಿಂಗ್ ನಡೆಸಿತ್ತು.

ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ತಾಂತ್ರಿಕ ಅಂಶಗಳಲ್ಲಿ ಸೋರಿಕೆ

ಸ್ಪಾಟ್ ಟೆಸ್ಟಿಂಗ್ ನಡೆಸಿದ ಬೆನ್ನಲ್ಲೇ ಇದೀಗ ತಾಂತ್ರಿಕ ಅಂಶಗಳನ್ನು ಹೊಂದಿರುವ ಕೈಪಿಡಿಯೊಂದು ಸೋರಿಕೆಯಾಗಿದ್ದು, ಎಂಜಿನ್ ವಿವರಗಳು, ಕಾರಿನ ವಿನ್ಯಾಸಗಳು ಮತ್ತು ಹೊರ ಮೈ ವೈಶಿಷ್ಟ್ಯತೆಗಳು ಹೇಗಿವೆ ಎಂಬುವುದು ಬಹಿರಂಗಗೊಂಡಿವೆ.

ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ತಾಂತ್ರಿಕ ಅಂಶಗಳಲ್ಲಿ ಸೋರಿಕೆ

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಲಭ್ಯವಿರಲಿದ್ದು, ಬ್ಲ್ಯಾಕ್ ಬಣ್ಣದ ರೂಫ್ ಮತ್ತು ಮ್ಯಾನುವಲ್ ಆಪರೇಟ್ ಮಾಡಬಹುದಾದ ರಿರ್ ವ್ಯೂವ್ ಮಿರರ್ ಅನ್ನು ಹೊಂದಿರಲಿದೆ.

ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ತಾಂತ್ರಿಕ ಅಂಶಗಳಲ್ಲಿ ಸೋರಿಕೆ

ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್‌ನಲ್ಲಿ ಆ್ಯಂಟಿ ಗೇರ್ ವ್ಯವಸ್ಥೆಯನ್ನು ನೀಡಲಾಗಿದ್ದು, ಬ್ಲ್ಯಾಕ್ ಬಣ್ಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಹೊಸ ಮಾದರಿಯನ್ನಾಗಿಸುವ ಬಗ್ಗೆ ಸುಳಿವು ಕೊಟ್ಟಿದೆ.

Recommended Video - Watch Now!
2017 Hyundai Verna Launched In India - DriveSpark
ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ತಾಂತ್ರಿಕ ಅಂಶಗಳಲ್ಲಿ ಸೋರಿಕೆ

ಇನ್ನು ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಒಳ ವಿನ್ಯಾಸಗಳ ಬಗೆಗೆ ಹೇಳುವುದಾದರೇ ಆಧುನಿಕ ಸ್ಪರ್ಶ ನೀಡಲಾಗಿದ್ದು, ಫ್ಯಾಬ್ರಿಕ್ ಸೀಟುಗಳು, ವ್ಯಾನಿಟಿ ಮಿರರ್ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 14 ಇಂಚಿನ್ ಚಕ್ರಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ತಾಂತ್ರಿಕ ಅಂಶಗಳಲ್ಲಿ ಸೋರಿಕೆ

ಎಂಜಿನ್

ಪೆಟ್ರೋಲ್ ಮಾದರಿಯು 1.2-ಲೀಟರ್ ರಿವೊಟ್ರೋನ್ ಎಂಜಿನ್ ಹೊಂದಿರಲಿದ್ದು, 83-ಬಿಎಚ್‌ಪಿ ಮತ್ತು 114-ಬಿಎಚ್‌ಪಿ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಹಾಗಿಯೇ ಡೀಸೆಲ್ ಮಾದರಿಯು 1.5-ಲೀಟರ್ ರಿವೊಟ್ರೋನ್ ಎಂಜಿನ್ ಹೊಂದಿದ್ದು, 68-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ.

ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ತಾಂತ್ರಿಕ ಅಂಶಗಳಲ್ಲಿ ಸೋರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಹೊಸ ಅಧ್ಯಾಯ ಶುರು ಮಾಡಲಿರುವ ಟಾಟಾ ಮೋಟಾರ್ಸ್, ಅತ್ಯುತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಮಾದರಿ ಮಾರಾಟದಲ್ಲಿ ಹೊಸ ಯಶಸ್ಸು ಕಾಣುವ ತವಕದಲ್ಲಿದೆ.

English summary
Read in Kannada about Tata Tiago Wizz Limited Edition Features Leaked.
Story first published: Tuesday, August 29, 2017, 15:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark