6 ವರ್ಷದ ಬಾಲಕನ ಆಸೆಯನ್ನು ಕೊನೆಗೂ ಈಡೇರಿಸಿದ ಇತಿಹಾದ್ ಏರ್‌ವೇಸ್
ಆ ಬಾಲಕನಿಗೆ ಇನ್ನು ಕೇವಲ 6 ವರ್ಷ. ಆದ್ರೆ ಆತನ ಕನಸುಗಳು ಬೆಟ್ಟದಷ್ಟಿವೆ. ಹೀಗಾಗಿಯೇ ಆತ ಅಂದುಕೊಂಡಿದ್ದನ್ನು ಸಾಧಿಸುವ ಪ್ರಯತ್ನದಲ್ಲಿದ್ದಾನೆ. ವಯಸ್ಸು ಚಿಕ್ಕದಾದ್ರೂ ಅವನ ಸಾಧನೆಯ ಹಾದಿ ಎಂತವರಿಗೂ ಸ್ಫೂರ್ತಿ ಆಗದೇ ಇರಲಾರದು.
ಆ ಬಾಲಕನಿಗೆ ಇನ್ನು ಕೇವಲ 6 ವರ್ಷ. ಆದ್ರೆ ಆತನ ಕನಸುಗಳು ಬೆಟ್ಟದಷ್ಟಿವೆ. ಹೀಗಾಗಿಯೇ ಆತ ಅಂದುಕೊಂಡಿದ್ದನ್ನು ಸಾಧಿಸುವ ಪ್ರಯತ್ನದಲ್ಲಿದ್ದಾನೆ. ವಯಸ್ಸು ಚಿಕ್ಕದಾದ್ರೂ ಅವನ ಸಾಧನೆಯ ಹಾದಿ ಎಂತವರಿಗೂ ಸ್ಫೂರ್ತಿ ಆಗದೇ ಇರಲಾರದು.

ಹೌದು.. 6 ವರ್ಷದ ಆದಮ್ ಒಂದು ದಿನದ ಮಟ್ಟಿಗೆ ಇತಿಹಾದ್ ಏರ್‍ವೇಸ್ ಕಂಪೆನಿಯ ವಿಮಾನದ ಪೈಲೆಟ್ ಆಗಿ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾನೆ. ಬಾಲಕ ವಿಮಾನವನ್ನು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.

ಬಾಲಕ ಆದಮ್ ಸಮವಸ್ತ್ರ ಧರಿಸಿ ಎ380 ವಿಮಾನನದ ಕಾಕ್ ಪಿಟ್‍ನಲ್ಲಿ ಕುಳಿತು ಸಂಭ್ರಮಿಸಿದ್ದಾನೆ. ಜೊತಗೆ ವಿಮಾನ ಕಾರ್ಯಾಚರಣಾ ವ್ಯವಸ್ಥೆ ಹಾಗೂ ತುರ್ತು ಕಾರ್ಯವಿಧಾನಗಳ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದು, ಅನೇಕ ಜನರ ಅಚ್ಚರಿಗೆ ಕಾರಣವಾಗಿದೆ ಎಂದು ಇತಿಹಾದ್ ಏರ್‌ವೆಸ್ ಹೇಳಿಕೊಂಡಿದೆ.

ಈ ಬಗ್ಗೆ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಇತಿಹಾದ್ ಸಂಸ್ಥೆಯು ಬಾಲಕನ ಆಸೆಯಂತೆ ಅವಕಾಶ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದಿದೆ.

ಇದಲ್ಲದೇ ಕಾಕ್ ಪಿಟ್‍ನಲ್ಲಿ ಕುಳಿತು ಪೈಲೆಟ್ ಸಮೀರ್ ಯಾಕ್ಲಿಫ್ ಜೊತೆಗೆ ಆದಮ್ ಕುಳಿತಿರುವ ವಿಡಿಯೋವನ್ನು ಇತಿಹಾದ್ ಕಂಪೆನಿ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅಕ್ಟೋಬರ್ 12 ರಂದು ಅಪ್ಲೋಡ್ ಮಾಡಿದ್ದು, ಇದೂವರೆಗೂ 2.1 ಕೋಟಿ ವ್ಯೂ ಕಂಡಿದ್ದು, 3 ಲಕ್ಷಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
ಓದಿರಿ- ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಈ ವಿಡಿಯೋ ನೋಡಿದ ಮಂದಿ ಈ ಬಾಲಕ ಭವಿಷ್ಯದಲ್ಲಿ ನಿಜವಾಗಿಯೂ ಇತಿಹಾದ್ ಏರ್‍ವೇಸ್‌ಗೆ ಅರ್ಹನಾದ ಕ್ಯಾಪ್ಟನ್ ಆಗುತ್ತಾನೆ. ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಕಮೆಂಟ್ ಹಾಕಿದ್ದಾರೆ.
ಓದಿರಿ-
ಇತಿಹಾದ್ ವಿಮಾನವನ್ನು ಮುನ್ನಡೆಸುತ್ತಿರುವ ಬಾಲಕನ ವಿಡಿಯೋ ಇಲ್ಲಿದೆ ನೋಡಿ.


Click it and Unblock the Notifications








